ಕೊಪ್ಪಳ: ಮಕ್ಕಳಲ್ಲಿ ಪ್ರಜಾಪ್ರಭುತ್ವ ಮೌಲ್ಯ ಬೆಳೆಸುವಲ್ಲಿ ಶಾಲಾ ಸಂಸತ್ತು ಮಹತ್ವದ ಪಾತ್ರ ವಹಿಸುತ್ತದೆ ಎಂದು ಶ್ರೀಶಿವಶಾಂತವೀರ ಪಬ್ಲಿಕ್ (ಸಿ.ಬಿ.ಎಸ್.ಇ) ಶಾಲೆಯ ಪ್ರಾಚಾರ್ಯ ಪ್ರವೀಣ ಯರಗಟ್ಟಿ ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ನಡೆಯುವ ಪ್ರಕ್ರೀಯೆಗಳಾದ ನಾಮಪತ್ರ ಸಲ್ಲಿಕೆ, ಪ್ರಚಾರ, ಮತದಾನ ಹಾಗೂ ಫಲಿತಾಂಶಗಳ ಬಗ್ಗೆ ಮಹತ್ವದ ಅರಿವು ಮೂಡಿಸುವುದರ ಮೂಲಕ ಮಕ್ಕಳಲ್ಲಿ ಉತ್ತಮ ನಾಯಕತ್ವ ಹಾಗೂ ಜವಾಬ್ದಾರಿ ಬೆಳೆಸುತ್ತದೆ ಎಂದರು. ಶಾಲಾ ಸಂಸತ್ತಿನ ಪ್ರತಿಜ್ಞಾವಿಧಿ ಉಪಪ್ರಾಚಾರ್ಯ ಮಂಜುನಾಥ ವಿದ್ಯಾರ್ಥಿಗಳಿಗೆ ಬೋಧಿಸಿದರು.
ಶಾಲಾ ಸಂಸತ್ತಿನ ನಾಯಕನಾಗಿ ಪ್ರತಾಪ.ಸಿ, ನಾಯಕಿಯಾಗಿ ಅನನ್ಯ, ಸಾಂಸ್ಕೃತಿಕ ಮಂತ್ರಿಯಾಗಿ ಮನೋಜ ಹಾಗೂ ಲಕ್ಷ್ಮೀ, ಕ್ರೀಡಾ ಮಂತ್ರಿಯಾಗಿ ನಯನ ಹಾಗೂ ಅನಿಷಾ, ಶಾಲಾ ಶಿಸ್ತಿನ ಮಂತ್ರಿಯಾಗಿ ಸಾಯಿ ಸುಮಂತ ಹಾಗೂ ಶಮಿತಾ ಆಯ್ಕೆಯಾಗಿದ್ದಾರೆ. ಉಡಾನ್ ವಿಭಾಗದ ನಾಯಕಿಯಾಗಿ ಇಶ್ರತ್ ಉಪನಾಯಕನಾಗಿ ನಿಖಿಲ್ ಗೌಡ, ಉತ್ಸವ ವಿಭಾಗದ ನಾಯಕಿಯಾಗಿ ಪ್ರತೀಕ್ಷಾ ಉಪನಾಯಕನಾಗಿ ಫಯಾಜ್, ಉರ್ಜಿತ್ ವಿಭಾಗದ ನಾಯಕನಾಗಿ ಭರತ, ಉಪನಾಯಕಿಯಾಗಿ ಸಂಜನಾ ಸೊಪ್ಪಿಮಠ, ಉಜ್ವಲಂ ವಿಭಾಗದ ನಾಯಕನಾಗಿ ರಿಷಿಕೇ಼ಶ ಹಾಗೂ ಉಪನಾಯಕಿಯಾಗಿ ಪ್ರಾಚಿ ಆಯ್ಕೆಯಾಗಿದ್ದು ಇತರೆ ಸದಸ್ಯರಾಗಿ ಉದಯ, ಆದಿತ್ಯ, ಆರ್ಯನ್, ಚೈತ್ರಾ, ಸಿಂದೂ ತನುಶ್ರೀ ಮತ್ತು ಅರ್ಚನಾ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯ ಕಾರ್ಯದರ್ಶಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಹಾಗೂ ಸಿಬ್ಬಂದಿಯೇತರ ವರ್ಗ ಅಭಿನಂದನೆ ಸಲ್ಲಿಸಿದರು.