ಕನ್ನಡಪ್ರಭ ವಾರ್ತೆ ಮಣಿಪಾಲ
ಇದೇ ಗ್ರೌಂಡ್ 1ನೇ ಪಂದ್ಯದಲ್ಲಿ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ತಂಡವು 9 ವಿಕೆಟ್ ನಷ್ಟಕ್ಕೆ 112 ರನ್ ಮಾಡಿತು. ನಂತರ ಬ್ಯಾಟ್ ಮಾಡಿದ ಕಲ್ಲಿಕೋಟೆ ವಿವಿ ಕೇವಲ 1 ವಿಕೆಟ್ ಕಳೆದುಕೊಂಡು 113 ರನ್ ಮಾಡಿ, 9 ವಿಕೆಟುಗಳ ಜಯ ದಾಖಲಿಸಿತು.ಎ ಗ್ರೌಂಡ್‌ನ 1ನೇ ಪಂದ್ಯದಲ್ಲಿಯೂ ರೋಚಕ ಆಟ ಕಂಡುಬಂತು. ಪಂಜಾಬಿನ ಗುರು ನಾನಕ್ ದೇವ್ ವಿವಿಯ 10 ವಿಕೆಟ್ ಗಳನ್ನು ಕಳೆದುಕೊಂಡರೂ 115 ರನ್ನುಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಇದು ಸುಲಭ ಗುರಿ ಎಂದು ಭಾವಿಸಿ ಕಣಕ್ಕಿಳಿದ ಎದುರಾಳಿ ಪುಣೆಯ ಸಾವಿತ್ರಿ ಬಾಯಿ ವಿವಿ 72 ರನ್‌ಗಳನ್ನು ಮಾಡುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾನಕ್ ವಿವಿ 43 ರನ್ನುಗಳ ಜಯ ಕಂಡಿತು.
ಸಿ ಗ್ರೌಂಡಿನಲ್ಲಿ ನಡೆದ 1ನೇ ಪಂದ್ಯದಲ್ಲಿ ಲಲಿತ್ ನಾರಾಯಣ್ ಮಿತಾಲಿ ವಿವಿ ತಂಡವು 94 ರನ್‌ಗಳಿಗೆ 5 ವಿಕೇಟ್ ಒಪ್ಪಿಸಿ ಇನ್ನಿಂಗ್ಸ್ ಮುಗಿಸಿತು. ಉತ್ತರವಾಗಿ ಆಡಿದ ಕೇರಳದ ಮಹಾತ್ಮಾಗಾಂಧಿ ವಿವಿ 69 ರನ್ ಗಳಿಸಿ ಪಂದ್ಯವನ್ನು ಸೋತಿತು.ಇದೇ ಗ್ರೌಂಡಿನ 2ನೇ ಪಂದ್ಯದಲ್ಲಿ ಪಟಿಯಾಲದ ಪಂಜಾಬಿ ವಿವಿಯು 65ಕ್ಕೆ ಎಲ್ಲ ವಿಕೆಟ್ ಒಪ್ಪಿಸಿದರೆ, ಕೊಲ್ಹಾಪುರದ ಶಿವಾಜಿ ವಿವಿಯು 3 ವಿಕೆಟ್‌ಗಳಲ್ಲಿ ಗುರಿ ತಲುಪಿ ಮುಂದಿನ ಸುತ್ತಿಗೇರಿತು.