ಭಾರತೀಯರಿಂದ ಜಗತ್ತಿಗೆ ಯೋಗ ಪರಿಚಯಯೋಗ ಗುರು ಡಾ.ಎಂ.ಕೆ.ನಾಗರಾಜ ರಾವ್

KannadaprabhaNewsNetwork |  
Published : Dec 05, 2024, 12:32 AM IST
ತುಮಕೂರಿನ ವಿದ್ಯೋದಯ ಕಾನೂನುಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜು ಯೋಗಾಸನ ಸ್ಪರ್ಧೆ ಹಾಗೂರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು.  | Kannada Prabha

ಸಾರಾಂಶ

ಜಗತ್ತಿಗೆ ಯೋಗ ಹೇಳಿಕೊಟ್ಟವರು ಭಾರತೀಯರು. ಆದರೆ ಇಂದು ಪ್ರಪಂಚದಲ್ಲಿ ಯೋಗ ಅಭ್ಯಾಸವಿಲ್ಲದ ದೇಶಗಳೇ ಇಲ್ಲ. ಇದು ಭಾರತೀಯರೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದು ಯೋಗ ಗುರು ಡಾ.ಎಂ.ಕೆ.ನಾಗರಾಜ ರಾವ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಯೋಗಾಸನ ಸ್ಪರ್ಧೆ ಹಾಗೂ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರುಜಗತ್ತಿಗೆ ಯೋಗ ಹೇಳಿಕೊಟ್ಟವರು ಭಾರತೀಯರು. ಆದರೆ ಇಂದು ಪ್ರಪಂಚದಲ್ಲಿ ಯೋಗ ಅಭ್ಯಾಸವಿಲ್ಲದ ದೇಶಗಳೇ ಇಲ್ಲ. ಇದು ಭಾರತೀಯರೆಲ್ಲರೂ ಹೆಮ್ಮೆ ಪಡುವ ವಿಚಾರ ಎಂದು ಯೋಗ ಗುರು ಡಾ.ಎಂ.ಕೆ.ನಾಗರಾಜ ರಾವ್ ತಿಳಿಸಿದ್ದಾರೆ. ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜು ಯೋಗಾಸನ ಸ್ಪರ್ಧೆ ಹಾಗೂ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಒಂದು ಸಮೀಕ್ಷೆಯ ಪ್ರಕಾರ 2024ನೇ ವರ್ಷದ ವೇಳೆಗೆ ಜಗತ್ತಿನಲ್ಲಿ 18 ಮಿಲಿಯನ್ ಯೋಗ ಮ್ಯಾಟ್‌ಗಳು ಮಾರಾಟವಾಗಲಿವೆ ಎಂಬ ನಿರೀಕ್ಷೆಯಿದೆ ಎಂದರು.ಯೋಗ ಎನ್ನುವಂತಹದ್ದು, ಅನುಭವಿಸಿ ಮಾಡುವ ಒಂದು ದೈಹಿಕ ಚಟುವಟಿಕೆ. ಯೋಗಕ್ಕೆ ಭಾರತವೇ ತವರೂರಾದರೂ ವಿದೇಶಗಳ ರೀತಿ ಶಿಸ್ತು ಮತ್ತು ಶಾಸ್ತ್ರೀಯ ಬದ್ಧ ಅಭ್ಯಾಸ ನಮ್ಮಲ್ಲಿ ಕಡಿಮೆಯಾಗಿದೆ. ಇಂದು ಭಾರತೀಯರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.ಯೋಗವನ್ನು ಒಂದು ಚಿಕಿತ್ಸೆ, ಔಷದಿ ಎನ್ನುವ ರೀತಿಯಲ್ಲಿ ನೋಡುವ ಬದಲು ಒಂದು ಜೀವನ ಕ್ರಮವಾಗಿ ಅಳವಡಿಸಿಕೊಂಡರೆ ಹೆಚ್ಚಿನ ಉಪಯೋಗವಾಗಲಿದೆ. 