ಜೂ.17ರಂದು ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ

KannadaprabhaNewsNetwork |  
Published : May 12, 2026, 01:30 AM IST
11ಕೆಡಿವಿಜಿ2, 3-ದಾವಣಗೆರೆಯಲ್ಲಿ ಸೋಮವಾರ ಎಸ್ಸೆಸ್ ಮಲ್ಲಿಕಾರ್ಜುನ ಅಭಿಮಾನಿ ಬಳಗದ ಮುದೇಗೌಡ್ರ ಗಿರೀಶ, ಎಚ್.ಬಿ.ಮಂಜಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹಿರಿಯ ನಾಯಕರಾಗಿದ್ದ, ಮಾಜಿ ಸಚಿವ ದಿವಂಗತ ಶಾಮನೂರು ಶಿವಶಂಕರಪ್ಪನವರ ಜನ್ಮದಿನ ಅಂಗವಾಗಿ ಜೂ.17ರಂದು ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ಅಭಿಮಾನಿ ಬಳಗದ ಅಧ್ಯಕ್ಷ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ ತಿಳಿಸಿದ್ದಾರೆ.

- ಜೂ.16, ದಿವಂಗತ ಶಾಮನೂರು ಶಿವಶಂಕರಪ್ಪ ಜನ್ಮದಿನಕ್ಕೆ ಕಲ್ಯಾಣ ಕಾರ್ಯ: ಎಸ್ಸೆಸ್ಸೆಂ ಅಭಿಮಾನಿ ಬಳಗ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿರಿಯ ನಾಯಕರಾಗಿದ್ದ, ಮಾಜಿ ಸಚಿವ ದಿವಂಗತ ಶಾಮನೂರು ಶಿವಶಂಕರಪ್ಪನವರ ಜನ್ಮದಿನ ಅಂಗವಾಗಿ ಜೂ.17ರಂದು ನಗರದ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ಅಭಿಮಾನಿ ಬಳಗದ ಅಧ್ಯಕ್ಷ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಶಾಸಕ ಸಮರ್ಥ ಎಂ. ಶಾಮನೂರು ನೇತೃತ್ವದಲ್ಲಿ ವಿವಿಧ ಮಠಾಧೀಶರು, ಸರ್ವಧರ್ಮಗಳ ಧಾರ್ಮಿಕ ಮುಖಂಡರ ಸಾನ್ನಿಧ್ಯದಲ್ಲಿ ರಾಜ್ಯ, ಜಿಲ್ಲೆಯ ಪ್ರಮುಖ ನಾಯಕರ ಸಮಕ್ಷದಲ್ಲಿ ಸಾಮೂಹಿಕ ವಿವಾಹ ಮಹೋತ್ಸವ ನಡೆಯಲಿದೆ ಎಂದರು.

ದಿವಂಗತ ಶಾಮನೂರು ಶಿವಶಂಕರಪ್ಪನವರು ಜನ್ಮದಿನ ಜೂ.16 ಈ ಸಲ ಮಂಗಳವಾರ ಬಂದಿರುವುದರಿಂದ ಜೂ.17ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ ನಡೆಸುತ್ತಿದ್ದೇವೆ. ವಧುವಿಗೆ ಸೀರೆ, ಬಟ್ಟೆ, ಎರಡು ತಾಳಿ, ಕಾಲುಂಗುರ, ವರನಿಗೆ ಬಟ್ಟೆ ಉಚಿತವಾಗಿ ನೀಡಲಾಗುವುದು. ಅಂತರ್ಜಾತಿ ವಿವಾಹಕ್ಕೆ ಅವಕಾಶವಿದ್ದು, ಅದಕ್ಕೆ ಉಭಯ ಕಡೆಯವರ ಪಾಲಕರ ಒಪ್ಪಿಗೆ ಇರಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ವಧು-ವರ ಇಬ್ಬರಿಗೂ ಸರ್ಕಾರದ ನಿಯಮಾನುಸಾರ ವಿವಾಹ ಯೋಗ್ಯ ವಯಸ್ಸು, ಅದರ ದೃಢೀಕರಣ ಪತ್ರ ಇರಬೇಕು. ಆಸಕ್ತರು ಜೂ.10ರ ಒಳಗಾಗಿ ವಧು-ವರರ ಹೆಸರುಗಳನ್ನು ಸೂಕ್ತ ದಾಖಲೆ ಸಮೇತ ವಧು- ವರರಾಗಲೀ ಅಥವಾ ಕುಟುಂಬ ಸದಸ್ಯರಾಗಲಿ ನೋಂದಾಯಿಸಬೇಕು. ವಧು-ವರರ ಹೆಸರು, ಅಗತ್ಯ ದಾಖಲೆ, ದೃಢೀಕರಣಗೊಂದಿಗೆ ಹೆಸರು ನೋಂದಾಯಿಸಲು ಜಿಲ್ಲಾ ಉಸ್ತುವಾರಿ ಸಚಿವರ ಜನಸಂಪರ್ಕ ಕಚೇರಿಗೆ ಸಂಪರ್ಕಿಸಬೇಕು ಎಂದು ಅವರು ಹೇಳಿದರು.

