ಎಕ್ಕಾರು ಶಾಲೆಯಲ್ಲಿ ಯಕ್ಷ ಶಿಕ್ಷಣಕ್ಕೆ ಚಾಲನೆ

KannadaprabhaNewsNetwork | Published : Jun 17, 2024 1:34 AM

ಸಾರಾಂಶ

ಯಕ್ಷ ಶಿಕ್ಷಕರಾದ ರಾಮ್ ಪ್ರಕಾಶ್ ಕಲ್ಲೂರಾಯ ವಿದ್ಯಾರ್ಥಿಗಳಿಗೆ ಪ್ರಾರಂಭಿಕ ಹೆಜ್ಜೆಗಳನ್ನು ಕಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 130 ವಿದ್ಯಾರ್ಥಿಗಳು ಯಕ್ಷ ಶಿಕ್ಷಣದಲ್ಲಿ ಭಾಗವಹಿಸಿದರು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಯಕ್ಷ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವುದರೊಂದಿಗೆ ಜೀವನ ಶಿಸ್ತಿನ ಅರಿವನ್ನು ಮೂಡಿಸುತ್ತದೆ. ಯಕ್ಷಗಾನವು ಒಂದು ಅದ್ಭುತ ಕಲೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಕಟೀಲು ಎಕ್ಕಾರು ಘಟಕ ಅಧ್ಯಕ್ಷ ಗಿರೀಶ್ ಶೆಟ್ಟಿ ಹೇಳಿದರು.

ಬಡಗ ಎಕ್ಕಾರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಯಕ್ಷದ್ರುವ ಪಟ್ಲ ಫೌಂಡೇಶನ್ ಮಂಗಳೂರು ವತಿಯಿಂದ ನಡೆಯುವ ಎರಡನೇ ವರ್ಷದ ಯಕ್ಷ ಶಿಕ್ಷಣ ಕಾರ್ಯಕ್ರಮ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಬಂಟರ ಸಂಘ ಎಕ್ಕಾರಿನ ಅಧ್ಯಕ್ಷ ರತ್ನಾಕರ ಶೆಟ್ಟಿ ಉದ್ಘಾಟಿಸಿದರು. ಯಕ್ಷ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣಕ್ಕೆ ಸಂಬಂಧಿಸಿ ಪುಸ್ತಕ ಹಾಗೂ ಲೇಖನ ಸಾಮಗ್ರಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಕ್ಷಿಣ ಭಾರತ ವಲಯ ಮಟ್ಟದ ಖೋ ಖೋ ಪಂದ್ಯಾಟವು ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾನಿಲಯ ವಿಜಯವಾಡ ಆಂಧ್ರಪ್ರದೇಶದಲ್ಲಿ ನಡೆಯಲಿದ್ದು, ಖೋ ಖೋ ಪಂದ್ಯಾಟದಲ್ಲಿ ಪಾಲ್ಗೊಳ್ಳುವ 8 ಮಂದಿ ವಿದ್ಯಾರ್ಥಿಗಳನ್ನು ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾಲತಾ ಅವರಿಗೆ ಶುಭ ಹಾರೈಸಲಾಯಿತು.

ಹಿರಿಯ ಶಿಕ್ಷಕರಾದ ಪೂರ್ಣಿಮಾ ಎಚ್ಎಂ, ರಾಜಶ್ರೀ ಕೆ., ವಿದ್ಯಾಲತಾ, ವಿದ್ಯಾ ಗೌರಿ, ರಮ್ಯಾ, ಜಯಂತಿ, ನಿಶ್ಮಿತಾ, ಸುದೀಪ್ ಅಮೀನ್, ಎಕ್ಕಾರು ಘಟಕದ ಸಂಚಾಲಕರಾದ ಸತೀಶ್ ಶೆಟ್ಟಿ, ನಿತೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭರತೇಶ ಶೆಟ್ಟಿ, ಎಕ್ಕಾರು ಗ್ರಾಮ ಪಂಚಾಯಿತಿ ಸದಸ್ಯ ವಿಕ್ರಮ್ ಮಾಡ, ಶಾಲಾ ಮುಖ್ಯೋಪಾಧ್ಯಾಯರಾದ ಇಂದಿರಾ ಎನ್. ರಾವ್, ನೋಡಲ್ ಶಿಕ್ಷಕ ಡಾ. ಅನಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ರಾಜೇಂದ್ರ ಪ್ರಸಾದ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಘಟಕದ ಸಂಚಾಲಕ ನಿತೇಶ್ ಎಕ್ಕಾರು ವಂದಿಸಿದರು. ಶಿಕ್ಷಕಿ ಚಿತ್ರಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಯಕ್ಷ ಶಿಕ್ಷಕರಾದ ರಾಮ್ ಪ್ರಕಾಶ್ ಕಲ್ಲೂರಾಯ ವಿದ್ಯಾರ್ಥಿಗಳಿಗೆ ಪ್ರಾರಂಭಿಕ ಹೆಜ್ಜೆಗಳನ್ನು ಕಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 130 ವಿದ್ಯಾರ್ಥಿಗಳು ಯಕ್ಷ ಶಿಕ್ಷಣದಲ್ಲಿ ಭಾಗವಹಿಸಿದರು.

Share this article