ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಸ್ಥಾಪಿಸಲಾದ ''''ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್'''' (ಐಸಿಸಿಸಿ) ಉದ್ಘಾಟನೆಯಾಗಿ ಬರೋಬ್ಬರಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಕಾರ್ಯಾರಂಭವಾಗಿಲ್ಲ.
ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಜ.26 ರಂದು ಸಚಿವರಿಂದ ಉದ್ಘಾಟನೆ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಸ್ಥಾಪಿಸಲಾದ ''''''''ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್'''''''' (ಐಸಿಸಿಸಿ) ಉದ್ಘಾಟನೆಯಾಗಿ ಬರೋಬ್ಬರಿ ಒಂದೂವರೆ ತಿಂಗಳು ಕಳೆದರೂ ಇನ್ನೂ ಕಾರ್ಯಾರಂಭವಾಗಿಲ್ಲ.
ಚಿಕ್ಕಮಗಳೂರಿನ ಜನತೆ ಸೇರಿದಂತೆ ಪ್ರವಾಸಿಗರು ನಿಯಮ ಉಲ್ಲಂಘಿಸಿದರೆ ಕ್ಷಣ ಮಾತ್ರದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಾಹನ ಪತ್ತೆ ಮಾಡಿ ಮಾಲೀಕರಿಗೆ ದಂಡ ವಿಧಿಸುವ ವ್ಯವಸ್ಥೆಗೆ ಕಳೆದ ಜನವರಿ 26 ರ ಗಣರಾಜ್ಯೋತ್ಸವ ದಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದ್ದರು.
ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮೆಸ್ಕಾಂ ಇಲಾಖೆ ಸಿಎಸ್‌ಆರ್ (ಸಿಎಸ್‌ಆರ್) ನಿಧಿಯಡಿ ಸುಮಾರು ₹1.75 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ.
ನಗರದ ಪ್ರಮುಖ ವೃತ್ತಗಳು, ಜನನಿಬಿಡ ಪ್ರದೇಶಗಳು ಹಾಗೂ ಆಯಕಟ್ಟಿನ ಸೂಕ್ಷ್ಮ ಜಾಗಗಳಲ್ಲಿ ಒಟ್ಟು 41 ಸೋಲಾರ್ ಚಾಲಿತ ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವು ಸೌರಶಕ್ತಿಯಿಂದ ಕಾರ್ಯ ನಿರ್ವಹಿಸುವುದರಿಂದ ವಿದ್ಯುತ್ ಕೈಕೊಟ್ಟರೂ ದಿನದ 24 ಗಂಟೆ ನಿರಂತರವಾಗಿ ಕಣ್ಣಾವಲು ನಡೆಸಲಿವೆ. ಮೊದಲ ಹಂತದಲ್ಲಿ ವಿವಿಧ ವೃತ್ತದಲ್ಲಿ 24 ಎಐ ಕ್ಯಾಮೆರಾ ಅಳವಡಿಕೆ ಆಗಿದೆ. ಎರಡನೇ ಹಂತದಲ್ಲಿ ಇನ್ನೂ 22 ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ.
ಮೊದಲ ಹಂತ ಕ್ಯಾಮೆರಾ ಅಳವಡಿಕೆ ಹಾಗೂ ಹೈಟೆಕ್ ಕಂಟ್ರೋಲ್ ರೋಮ್ ವ್ಯವಸ್ಥೆ ಎಲ್ಲವೂ ಸಿದ್ಧವಾಗಿದೆ. ಆದರೆ, ತಾಂತ್ರಿಕ ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಇನ್ನೂ ಕಾರ್ಯಾರಂಭಗೊಂಡಿಲ್ಲ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.--ಬಾಕ್ಸ್---
ಕಾರ್ಯಾಚರಣೆಗೆ ಸಮಸ್ಯೆ ಏನು?
