ಸರ್ವಧರ್ಮ ಸಾಮೂಹಿಕ ವಿವಾಹ ಬಡವರಿಗೆ ಸಹಕಾರಿ: ಡಾ. ವೈಜನಾಥ ಶಿವಲಿಂಗೇಶ್ವರ ಸ್ವಾಮೀಜಿ

KannadaprabhaNewsNetwork |  
Published : Apr 11, 2024, 12:48 AM IST
ಪೊಟೋ ಪೈಲ್ ನೇಮ್ ೧೦ಎಸ್‌ಜಿವಿ೧ ತಾಲೂಕಿನ ಬನ್ನೂರಿನಲ್ಲಿ ಭಾರತ ಸೇವಾ ಸಂಸ್ಥೆವತಿಯಿಂದ ದಶಮಾನೋತ್ಸವ ಸರ್ವದರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗಂಜೀಗಟ್ಟಿ ಡಾ, ವೈಜನಾಥ ಶಿವಲಿಂಗೇಶ್ವರ ಶಿವಾರ್ಚಾಯ ಶ್ರೀಗಳು ಆಶೀರ್ವಚನವನ್ನು ನೀಡಿದರು.೧೦ಎಸ್‌ಜಿವಿ೧-೧ ತಾಲೂಕಿನ ಬನ್ನೂರಿನಲ್ಲಿ ಭಾರತ ಸೇವಾ ಸಂಸ್ಥೆವತಿಯಿಂದ ದಶಮಾನೋತ್ಸವ ಸರ್ವದರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ದೇಶಿಸಿ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿದರು. ೧೦ಎಸ್‌ಜಿವಿ೧-೨ ತಾಲೂಕಿನ ಬನ್ನೂರಿನಲ್ಲಿ ಭಾರತ ಸೇವಾ ಸಂಸ್ಥೆವತಿಯಿಂದ ದಶಮಾನೋತ್ಸವ ಸರ್ವದರ್ಮ ೧೧ ಜೋಡಿ ಸಾಮೂಹಿಕ ವಿವಾಹದಲ್ಲಿ ಇದ್ದರು.  | Kannada Prabha

ಸಾರಾಂಶ

ಶಿಗ್ಗಾಂವಿ ತಾಲೂಕಿನ ಬನ್ನೂರಿನಲ್ಲಿ ಭಾರತ ಸೇವಾ ಸಂಸ್ಥೆ ವತಿಯಿಂದ ದಶಮಾನೋತ್ಸವ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶಿಗ್ಗಾಂವಿ

ಸರ್ವಧರ್ಮ ಸಾಮೂಹಿಕ ವಿವಾಹಗಳಿಂದ ಆರ್ಥಿಕ ಸ್ಥಿತಿವಂತರಲ್ಲದ ಅನೇಕ ಯುವ ಜೋಡಿಗಳ ಬಾಳಿಗೆ ಬೆಳಕಾದ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಕಾರ್ಯ ಶ್ಲಾಘನೀಯ ಎಂದು ಗಂಜೀಗಟ್ಟಿ ಡಾ. ವೈಜನಾಥ ಶಿವಲಿಂಗೇಶ್ವರ ಶಿವಾರ್ಚಾಯ ಶ್ರೀಗಳು ಹೇಳಿದರು.

ತಾಲೂಕಿನ ಬನ್ನೂರಿನಲ್ಲಿ ಭಾರತ ಸೇವಾ ಸಂಸ್ಥೆ ವತಿಯಿಂದ ದಶಮಾನೋತ್ಸವ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ನವ ವಧುವರರಿಗೆ ಆಶೀರ್ವದಿಸಿ ನಂತರ ಮಾತನಾಡಿದರು.

ಕಂಕಣ ಭಾಗ್ಯದಿಂದ ಬಹು ದೂರವೇ ಉಳಿದಿದ್ದ ಬಡವರ ಪಾಲಿನ ಆಶಾಕಿರಣವಾಗಿ, ಇಲ್ಲಿ ವರೆಗೂ ಸಾವಿರಾರು ಜೋಡಿಗಳಿಗೆ, ಕಂಕಣ ಭಾಗ್ಯ ಕರುಣಿಸಿ, ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ತನ್ಮೂಲಕ ಸಾಮಾಜಿಕ ಮಿತವ್ಯಯಕ್ಕೂ ಪ್ರೇರಕರಾಗಿ, ಸರ್ವಧರ್ಮಗಳ ವಿವಾಹಗಳನ್ನು ಒಂದೇ ವೇದಿಕೆಯಲ್ಲಿ ನೆರವೇರಿಸಿ ಸಮಾಜದ ಸಾಮರಸ್ಯಕ್ಕೂ ಸಾಕ್ಷಿಯಾಗಿದ್ದಾರೆ ಎಂದರು.