ಆಸಕ್ತರು ಹೆಚ್ಚಿನ ಮಾಹಿತಿಗೆ ದಾವಣಗೆರ ತಾಲೂಕಿನವರು ಮುದೇಗೌಡ್ರ ಗಿರೀಶ (ಮೊ: 98440- 60804), ಮಾಗಾನಹಳ್ಳಿ ಬಿ.ಕೆ.ಪರಶುರಾಮ (97428 -91069), ಜಿ.ಎಸ್.ಮಂಜುನಾಥ (98801- 35444), ಎ.ನಾಗರಾಜ (98453- 55008), ಎಂ.ಆರ್. ಮಾಲತೇಶ (97416- 33668), ಎಸ್.ಜಗದೀಶ( 94482- 24253), ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಬಸವರಾಜ (94489- 29974), ಅನಿತಾ ಬಾಯಿ ಮಾಲತೇಶ (98445 -99686)ಗೆ ಸಂಪರ್ಕಿಸಬೇಕು ಎಂದು ತಿಳಿಸಿದರು.

ಹರಿಹರ ತಾಲೂಕಿನ ವಧು-ವರರು ಶ್ರೀನಿವಾಸ ನಂದಿಗಾವಿ (95383- 32828), ಎಲ್‌.ಬಿ.ಹನುಮಂತಪ್ಪ (74833- 86695), ಹೊನ್ನಾಳಿ ಆರ್.ನಾಗಪ್ಪ (99862- 83919), ಸಣ್ಣಕ್ಕಿ ಬಸವನ ಗೌಡ್ರು (99020 -06179), ಚನ್ನಗಿರಿ ವಡ್ನಾಳ್ ಜಗದೀಶ (72592-80699), ಸಿ.ನಾಗರಾಜ (94481- 29296), ಶ್ರೀನಿವಾಸ (94481- 59314), ಜಗಳೂರು ಷಂಶೇರ್ ಅಹಮ್ಮದ್ (94482- 38719), ವೀರೇಶ (78922- 33916), ಮಹೇಶ (97317-07909), ಹರಪನಹಳ್ಳಿ ಎಂ.ವಿ. ಅಂಜಿನಪ್ಪ (94483- 38704), ಮಂಜುನಾಯ್ಕ(98863 -44583), ಮಾಯಕೊಂಡ ಎಸ್.ವೆಂಕಟೇಶ (94484- 68855), ಎಸ್.ಕೆ.ಚಂದ್ರಶೇಖರ ಅಣಜಿ (94483-25142), ಬಿ.ಜಿ. ನಾಗರಾಜ (94482-65798) ಇವರನ್ನು ಸಂಪರ್ಕಿಸುವಂತೆ ಮುದೇಗೌಡ್ರ ಗಿರೀಶ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಬಯಲುಸೀಮೆ ಅಭಿವೃದ್ಧಿ ನಿಗಮದ ಧ್ಯಕ್ಷ ಎಚ್.ಬಿ. ಮಂಜಪ್ಪ, ಬಳಗದ ಕಕ್ಕರಗೊಳ್ಳದ ಕೆ.ಜಿ.ಶಾಂತರಾಜ ಪಟೇಲ್‌, ಎ.ನಾಗರಾಜ, ಹದಡಿ ಜಿ.ಸಿ.ನಿಂಗಪ್ಪ, ಗುರುಸ್ವಾಮಿ, ಕೆ.ಎನ್.ಮಂಜುನಾಥ, ಎಸ್.ಮಲ್ಲಿಕಾರ್ಜುನ ಇತರರು ಇದ್ದರು.

- - -

(ಬಾಕ್ಸ್‌-1)