ಸಾರಿಗೆ ಇಲಾಖೆ ಡೇಟಾ ಬೇಸ್ ಈ ಪೊಲೀಸ್ ಇಲಾಖೆ ಈ ಇಂಟೆಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್'''''''' (ಐಸಿಸಿಸಿ) ಜೋಡಣೆ ಮಾಡಬೇಕಾಗಿದೆ. ಸಾರಿಗೆ ಇಲಾಖೆ ಡೇಟಾ ಬೇಸ್ ಅನ್ನು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ನಿರ್ವಹಣೆ ಮಾಡುತ್ತಿದೆ. ಎನ್‌ಐಸಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಬೇಕು. ಆಗ ಡೇಟಾ ಬೇಸ್ ಪರಸ್ಪರ ಜೋಡಣೆ ಆಗಲಿದೆ. ಆಗ ನಿಯಮ ಉಲ್ಲಂಘಿಸಿ ವಾಹನ ಸಂಖ್ಯೆ ಆಧಾರಿಸಿ ಪರಿಶೀಲನೆ ಮಾಡಿ ಸ್ವಯಂ ಚಲಿತವಾಗಿ ದಂಡ ವಿಧಿಸುವ ಕೆಲಸ ಆಗಲಿದೆ. ಈ ಕಾರ್ಯ ಪೂರ್ಣಗೊಳ್ಳದಿರುವುದರಿಂದ ಇಡೀ ವ್ಯವಸ್ಥೆ ಕಳೆದ ಒಂದೂವರೆ ತಿಂಗಳಿನಿಂದ ಸ್ತಬ್ಧವಾಗಿದೆ.
--- ಬಾಕ್ಸ್--
ನಿಗಾ ಹೇಗೆ?ನಗರಕ್ಕೆ ಪ್ರವೇಶಿಸುವ ಎಲ್ಲಾ ಮಾರ್ಗಗಳಲ್ಲಿ ಅಳವಡಿಸಲಾಗಿರುವ ಈ ಕ್ಯಾಮೆರಾಗಳು ಪ್ರತಿಯೊಂದು ವಾಹನದ ಮೇಲೆ ನಿಗಾ ಇಡಲಿವೆ. ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದಿರುವುದು, ದ್ವಿಚಕ್ರ ವಾಹನದಲ್ಲಿ ಹೆಲ್ಕೆಟ್ ಇಲ್ಲದಿರುವುದು, ಟ್ರಿಪಲ್ ರೈಡಿಂಗ್, ಸಿಗ್ನಲ್ ಜಂಪ್ ಹಾಗೂ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಈ ಎಐ ತಂತ್ರಜ್ಞಾನ ಸ್ವಯಂಚಾಲಿತವಾಗಿ ಪತ್ತೆ ಹಚ್ಚಲಿದೆ. ನಿಯಮ ಉಲ್ಲಂಘಿಸುವ ಚಾಲಕರ ಫೋಟೋ ಸೆರೆ ಹಿಡಿದು ಕಂಟ್ರೋಲ್ ರೂಮ್ ಮೂಲಕ ನೇರವಾಗಿ ಮಾಲೀಕರಿಗೆ ದಂಡದ ನೋಟಿಸ್ ತಲುಪಿಸುವ ವ್ಯವಸ್ಥೆ ಇದಾಗಿದೆ.
ಚಿಕ್ಕಮಗಳೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ನಿರ್ಮಿಸಿದ '''''''' ಇಂಟೆಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್'''''''''''''''' (ಐಸಿಸಿಸಿ)ಗೆ ಜನವರಿ 26ಕ್ಕೆ ಸಚಿವ ಕೆ.ಜೆ.ಜಾರ್ಜ್ ಚಾಲನೆ ನೀಡಿದ್ದರು.2. ಎಐ ಆಧಾರಿತ ಕ್ಯಾಮೆರಾ ಅಳವಡಿಕೆ ಮಾಡಿರುವ ಚಿಕ್ಕಮಗಳೂರಿನ ಹನುಮಂತಪ್ಪ ಸರ್ಕಲ್.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.