ಬಂಕಾಪುರ ಅರಳೆಲೇಹಿರೇಮಠ ರೇವಣಸಿದ್ದೇಶ್ವರ ಶ್ರೀಗಳು ಆಶೀರ್ವಚನದಲ್ಲಿ ಶ್ರೀಕಾಂತ ದುಂಡಿಗೌಡ್ರ ದಿನದ ಪ್ರತಿಕ್ಷಣವೂ ಸಮಾಜದ ಒಳಿತಿಗಾಗಿ ಚಿಂತಿಸುವ, ಸ್ವಹಿತಾಸಕ್ತಿಗಿಂತ ಪರರ ಹಿತದಲ್ಲಿಯೇ ಪರಮಾನಂದ ಕಾಣುವವರು. ತಮ್ಮ ಅಧ್ಯಕ್ಷತೆಯಲ್ಲಿ ಭಾರತ್ ಸೇವಾ ಸಂಸ್ಥೆಯ ಮೂಲಕ ಅನೇಕ ಸಮಾಜಮುಖಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವುದು ಬಾನಂಗಳದ ಭಾಸ್ಕರನ ಪ್ರಖರತೆಯಷ್ಟೇ ಸತ್ಯ ಎಂದರು. ಶಿಗ್ಗಾಂವಿ ವಿರಕ್ತಮಠದ ಸಂಗನಬಸ ಶ್ರೀಗಳು ಆಶೀರ್ವದಿಸಿ ಶ್ರೀಕಾಂತ ದುಂಡಿಗೌಡ್ರ ಬರೋಬ್ಬರಿ ೧೦ ವರ್ಷಗಳಿಂದ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿರುವ ನೂರಾರು ಜೋಡಿಗಳ ಹೃದಯದಲ್ಲಿ ಮದುವೆ ಎಂಬ ಮೂರು ಅಕ್ಷರಗಳನ್ನು ಮುದ್ರಿಸಿರುವ ಇವರ ಮಹೋನ್ನತ ಕಾರ್ಯ ಮುಂದುವರಿಯಲಿ. ದಶ ದಿಕ್ಕುಗಳಲ್ಲಿಯೂ ಇವರ ಸೇವಾ ಕಾರ್ಯ ಶರವೇಗದಲ್ಲಿ ಸಾಂಗವಾಗಿ ಸಾಗಲಿ. ಇನ್ನೊಂದಿಷ್ಟು ಸಮಾಜ ಉಪಯೋಗಿ ಕಾರ್ಯಗಳನ್ನು ನೆರವೇರಿಸಲು ಭಾರತ ಸಂಸ್ಥೆ ಆಲದ ಮರದಂತೆ ಹೆಮ್ಮರವಾಗಿ ಬೆಳೆಯಲಿ ಎಂದರು.

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಸಂಸ್ಥೆಯ ಹಣ ಬನ್ನೂರ ಗ್ರಾಮಸ್ಥರ ಸೇವೆ ಹಾಗೂ ತಾಲೂಕಿನ ಎಲ್ಲ ಶ್ರೀಗಳ ಆಶೀರ್ವಾವಾದದಿಂದ ೧೦ ವರ್ಷದಿಂದ ಸರ್ವಧರ್ಮ ಸಾಮೂಹಿಕ ವಿವಾಹ ಯಶಸ್ವಿಯಾಗಿ ನಡೆದಿದೆ. ಮೊದಲು ತಾಲೂಕಿನ ನವ ವಧುವರರು ಮಾತ್ರ ಬರುತ್ತಿದ್ದರು. ಇಂದು ಅಖಂಡ ಧಾರವಾಡ ಜಿಲ್ಲೆಯಿಂದ ಬರುತ್ತಿರುವುದು ವಿಶೇಷವಾಗಿದೆ ಎಂದರು.

ಹಿರೇಮಣಕಟ್ಟಿ ವಿಶ್ವಾರಾಧ್ಯ ಶ್ರೀಗಳು ಆಶೀರ್ವದಿಸಿದರು. ತಾಲೂಕಿನ ಶ್ರೀಗಳ ಸಮ್ಮುಖದಲ್ಲಿ ೧೧ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ವೇದಮೂರ್ತಿ ಮುಪ್ಪಯ್ಯನವರ ಹಿರೇಮಠ, ಮಹಾಲಿಂಗಯ್ಯ ಚಿಕ್ಕಮಠ, ಶಂಕರಗೌಡ್ರ ಪೊಲೀಸಗೌಡ್ರ. ವೀರಭದ್ರಪ್ಪ ಅಂಗಡಿ, ಗಿರಿಜವ್ವ ದೊಡ್ಡಮನಿ, ಶಂಕ್ರಪ್ಪ ಬಡ್ಡಿ, ನಾಗೇಶ ಅಣ್ಣಿಗೇರಿ, ವೀರನಗೌಡ ಹೊನ್ನಾಗೌಡ್ರ, ಕುಬೇರಗೌಡ ಪೊಲೀಸಗೌಡ್ರ, ಮಹಾದೇವಪ್ಪ ಸಿದ್ದಣ್ಣವರ, ಟಿ.ವಿ. ಪಾಟೀಲ, ಧರ್ಮಗೌಡ ಪೊಲೀಸಪಾಟೀಲ, ಈಶ್ವರಗೌಡ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ಪ್ರಧಾನಿ ಮೋದಿಗೆ ವೇದಿಕೆಯಲ್ಲೇ ಮನವಿ ಪತ್ರ ನೀಡಿ ಗಮನ ಸೆಳೆದ ಶಿವಕುಮಾರ್
ವರ್ಷೊದ ಉಚ್ಚಯ ಬೊಕ್ಕ ಆಟಿದ ಮದಿಪು ಕಾರ್ಯಕ್ರಮ