* 2007ರಿಂದಲೂ ಸರ್ವಧರ್ಮ ಸಾಮೂಹಿಕ ವಿವಾಹ

ಬಳಗದಿಂದ 2007ರಿಂದ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವ ನಡೆಸುತ್ತಿದ್ದು, ಈವರೆಗೆ ಸುಮಾರು 350ಕ್ಕೂ ಹೆಚ್ಚು ವಿವಾಹಗಳನ್ನು ನೆರವೇರಿಸಲಾಗಿದೆ. ಕಳೆದ ವರ್ಷ 50 ಜೋಡಿಗಳ ಮದುವೆಯಾಗಿತ್ತು. ಪ್ರಸ್ತುತ ದುಬಾರಿ ದಿನಗಳಲ್ಲಿ ಎಂತಹ ಬಡವರೇ ಇದ್ದಾರೆಂದರೂ ಒಂದು ಮದುವೆ ಮಾಡಲು ಕನಿಷ್ಠ ₹3 ಲಕ್ಷ ಖರ್ಚಾಗುತ್ತದೆ. ಅಂತಹದ್ದರಲ್ಲಿ ನೂರಾರು ಕೋಟಿ ರು.ಗಳನ್ನು ಬಡ ಕುಟುಂಬಗಳು, ಗ್ರಾಮೀಣ ಪ್ರದೇಶಗಳ ಪಾಲಕರ ಆರ್ಥಿಕ ಹೊರೆ ಕಡಿಮೆ ಮಾಡಿದ ಸಂತೃಪ್ತ ತಮ್ಮ ಬಳಗದ್ದು. ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳ ಜನರು ಇದರ ಸದುಪಯೋಗ ಪಡೆಯಬಹುದು. ರಾಜ್ಯದ ಯಾವುದೇ ತಾಲೂಕಿನ ವಧು-ವರರು ಇದರ ಪ್ರಯೋಜನ ಪಡೆಯಬಹುದು ಎಂದು ಮುದೇಗೌಡ್ರ ಗಿರೀಶ ಹೇಳಿದರು.

- - -

(ಬಾಕ್ಸ್‌-2)

* ಆಯಾ ಧರ್ಮಾನುಸಾರ ಸಾಮೂಹಿಕ ವಿವಾಹ ಎಷ್ಟೇ ಜೋಡಿಗಳು ಬಂದರು, ಯಾವುದೇ ಧರ್ಮದವರು ಬಂದರೂ ಆಯಾ ಧರ್ಮಾನುಸಾರ ಸಾಮೂಹಿಕ ವಿವಾಹ ಮಾಡಿಸಲಾಗುವುದು. ಬಾಲ್ಯವಿವಾಹ, ಎರಡನೇ ವಿವಾಹಕ್ಕೆ ಅವಕಾಶ ಇರುವುದಿಲ್ಲ. ವಿಧವೆ ಅಥ‍ವಾ ವಿಧುರರ ಮದುವೆಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ಸಾಮೂಹಿಕ ವಿವಾಹಕ್ಕೆ ಬರುವವರು ವಯಸ್ಸು, ನಿವಾಸಿ ದೃಢೀಕರಣ ಸೇರಿದಂತೆ ಅಗತ್ಯ ಮಾಹಿತಿ ಸಮೇತ ಹೆಸರು ನೋಂದಾಯಿಸಬೇಕು. ಸರ್ಕಾರದ ನಿಯಮಾನುಸಾರವೇ ಸಾಮೂಹಿಕ ವಿವಾಹ ನಡೆಸಲಿದ್ದೇವೆ. ಜೂ.16ರಂದು ರಾತ್ರಿಯೇ ದೂರದ ಊರಿನಿಂದ ಬಂದ ವಧು-ವರರು, ಕುಟುಂಬ ವರ್ಗಕ್ಕೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಿದ್ದೇವೆ ಎಂದು ತಿಳಿಸಿದರು.

- - -

(ಕೋಟ್‌)

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ವಿವಾಹವಾದವರಿಗೆ ಸರ್ಕಾರದಿಂದ ₹50 ಸಾವಿರ ಪ್ರೋತ್ಸಾಹ ಧನವನ್ನು ಹಿಂದೆ ನೀಡಲಾಗುತ್ತಿತ್ತು. ಈಗ ಅದು ಸ್ಥಗಿತಗೊಂಡಿದೆ. ಅದನ್ನು ಪುನಾ ಮುಂದುವರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ದಾವಣಗೆರೆ ಜಿಲ್ಲೆ, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ವಧು-ವರರು, ಪಾಲಕರು ಈ ಸಾಮೂಹಿಕ ವಿವಾಹ ಮಹೋತ್ಸವದ ಪ್ರಯೋಜನ ಪಡೆದುಕೊಳ್ಳಬೇಕು. - ಮುದೇಗೌಡ್ರ ಗಿರೀಶ, ಅಧ್ಯಕ್ಷ, ಎಸ್ಸೆಸ್ಸೆಂ ಅಭಿಮಾನಿ ಬಳಗ.

- - -

-11ಕೆಡಿವಿಜಿ2, 3: ದಾವಣಗೆರೆಯಲ್ಲಿ ಸೋಮವಾರ ಎಸ್‌.ಎಸ್‌. ಮಲ್ಲಿಕಾರ್ಜುನ ಅಭಿಮಾನಿ ಬಳಗದ ಮುದೇಗೌಡ್ರ ಗಿರೀಶ, ಎಚ್.ಬಿ.ಮಂಜಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭತ್ತದ ಬೆಳೆ ರಕ್ಷಣೆಗೆ ನೀರು ಹರಿಸಲು ರವೀಂದ್ರ ಶ್ರೀಕಂಠಯ್ಯ ಆಗ್ರಹ
ನೀರಿದ್ದಾಗ ತಾತ್ಸಾರ, ಬರವಿದ್ದಾಗ ಲೆಕ್ಕಾಚಾರ..!