ಮನೆಮನಗಳಲ್ಲಿ ಕನ್ನಡತನ ಆಚರಿಸುವ ದೀಕ್ಷೆ ತೊಡಿ

KannadaprabhaNewsNetwork |  
Published : Dec 02, 2024, 01:17 AM IST
1ಕೆಆರ್ ಎಂಎನ್ 3.ಜೆಪಿಜಿರಾಮನಗರದ ನ್ಯೂ ಎಕ್ಸ್ ಫರ್ಟ್ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಕನ್ನಡ ಹಬ್ಬ, ಮಕ್ಕಳ ದಿನಾಚರಣೆ ಹಾಗೂ ಎನ್ ಎಸ್ ಎಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. | Kannada Prabha

ಸಾರಾಂಶ

ರಾಮನಗರ: ಕನ್ನಡವನ್ನು ಭಾಷಾ ದೃಷ್ಟಿಕೋನದಿಂದ ಒಗ್ಗಟ್ಟು, ಸಂಸ್ಕೃತಿ, ಗೌರವ ಮತ್ತು ಅಭಿಮಾನದ ಪ್ರತೀಕವಾಗಿ ಕಾಣುವ ಮೂಲಕ ಕನ್ನಡ ತನವನ್ನು ಮನೆ ಮನಗಳಲ್ಲಿ ನಿತ್ಯವೂ ಆಚರಿಸುವ ದೀಕ್ಷೆ ತೊಡಬೇಕು ಎಂದು ಬಂಜಾರ ಭಾಷಾ ಸಂಸ್ಕೃತಿ ಮತ್ತು ಅಕಾಡೆಮಿ ಅಧ್ಯಕ್ಷರು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿ ಡಾ. ಎ.ಆರ್.ಗೋವಿಂದಸ್ವಾಮಿ ಹೇಳಿದರು.

ರಾಮನಗರ: ಕನ್ನಡವನ್ನು ಭಾಷಾ ದೃಷ್ಟಿಕೋನದಿಂದ ಒಗ್ಗಟ್ಟು, ಸಂಸ್ಕೃತಿ, ಗೌರವ ಮತ್ತು ಅಭಿಮಾನದ ಪ್ರತೀಕವಾಗಿ ಕಾಣುವ ಮೂಲಕ ಕನ್ನಡ ತನವನ್ನು ಮನೆ ಮನಗಳಲ್ಲಿ ನಿತ್ಯವೂ ಆಚರಿಸುವ ದೀಕ್ಷೆ ತೊಡಬೇಕು ಎಂದು ಬಂಜಾರ ಭಾಷಾ ಸಂಸ್ಕೃತಿ ಮತ್ತು ಅಕಾಡೆಮಿ ಅಧ್ಯಕ್ಷರು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿ ಡಾ. ಎ.ಆರ್.ಗೋವಿಂದಸ್ವಾಮಿ ಹೇಳಿದರು.

ಪಟ್ಟಣದ ನ್ಯೂ ಎಕ್ಸ್ ಫರ್ಟ್ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ, ಕನ್ನಡ ಹಬ್ಬ, ಮಕ್ಕಳ ದಿನಾಚರಣೆ ಹಾಗೂ ಎನ್ನೆಸ್ಸೆಸ್‌ ಘಟಕದ ಉದ್ಘಾಟಿಸಿದ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಸುಜ್ಞಾನ ಸಂಪಾದನೆಗೂ ಒತ್ತು ಕೊಡಬೇಕು. ನಿರಂತರ ಅಧ್ಯಯನಶೀಲತೆ, ಸೃಜನಶೀಲತೆ, ಸಮಾಜ ಸೇವಾ ಮನೋಭಾವ, ರಾಷ್ಟ್ರಾಭಿಮಾನ ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಯುವಜನರು ಈ ನೆಲದ ಅಸ್ಥಿತ್ವ ಗಟ್ಟಿಗೊಳಿಸುವ ನಾಯಕರಾಗಬೇಕು ಎಂದು ಕರೆ ನೀಡಿದರು.

ಎಕ್ಸ್ ಫರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಡಾ.ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಭವಿಷ್ಯವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಕಟ್ಟಿಕೊಳ್ಳುವ ಸಂಕಲ್ಪ ಮಾಡಬೇಕು. ಮಾತೃಭಾಷೆಯನ್ನು ಆರಾಧಿಸುವ, ಪ್ರೀತಿಸುವ ದೃಢ ಸಂಕಲ್ಪ ಮಾಡಿ ಎಂದರು.

ರಾಮನಗರ ಕಸಾಪ ಅಧ್ಯಕ್ಷ ಬಿ.ಟಿ. ದಿನೇಶ್ ಬಿಳಗುಂಬ , ಚುಟುಕು ಕವಿ ಪೂರ್ಣಚಂದ್ರ, ಹಿರಿಯ ಗಾಯಕ ಚೌ.ಪು. ಸ್ವಾಮಿ, ಸಾಹಿತಿ ಡಾ.‌ವಿಜಯ್ ರಾಂಪುರ, ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ನ ಚಂದ್ರೇಗೌಡ, ಉಪ ಪ್ರಾಂಶುಪಾಲ ಆರ್. ಚಂದ್ರಶೇಖರ್, ಸಹಾಯಕ ಪ್ರಾಧ್ಯಾಪಕರಾದ ದಯಾನಂದ ಸ್ವಾಮಿ, ಸುಮತಿಶ್ರೀ ಹಾಗೂ ಉಪನ್ಯಾಸಕ ವೃಂದದವರು ಹಾಜರಿದ್ದರು.

ಕಾರ್ಯಕ್ರಮದ ಆರಂಭಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಶ್ರೀ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನೂರು ಅಡಿ ಉದ್ದದ ಕನ್ನಡ ಧ್ವಜ ಹಿಡಿದು ಕಲಾ ತಂಡಗಳೊಂದಿಗೆ ಗಣ್ಯರನ್ನು ವೇದಿಕೆಗೆ ಕರೆತರಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

(ಫೋಟೋ ಕ್ಯಾಪ್ಷನ್‌)

ರಾಮನಗರದ ನ್ಯೂ ಎಕ್ಸ್ ಫರ್ಟ್ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಕನ್ನಡ ಹಬ್ಬ, ಮಕ್ಕಳ ದಿನಾಚರಣೆ ಹಾಗೂ ಎನ್‌ಎಸ್‌ಎಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

PREV

Recommended Stories

12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ
ಕಪ್‌ತುಳಿತ: ಸರ್ಕಾರ ವಿರುದ್ಧ ದೋಸ್ತಿಗಳ ಪ್ರತಿಭಟನೆ