ತೊಟ್ಟಂ ಚರ್ಚ್‌ನಿಂದ ಸರ್ವಧರ್ಮ ಆಟಿಡೊಂಜಿ ದಿನ ಆಚರಣೆ

KannadaprabhaNewsNetwork |  
Published : Aug 30, 2025, 01:01 AM IST
29ತೊಟ್ಟಂ | Kannada Prabha

ಸಾರಾಂಶ

ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಚರ್ಚಿನ ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ ಸರ್ವಧರ್ಮ ಆಟಿಡೊಂಜಿ ದಿನಾಚರಣೆ ಇತ್ತೀಚೆಗೆ ನೆರವೇರಿತು.

ಉಡುಪಿ: ತುಳುನಾಡಿನ ಜನರು ಪಕೃತಿಯನ್ನು ಆರಾಧಿಸಿಕೊಂಡು ಬಂದಿದ್ದು ಇಲ್ಲಿನ ಸಂಸ್ಕೃತಿಯು ಶ್ರೇಷ್ಠತೆ ಹೊಂದಿದೆ ಎಂದು ಮಲ್ಪೆ ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ.ಡೆನಿಸ್ ಡೆಸಾ ಹೇಳಿದ್ದಾರೆ.ಚರ್ಚಿನ ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸರ್ವಧರ್ಮ ಆಟಿಡೊಂಜಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ತೊಟ್ಟಂ ಪರಿಸರದಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ಹಿಂದೆ ಆಟಿ ತಿಂಗಳು ತುಳುವರಲ್ಲಿ ಬಹಳ ಸಂಕಷ್ಟದ ಸಮಯವಾಗಿತ್ತು. ಎಡೆಬಿಡದೆ ಸುರಿಯುವ ಮಳೆ, ಬೇಸಾಯದ ಆಯಾಸ, ರೋಗ ರುಜಿನಗಳು, ಆಹಾರದ ಕೊರತೆ ಬಹಳವಿತ್ತು. ಈ ಸಂದರ್ಭ ಹಿರಿಯರು ಪ್ರಕೃತಿದತ್ತವಾಗಿ ಸಿಗುತ್ತಿದ್ದ ಗಡ್ಡೆಗೆಣಸು, ಹಲಸು, ಸೊಪ್ಪು, ತರಕಾರಿಗಳನ್ನು ತಿಂದು ತಮ್ಮ ಆರೋಗ್ಯ ಕಾಪಾಡಿಕೊಂಡಿದ್ದರು. ಆದರೆ ಇಂದಿನ ಫಾಸ್ಟ್‌ಫುಡ್‌ ಯುಗದಲ್ಲಿ ನಮ್ಮ ಮಕ್ಕಳಿಗೆ ಇದೆಲ್ಲ ಅಪಥ್ಯವಾದರೂ, ಅಂದಿನ ಸಂಕಷ್ಟದ ದಿನಗಳನ್ನು ನೆನೆಯುವುದು ಅಗತ್ಯವಾಗಿದೆ. ಸಂಸ್ಕೃತಿಯ ಕುರಿತು ಇಂದಿನ ಯುವಜನತೆಗೆ ತಿಳಿಹೇಳುವ ಕಾರ್ಯ ಇಂತಹ ಕಾರ್ಯಕ್ರಮಗಳ ಮೂಲಕ ನಡೆಯಬೇಕು ಎಂದರು.ಸಂಶೋಧಕಿ ಪ್ರಜ್ಞಾಶ್ರೀ ಮತ್ತು ಸಮನ್ವಯ ಸರ್ವಧರ್ಮ ಸೌಹಾರ್ದ ಸಮಿತಿಯ ಅಧ್ಯಕ್ಷರಾದ ರಮೇಶ್ ತಿಂಗಳಾಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಮುಸ್ಲಿಂ ಸುಮುದಾಯದ ಶಭನಾ ಬಾನು, ತೊಟ್ಟಂ ಸಂತ ಅನ್ನಮ್ಮ ಕಾನ್ವೆಂಟಿನ ಸುಪೀರಿಯರ್ ಸಿ. ಸುಷ್ಮಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲೆಸ್ಲಿ ಅರೋಜ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫರ್ನಾಂಡಿಸ್ ಉಪಸ್ಥಿತರಿದ್ದರು.ಸ್ತ್ರೀ ಸಂಘಟನೆ ಅಧ್ಯಕ್ಷ ಪ್ರಿಯಾ ರೊಡ್ರಿಗಸ್ ಸ್ವಾಗತಿಸಿದರು. ಲವೀನಾ ಫರ್ನಾಂಡಿಸ್ ವಂದಿಸಿದರು. ಶಾಂತಿ ಫರ್ನಾಂಡಿಸ್ ವ್ಯಕ್ತಿ ಪರಿಚಯ ವಾಚಿಸಿ, ಜೆನಿತ ಫರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸ್ತ್ರೀ ಸಂಘಟನೆಯ ವಿವಿಧ ಸ್ವ ಸಹಾಯ ಗುಂಪುಗಳ ಸದಸ್ಯರು ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನೊಳಗೊಂಡ, ಮಧ್ಯಾಹ್ನದ ಭೋಜನ ವ್ಯವಸ್ಥೆ ಆಯೋಜಿಸಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