45 ವರ್ಷದ ನಂತರ ರೋಗವಿಲ್ಲ ಎಂದು ಹೇಳುವ ಮನುಷ್ಯರು ಅಪರೂಪವಾಗಿದ್ದಾರೆ. ಯೋಗ ಮನುಷ್ಯನಿಗೆ ಸರ್ವತೋಮುಖ ಮತ್ತು ಸಂಪೂರ್ಣ ಆರೋಗ್ಯ ನೀಡುವ ಕ್ರಮ ಎಂದು ನುಡಿದರು.ದೇಹದ ಎಲ್ಲಾ ಜಾಯಿಂಟ್‌ಗಳನ್ನು ಉಪಯೋಗಿಸಿ ಮಾಡುವ ದೈಹಿಕ ಚಟುವಟಿಕೆಯೇ ಯೋಗ. ಶರೀರದ ಎಲ್ಲಾ ಕೀಲುಗಳನ್ನು ಉಪಯೋಗಿಸುವ ಯೋಗ ಮಾಡುವುದರಿಂದ ರೋಗ ರಹಿತ ಜೀವನ ನಡೆಸಬಹುದು. ಇದೇ ನಿಜವಾದ ರಾಷ್ಟ್ರಸೇವೆ. ಯೋಗ ಸ್ಪರ್ಧೆ ಏರ್ಪಡಿಸುವ ಮೂಲಕ ವಿದ್ಯೋದಯ ಕಾನೂನು ಕಾಲೇಜು ಪ್ರಶಂಶನೀಯ ಕೆಲಸ ಮಾಡಿದೆ. ಎಲ್ಲರೂ ಚೆನ್ನಾಗಿ ಯೋಗ ಪ್ರದರ್ಶನ ನೀಡಲಿ ಎಂದು ಶುಭ ಹಾರೈಸಿದರು.ಪತಂಜಲಿ ಯೋಗ ಕೇಂದ್ರದ ಮುಖ್ಯಸ್ಥ ಆರ್.ಎ. ಸುರೇಶಕುಮಾರ್ ಮಾತನಾಡಿ,ಒತ್ತಡದ ಜೀವನದಿಂದ ಮುಕ್ತರಾಗಿ, ದೈಹಿಕ ಮತ್ತು ಮಾನಸಿಕ ಸಮತೋಲನಕ್ಕೆ ಯೋಗ ಸಹಕಾರಿಯಾಗಿದೆ.ಇದೊಂದು ವಿಶ್ವಿಷ್ಟ ಜೀವನ ಕ್ರಮವಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಯೋಗ ಗುರು ಹಾಗೂ ವಿದ್ಯೋದಯ ಫೌಂಡೇಷನ್‌ನ ಸಿಇಒ ಪ್ರೊ.ಕೆ. ಚಂದ್ರಣ್ಣ, ಎರಡು ದಿನಗಳ ಕಾಲ ನಡೆಯುವ ಈ ಯೋಗ ಸ್ಪರ್ಧೆ ರಾಜ್ಯಮಟ್ಟದ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯರಾಗಿ ಪಾಲ್ಗೊಂಡು, ತಾವು ಪ್ರತಿನಿಧಿಸುವ ಕಾಲೇಜುಗಳಿಗೆ ಒಳ್ಳೆಯ ಹೆಸರು ತರುವಂತೆ ಸಲಹೆ ನೀಡಿದರು.ವಿದ್ಯೋದಯ ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್.ವಿ. ಮಾತನಾಡಿದರು. ವೇದಿಕೆಯಲ್ಲಿ ವಿದ್ಯೋದಯ ಫೌಂಡೇಷನ್‌ ಮ್ಯಾನೇಜಿಂಗ್ ಟ್ರಸ್ಟಿ ಎಚ್.ಎಸ್.ರಾಜು, ವಿದ್ಯೋದ್ಯಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶಮ ಸೈಯಿದ್, ಐಕ್ಯೂಎಸಿ ಸಂಚಾಲಕರಾದ ಕುಮಾರ್.ಎನ್.ಎಚ್,ವಿದ್ಯೋದಯ ಕಾನೂನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್.ವಿ, ಸಹಾಯಕ ಪ್ರಾಧ್ಯಾಪಕರಾದ ಪುಷ್ಪ.ಕೆ.ಎಸ್, ಟ್ರಸ್ಟಿ ಕೃಷ್ಣಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಇದೇ ವೇಳೆ ಯೋಗ ಸಾಧಕರಾದ ಮಹಾವೀರ ನಿಟ್ಟೂರು ಅವರನ್ನು ವಿದ್ಯೋದಯ ಕಾನೂನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