- ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ । ವಿಶ್ವದ ಅತ್ಯಂತ ಯುವರಾಷ್ಟ್ರ ಭಾರತ: ಕೇಂದ್ರ ಸಚಿವ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಜಿಎಂಐಟಿ ಕ್ಯಾಂಪಸ್‌ನಲ್ಲಿ ಮಂಗಳವಾರ ಭೀಮಸಮುದ್ರದ ಶ್ರೀಶೈಲ ಎಜುಕೇಷನ್ ಟ್ರಸ್ಟ್‌ನ ಜಿಎಂ ವಿಶ್ವವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ನೆರವೇರಿಸಿದ ನಂತರ ಜಿ.ಎಂ. ಹಾಲಮ್ಮ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾನವ ಸಂಪನ್ಮೂಲಗಳನ್ನು ನಾವು ಎಷ್ಟು ಚೆನ್ನಾಗಿ ಬೆಳೆಸುತ್ತೇವೋ, ಜಾಗತಿಕ ಮಟ್ಟದಲ್ಲೂ ಅಷ್ಟೇ ಬೆಳವಣಿಗೆ ಮತ್ತು ಅವಕಾಶಗಳನ್ನು ಕಾಣಲು ಸಾಧ್ಯ ಎಂದರು.
ಅತ್ಯಧಿಕ ವಿದೇಶಿ ವಿನಿಮಯ ಮೀಸಲು ಹಣ ಕಂಡ 4 ದೇಶಗಳಲ್ಲಿ ಭಾರತವೂ ಒಂದು. ಈ ಹಿಂದೆ ವಿದೇಶಿ ವಿನಿಮಯ ಮೀಸಲು ಕಾಣದೆ ದುರ್ಬಲ ಆರ್ಥಿಕತೆಯ ದೇಶವೆಂದು ಭಾರತ ಗುರುತಿಸಲ್ಪಡುತ್ತಿತ್ತು. ಆದರೆ, ಈಗ ಅತ್ಯಧಿಕ ವಿದೇಶಿ ವಿನಿಮಯ ಕಂಡು ಜಗತ್ತಿನ 5ನೇ ಆರ್ಥಿಕತೆಯ ಶಕ್ತಿಯಾಗಿ ಬದಲಾಗಿದೆ. ವಿಶ್ವದಲ್ಲಿ ಮಾನವ ಸಂಪನ್ಮೂಲ ಕಡಿಮೆಯಾಗಿದ್ದು, ಭಾರತ ಬೆಳವಣಿಗೆ ಕಾಣಲು ಇದೂ ಸಾಧ್ಯ ಮಾಡಿಕೊಟ್ಟಿದೆ. ಭಾರತವು ಮೂರನೇ ಪ್ರಬಲ ಆರ್ಥಿಕ ಶಕ್ತಿಯಾಗಲು ಉತ್ಪಾದನಾ ಮತ್ತು ಆರ್ಥಿಕ ಚಟುವಟಿಕೆಗಳು ನಮ್ಮ ದೇಶದಲ್ಲಿ ಪ್ರಚಂಡವಾಗಿ ಆಗಬೇಕಿದೆ ಎಂದು ಅವರು ಹೇಳಿದರು.ಜಗತ್ತಿನ ಅತ್ಯಂತ ಯುವರಾಷ್ಟ್ರ ಭಾರತ. ನಮ್ಮ ಯುವಕರ ಶಕ್ತಿ ಮತ್ತು ಪ್ರತಿಭೆ ಗುರುತಿಸಿ, ಅಂತಹವರಲ್ಲಿ ಕೌಶಲ್ಯ ಅಭಿವೃದ್ಧಿಪಡಿಸಿದಾಗ ಜಗತ್ತು ಭಾರತದ ಸೇವೆ ಮತ್ತು ಉತ್ಪನ್ನಗಳನ್ನು ಒಪ್ಪಿಕೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಉದ್ಯೋಗ ಸೃಷ್ಟಿಸಿ ಬದುಕು ಕಟ್ಟಿಕೊಡುತ್ತಿರುವ ಶಿಕ್ಷಣ ಸಂಸ್ಥೆಯಾಗಿ ಜಿಎಂಐಟಿ ಈಗ ಜಿಎಂ ವಿಶ್ವವಿದ್ಯಾಲಯವಾಗಿ ಬೃಹದಾಕಾರವಾಗಿ ಬೆಳೆದಿದೆ. ಇದಕ್ಕೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪನವರ ದೂರದರ್ಶಿತ್ವ ಕಾರಣ. ತಂದೆ ಇಚ್ಛೆಯಂತೆ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ ಮಾರ್ಗದರ್ಶನದಲ್ಲಿ ಜಿ.ಎಂ. ಪ್ರಸನ್ನಕುಮಾರ, ಜಿ.ಎಂ. ಲಿಂಗರಾಜು, ಜಿ.ಎಸ್. ಅನಿತ್ ಕುಮಾರ ಇತರರು ಸಂಸ್ಥೆ ಮುನ್ನಡೆಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರಹ್ಲಾದ ಜೋಷಿ ತಿಳಿಸಿದರು.
ಜಿಎಂ ವಿಶ್ವವಿದ್ಯಾನಿಲಯ ವಿಶಾಲವಾಗಿ ಬೆಳೆದು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಖೇನ ಅಕ್ಷರಜ್ಞಾನ ನೀಡುವ ಜೊತೆಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟು ಬದುಕು ಹಸನು ಮಾಡಲಿ. ಮಕ್ಕಳಿಗೆ ಮೀನು ಹಿಡಿದು ತಂದು ತಿನ್ನಿಸುವುದಲ್ಲ. ಮೀನು ಹಿಡಿಯುವುದನ್ನು ಕಲಿಸಬೇಕೆಂಬ ಮಾತಿದೆ. ಶಾಲಾ- ಕಾಲೇಜುಗಳಿಗೆ ಕಳಿಸಿದರಷ್ಟೇ ಕರ್ತವ್ಯ ಮುಗಿಯದು. ಮುಂದಿನ ಭವಿಷ್ಯ ಕಟ್ಟಿಕೊಳ್ಳಲು ಉದ್ಯೋಗ ಪಡೆಯುವಂತಹ ಶಕ್ತಿ ನೀಡಬೇಕಾಗಿದೆ. ಉದ್ಯೋಗ ಪಡೆಯದಿದ್ದರೆ ದೊಡ್ಡ ಸಮಸ್ಯೆಯಾಗಿ ಮಾರ್ಪಾಡಲಿದೆ. ಯಾವುದೇ ಸರಕಾರ ಉದ್ಯೋಗ ಸೃಷ್ಟಿಸುವ ಕೆಲಸವನ್ನೂ ಮಾಡಬೇಕಿದೆ. ನಮ್ಮ ದೇಶದಲ್ಲೇ ಗುಣಮಟ್ಟದ ಶಿಕ್ಷಣ ಕೊಟ್ಟಾಗ ಆ ಶಿಕ್ಷಣಕ್ಕಾಗಿ ಬೇರೆ ದೇಶಗಳಿಗೆ ನಮ್ಮ ದೇಶದಿಂದ ಹೋಗುವುದು ಕಡಿಮೆ ಆಗುವುದರ ಜೊತೆಗೆ ನಮ್ಮ ದೇಶಕ್ಕೇ ಬರುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ತಿಳಿಸಿದರು.
ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಶನ್, ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಟೆಕ್ನಾಲಜಿ ಈ ಮೂರು ಕೋರ್ಸ್‌ಗಳಿದ್ದ ಈ ಸಂಸ್ಥೆಯಲ್ಲಿ ಜಿಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜಿಎಂ ಪಾಲಿಟೆಕ್ನಿಕ್ ಕಾಲೇಜ್, ಜಿಎಂ ಪಿಯು ಕಾಲೇಜ್, ಜಿಎಂಎಸ್ ಅಕಾಡೆಮಿ ಫಸ್ಟ್ ಗ್ರೇಡ್ ಕಾಲೇಜ್, ಜಿಎಂ ಫಾರ್ಮಸಿ ಕಾಲೇಜ್, ಜಿಎಂ ಯುನಿವರ್ಸಿಟಿ ಆಗಿ ಬೆಳೆದು ವಿವಿಧ ಕೋರ್ಸ್ ಪ್ರಾರಂಭಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅನಂತಕುಮಾರ್ ಪುಣ್ಯಸ್ಮರಣೆ:
- - -
- ಡಾ. ಜಿ.ಎಂ.ಸಿದ್ದೇಶ್ವರ, ಕೇಂದ್ರ ಮಾಜಿ ಸಚಿವ
ಟಾಪ್ ಕೋಟ್
ದೇಶದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಿದ್ದು, ಬಸವಣ್ಣನವರ ಅನುಭವ ಮಂಟಪದಲ್ಲೂ ಸಹ ಹೆಣ್ಣುಮಕ್ಕಳಿಗೆ ಗೌರವ ಮತ್ತು ಮೊದಲ ಸ್ಥಾನ ನೀಡಲಾಗಿತ್ತು. ಮಹಿಳಾ ಮೀಸಲಾತಿಯಲ್ಲೂ ಮೊದಲ ಆದ್ಯತೆ ನೀಡಲಾಗಿದೆ. ವಿದ್ಯಾಭ್ಯಾಸದಲ್ಲಿ ಹೆಣ್ಣು ಮಕ್ಕಳು ಮೇಲುಗೈ ಸಾಧಿಸಬಲ್ಲರು. ಇದೇ ಸದುದ್ದೇಶದಿಂದ ಶ್ರೀಶೈಲ ಎಜುಕೇಷನ್ ಟ್ರಸ್ಟ್ ಅಂಗ ಸಂಸ್ಥೆಗಳಲ್ಲಿ ಶಿಕ್ಷಣ ಅರಸಿ ಬಂದ ವಿದ್ಯಾರ್ಥಿನಿಯರಿಗೆ ವಸತಿ ಸೌಲಭ್ಯಕ್ಕೆ ಪ್ರಾಮುಖ್ಯತೆ ಹೆಚ್ಚಾಗಿ ನೀಡಿರುವುದು ಖುಷಿ ವಿಚಾರ- ಪ್ರಹ್ಲಾದ ಜೋಷಿ, ಕೇಂದ್ರ ಸಚಿವ
- - - -12ಕೆಡಿವಿಜಿ7, 8, 9:ದಾವಣಗೆರೆ ಜಿಎಂ ವಿಶ್ವವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ನೆರವೇರಿಸಿದರು. ವಿಪಕ್ಷ ನಾಯಕ ಆರ್. ಅಶೋಕ, ಕೇಂದ್ರದ ಮಾಜಿ ಸಚಿವ ಡಿ.ಎಂ. ಸಿದ್ದೇಶ್ವರ ಇತರರು ಇದ್ದರು.
-12ಕೆಡಿವಿಜಿ10:ದಾವಣಗೆರೆ ಜಿಎಂ ವಿಶ್ವವಿದ್ಯಾಲಯದಲ್ಲಿ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ, ನೂತನ ಹಾಸ್ಟೆಲ್ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ವಿಪಕ್ಷ ನಾಯಕ ಆರ್.ಅಶೋಕ, ಕೇಂದ್ರದ ಮಾಜಿ ಸಚಿವ ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ, ಗಾಯತ್ರಿ ಸಿದ್ದೇಶ್ವರ, ಜಿ.ಎಂ.ಪ್ರಸನ್ನಕುಮಾರ, ಜಿ.ಎಂ.ಲಿಂಗರಾಜು ಇತರರು ಪಾಲ್ಗೊಂಡರು.