ರಾಮಾನುಜಾಚಾರ್ಯರ 1008ನೇ ಜಯಂತ್ಯುತ್ಸವ, ಆಹ್ವಾನ ಪತ್ರಿಕೆ ಬಿಡುಗಡೆ

KannadaprabhaNewsNetwork | Published : Apr 16, 2025 12:43 AM

ಸಾರಾಂಶ

ತಾಲೂಕಿನ ಹಳೆದೇವರ ಹೊನ್ನಾಳಿಯಲ್ಲಿ ಶ್ರೀ ರಾಮಾನುಜಾಜಾರ್ಯ ಮಠದ ಟ್ರಸ್ಟ್, ದಾವಣಗೆರೆಯ ಶ್ರೀ ವೈಷ್ಣವ ಮಹಾಪರಿಷತ್ತು ಆಶ್ರಯದಲ್ಲಿ ಮೇ 4 ರಂದು ಶ್ರೀ ಭಗವದ್ ರಾಮಾನುಚಾಚಾರ್ಯರ 1008ನೇ ಜಯಂತ್ಯುತ್ಸವ, ಸಾಮೂಹಿಕ ವಿವಾಹ, ಉಪನಯನ ಹಾಗೂ ಶ್ರೀಮಠದಿಂದ 9ನೇ ವರ್ಷದ ಆಚರಣೆ ಹಾಗೂ ರಥೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆ ಭಾನುವಾರ ಶ್ರೀಮಠದಲ್ಲಿ ಪೂರ್ವಭಾವಿ ಸಭೆ ಹಾಗೂ ಆಹ್ವಾನ ಪತ್ರಿಕೆಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಜಿಲ್ಲಾ ಶ್ರೀ ವೈಷ್ಣವ ಮಹಾಪರಿಷತ್ತು ಅಧ್ಯಕ್ಷ ವರದರಾಜ್ ಮಾತನಾಡಿ, ರಥೋತ್ಸವ ಕಾರ್ಯಕ್ರಮದ ನಿಮಿತ್ತ ನಡೆಯಲಿರುವ ಸಾಮೂಹಿಕ ಉಪನಯನ, ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಭಕ್ತರು ಏ.20ರೊಳಗೆ ಕಡ್ಡಾಯವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು. ಶ್ರೀಮಠದ ಸಮುದಾಯ ಭವನವನ್ನು ಮದುವೆ, ಉಪನಯನ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಉಚಿತವಾಗಿ ಬಳಿಸಿಕೊಳ್ಳಬಹುದು ಎಂದರು.

ಮೇ 3ರಂದು ಶ್ರೀಮಠದಲ್ಲಿ ಪುಣ್ಯಾಹ, ಪಂಚಾಮೃತ ಅಭಿಷೇಕ, ಅಲಂಕಾರ ನಂತರ ಮಹಾಮಂಗಳಾರತಿ, ಗಂಗಾಪೂಜೆ, ಧ್ವಜಾರೋಹಣ, ರಥಕ್ಕೆ ಕಂಕಣಧಾರಣೆ, ಕಳಶಾರೋಹಣ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಇರುತ್ತವೆ ಎಂದರು.

ಮೇ 4ರಂದು ಪ್ರಾತಃಕಾಲ ಸುಪ್ರಭಾತ ಸೇವೆ, ಮಹಾಸುದರ್ಶನ ಹೋಮ, ಸಾಮೂಹಿಕ ಉಪನಯನ, ಅಷ್ಯಾವಧಾನ ಸೇವೆ, ಶಾತ್ತುಮೊರೈ ಮಹಾಮಂಗಳಾರತಿ, ಆಚಾರ್ಯರ ಉತ್ಸವ, ಅಭಿಜಿನ್ ಮುಹೂರ್ತದಲ್ಲಿ ಶ್ರೀಮದ್ ಆಚಾರ್ಯರ ರಥೋತ್ಸವ ಜರುಗಲಿವೆ. ಗುರುಗಳಿಗೆ ತೂಗುಉಯ್ಯಾಲೆ ಸೇವೆ ನಡೆಯುತ್ತದೆ ಎಂದು ವಿವರಿಸಿದರು.

ಸಾಮೂಹಿಕ ವಿವಾಹ, ಉಪನಯನ ಹಾಗೂ ಕಾರ್ಯಕ್ರಮಗಳ ಬಗ್ಗೆ ಮಾಹಿತಿಗಾಗಿ ವರದರಾಜ್ - 9980447937, ಗೋಪಾಲಕೃಷ್ಣ ಎಸ್. -9743497117, ಗೋಪಾಲಯ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷ 9945075255, ಕೃಷ್ಣಮೂರ್ತಿ ಕುಂಬಳೂರು-9880025719, ಹಾಗೂ ಎಸ್. ತಿಮ್ಮಯ್ಯ ಹರ್ಲಿಪುರ- 9972135053 ಅವರ ಮೊಬೈಲ್‌ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಈ ಸಂದರ್ಭ ಶ್ರೀಮಠದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಗೋಪಾಲಯ್ಯ, ಸುರೇಂದ್ರ ಎಸ್.ಕೆ.ಶ್ರೀನಾಥ್, ಅಮರನಾಥ್, ಪ್ರಕಾಶ್, ಜಗನ್ನಾಥ ಮತ್ತಿತರ ಮುಖಂಡರು ಇದ್ದರು.

- - -

-13ಎಚ್.ಎಲ್.ಐ2:

Share this article