ಕಲಬುರಗಿ ಶರಣಬಸವ ವಿವಿಗೆ ಐಎಸ್‌ಓ ಪ್ರಮಾಣ ಪತ್ರ

KannadaprabhaNewsNetwork |  
Published : Mar 10, 2024, 01:33 AM IST
ಫೋಟೋ- ಫೋಟೋ- ಶರಣ 1ಶರಣಬಸವ ವಿವಿ ನೋಟ | Kannada Prabha

ಸಾರಾಂಶ

ಶರಣಬಸವ ವಿವಿ ಪ್ರತಿಷ್ಠಿತ ಐಎಸ್‌ಓ ಪ್ರಮಾಣೀಕರಣಕ್ಕೆ ಪಾತ್ರವಾಗಿದೆ. ಅಭ್ಯಾಸಿಗಳ ಎಲ್ಲಾ ಅಗತ್ಯತೆ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಶೈಕ್ಷಣಿಕ ನಿರ್ವಹಣೆ ಪ್ರಮಾಣೀಕರಿಸುವ ಗುರಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಪರಿಚಯಿಸಲಾದ ಐಎಸ್‌ಓ ಪ್ರಮಾಣೀಕರಣ ಇದಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಶರಣಬಸವ ವಿವಿ ಪ್ರತಿಷ್ಠಿತ ಐಎಸ್‌ಓ ಪ್ರಮಾಣೀಕರಣಕ್ಕೆ ಪಾತ್ರವಾಗಿದೆ. ಅಭ್ಯಾಸಿಗಳ ಎಲ್ಲಾ ಅಗತ್ಯತೆ ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಶೈಕ್ಷಣಿಕ ನಿರ್ವಹಣೆ ಪ್ರಮಾಣೀಕರಿಸುವ ಗುರಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕವಾಗಿ ಪರಿಚಯಿಸಲಾದ ಐಎಸ್‌ಓ ಪ್ರಮಾಣೀಕರಣ ಇದಾಗಿದೆ.

ಇದನ್ನು ಪಡೆದು ಶರಣಬಸವ ವಿಶ್ವವಿದ್ಯಾಲಯವು ದೇಶದ ಪ್ರಮುಖ ವಿಶ್ವವಿದ್ಯಾಲಯಗಳ ಪಟ್ಟಿಗೆ ಸೇರುವ ಮೂಲಕ ತನ್ನ ಹಿರಿಮೆಯಲ್ಲಿ ಮತ್ತೊಂದು ಗರಿಯನ್ನು ಹೊಂದಿದಂತಾಗಿದೆ.

ಶಿಕ್ಷಣ ಸಂಸ್ಥೆಗಳಿಗೆ ಐಎಸ್‌ಓ ಪ್ರಮಾಣೀಕರಣವನ್ನು ಒದಗಿಸುವ ವಿಟೂವಿ ಇಂಡಿಯಾದಿಂದ ವಿಶ್ವವಿದ್ಯಾಲಯವು ಸ್ವೀಕರಿಸಿದ ಪ್ರಕಟಣೆಯ ಪ್ರಕಾರ, ಶರಣಬಸವ ವಿಶ್ವವಿದ್ಯಾಲಯವು ಐಎಸ್‌ಓ 21001-2018 ಅನ್ನು ಪಡೆದುಕೊಂಡಿದೆ. ಇದು ಮಾರ್ಚ್ 2027 (ಮೂರು ವರ್ಷಗಳ)ವರೆಗೆ ಮಾನ್ಯವಾಗಿದೆ. ಇದು ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಬಿಸಿನೆಸ್ ಸ್ಟಡೀಸ್‍ನಲ್ಲಿ ಪದವಿಪೂರ್ವ ಕೋರ್ಸ್‍ಗಳು ಮತ್ತು ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಶನ್, ಸೈನ್ಸ್, ಬಿಸಿನೆಸ್ ಸ್ಟಡೀಸ್ ಹಾಗೂ ಸೋಷಿಯಲ್ ಸೈನ್ಸ್ ಆ್ಯಂಡ್ ಹ್ಯೂಮ್ಯಾನಿಟಿಸ್ ವಿಷಯಗಳಲ್ಲಿ ಸ್ನಾತಕೋತ್ತರ ಕೋರ್ಸ್‍ಗಳು ಸೇರಿ ವಿಶ್ವವಿದ್ಯಾಲಯವು ನೀಡುವ ಎಲ್ಲಾ ಕೋರ್ಸ್‍ಗಳನ್ನು ಒಳಗೊಂಡಿದೆ.

ಶರಣಬಸವ ವಿವಿ ಕುಲಸಚಿವ ಡಾ. ಅನಿಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮೀ ಪಾಟೀಲ ಮಾಕಾ ಅವರು ಐಎಸ್‌ಓ ಪ್ರಮಾಣೀಕರಣ ಪಡೆಯಲು ಎಲ್ಲಾ ಅಗತ್ಯತೆಗಳನ್ನು ಪೂರೈಸಿದ ವಿವಿಯ ಎಲ್ಲಾ ಅಧ್ಯಾಪಕರನ್ನು ಅಭಿನಂದಿಸಿದ್ದಾರೆ. ವಿಶ್ವವಿದ್ಯಾಲಯವು ಐಎಸ್‌ಓ ಪಡೆಯಲು ಎಲ್ಲಾ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಅನುಸರಿಸಿದೆ ಎಂದು ಶನಿವಾರ ಪ್ರಮಾಣೀಕರಣವನ್ನು ಪಡೆಯಲು ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಅಧಿಕಾವಧಿ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಶ್ರಮಿಸಿದ ವಿವಿಯ ಎಲ್ಲಾ ಅಧಿಕಾರಿಗಳು ಮತ್ತು ಅಧ್ಯಾಪಕರನ್ನು ಶರಣಬಸವ ವಿವಿ ಕುಲಾಧಿಪತಿಗಳು ಹಾಗೂ ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಕಾರ್ಯದರ್ಶಿ ಬಸವರಾಜ ದೇಶಮುಖ ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1.7 ಕೋಟಿಯ ಮೊಬೈಲ್‌ಗಳುಮರಳಿ ಮಾಲಿಕರಿಗೆ ಹಸ್ತಾಂತರ
ಕೆಲಸಕ್ಕಿದ್ದ ಉದ್ಯಮಿ ಮನೆಯಲ್ಲಿ43 ಲಕ್ಷದ ಆಭರಣ ಕದ್ದ ದಂಪತಿ