ಕನ್ನಡಪ್ರಭ ವಾರ್ತೆ ಕೆಂಭಾವಿ
ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಪಥ ಯೋಜನೆಯಡಿ ಯಾಳಗಿ-ಬೇವಿನಾಹ, ಯಾಳಗಿ-ವಂದಗನೂರು ರಸ್ತೆಗಳ ನಿರ್ಮಾಣಕ್ಕೆ ₹14 ಕೋಟಿ, ಯಾಳಗಿ ಗ್ರಾಮದ ಸಿದ್ದರಾಯ, ಯಮನೂರಪ್ಪ ಮೂರು ದೇವಸ್ಥಾನಗಳು ಸೇರಿ ₹40 ಲಕ್ಷ, ಚಿಂಚೋಳಿ, ವಂದಗನೂರ ಗ್ರಾಮದ ಸಿಸಿ ರಸ್ತೆಗೆ ತಲಾ ₹50 ಲಕ್ಷ, ದೋರನಹಳ್ಳಿ-ವಂದಗನೂರು ರಸ್ತೆ ನಿರ್ಮಾಣ, ಚಿಂಚೋಳಿ ಗ್ರಾಮಕ್ಕೆ ಕುಡಿಯುವ ನೀರಿಗಾಗಿ ₹33 ಲಕ್ಷ ಅನುದಾನ ನೀಡಲಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಪ್ರಸಕ್ತ ವರ್ಷ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಮತ್ತೆ ₹70 ಲಕ್ಷ ಮೀಸಲಿಡಲಾಗಿದೆ ಎಂದರು.
ಶಹಾಪುರ ಮತಕ್ಷೇತ್ರದ ಬಹುತೇಕ ಎಲ್ಲ ಮಠ-ಮಾನ್ಯಗಳು ಮತ್ತು ದೇವಸ್ಥಾನಗಳಿಗೆ ಕಳೆದ ಒಂದೂವರೆ ವರ್ಷದಲ್ಲಿ ೩೯.೫ ಕೋಟಿ ರು. ಅನುದಾನ ನೀಡಲಾಗಿದ್ದು, ಕೆಲ ಕಾಮಗಾರಿಗಳು ಪೂರ್ಣಗೊಂಡಿವೆ, ಇನ್ನೂ ಕೆಲವು ಪ್ರಗತಿಯಲ್ಲಿವೆ ಎಂದು ಹೇಳಿದರು. ಇದಕ್ಕೂ ಮುಂಚೆ ವಂದಗನೂರ, ಚಿಂಚೋಳಿ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿ, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.ಮತದಾನದ ಹಕ್ಕು ಹೋದರೆ ಬಡವರಿಗೆ ಸರ್ಕಾರದ ಯೋಜನೆಗಳು ಕೈ ತಪ್ಪುತ್ತವೆ. ಬೆಳಗಾವಿ, ವಿಜಯಪುರ ಸೇರಿದಂತೆ ಹಲವು ಕಡೆ ಒಂದು ಪಕ್ಷ, ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಮತ ಕಸಿದುಕೊಳ್ಳುವ ಕೆಲಸ ನಡೆದಿದೆ. ಆದರೆ ಶಹಾಪುರ ಮತಕ್ಷೇತ್ರದಲ್ಲಿ ಅಂತಹ ಯಾವುದೇ ಪ್ರಕ್ರಿಯೆಗಳು ನಡೆಯಲು ಬಿಟ್ಟಿಲ್ಲ. ಮೃತಪಟ್ಟವರು ಹಾಗೂ ಎರಡು-ಮೂರು ಕಡೆ ಹೆಸರು ಉಳ್ಳವರನ್ನು ಮತದಾನ ಪಟ್ಟಿಯಿಂದ ತೆಗೆಯುವುದು ಉತ್ತಮ ಕೆಲಸ ಎಂದರು.
----ಫೋಟೊ-----
ಯಾಳಗಿ-ವಂದಗನೂರ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಶಾಸಕ ಶರಣಬಸಪ್ಪಗೌಡ ದರ್ಶನಾಪೂರ ವೀಕ್ಷಿಸಿದರು. ಬಸನಗೌಡ ಹೊಸಮನಿ, ಸಮೀನರೆಡ್ಡಿ ಹೊಸಮನಿ, ಬಸವರಾಜ ಚಿಂಚೋಳಿ, ರಾಜು ಕಾಕಾ ಇದ್ದರು.