ಕನ್ನಡಪ್ರಭ ವಾರ್ತೆ ಕುಣಿಗಲ್
ತಾಲೂಕಿಗೆ ಬರಬೇಕಾದ 300 ಟಿಎಂಸಿ ನೀರನ್ನು ಕುಣಿಗಲ್ಲಿಗೆ ಲಿಂಕ್ ಕೆನಲ್ ಮೂಲಕ ತರುವ ಪ್ರಯತ್ನ ನಮ್ಮದು. ವಿನಾಕಾರಣ ರಾಜಕೀಯಕ್ಕಾಗಿ ಯೋಜನೆ ವಿರೋಧಸಿಸುವುದಕ್ಕಿಂತ ಜಿಲ್ಲೆಗೆ ಬರಬೇಕಾದ 24 ಟಿಎಂಸಿ ನೀರನ್ನು ತರಲು ಹೋರಾಟ ಮಾಡಿ ಎಂದು ಮನವಿ ಮಾಡಿದರು.
ಕಾವೇರಿ ಕೊಳ್ಳದ ನೀರಾವರಿಯಿಂದ ತುರುವೇಕೆರೆ, ಗುಬ್ಬಿ ಹಾಗೂ ತುಮಕೂರು ಭಾಗಗಳಿಗೆ, ಅದೇ ರೀತಿ ಕೃಷ್ಣ ಕೊಳ್ಳದ ನೀರಾವರಿ ಭಾಗದಿಂದ ಚಿಕ್ಕನಾಯಕನಹಳ್ಳಿ ನೀರು ಹರಿಸಲಾಗುತ್ತಿದೆ. ಆದರೆ ಕುಣಿಗಲ್ ಪಾಲಿನ ನೀರನ್ನು ಸರಿಯಾದ ರೀತಿ ಬಳಸಿಕೊಳ್ಳಲು ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಡಿಕೆ ಶಿವಕುಮಾರ್ ಮಂತ್ರಿಯಾಗಿದ್ದು ಅಂದು ಇದ್ದ ಸರ್ಕಾರ 614 ಕೋಟಿ ರು. ಅಂದಾಜು ವೆಚ್ಚದಲ್ಲಿ ಕುಣಿಗಲ್ ಲಿಂಕ್ ಕೆನಾಲಿಗೆ ಅನುಮತಿ ನೀಡಲಾಗಿತ್ತು. ನಂತರ ಆದ ರಾಜಕೀಯ ಬದಲಾವಣೆಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 990 ಕೋಟಿ ಅಂದಾಜು ವೆಚ್ಚದಲ್ಲಿ ಪುನಃ ಲಿಂಕ ಕೆನಲ್ ಕಾಮಗಾರಿಯನ್ನು ಪ್ರಾರಂಭಿಸಿ ರೈತರ ಹಿತ ಕಾಯಲು ಮುಂದಾಗಿದೆ ಹೊರತು ಇಲ್ಲಿ ಯಾವುದೇ ಪ್ರತಿಷ್ಠೆ ಅಥವಾ ಬೇರೆಯವರ ಪಾಲಿನ ನೀರನ್ನು ಬಳಿಸಿಕೊಳ್ಳುವ ಹುನ್ನಾರ ಇಲ್ಲ ಎಂದರು.ನೀರಾವರಿ ವಿಚಾರದಲ್ಲಿ ರಾಜಕೀಯವನ್ನು ಬದಿಗೊತ್ತು ರೈತರ ಹಿತದೃಷ್ಟಿ ಕಾಪಾಡುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಬರಬೇಕಾಗಿರುವ ನೀರಿನ ಬಗ್ಗೆ ಒಟ್ಟಾಗಿ ಹೋರಾಟ ಮಾಡಬೇಕಿದೆ. ಅದನ್ನು ಬಿಟ್ಟು ಲಿಂಕ್ ಕೆನಾಲ್ ಬಗ್ಗೆ ಸಾರ್ವಜನಿಕರಿಗೆ ರೈತರಿಗೆ ದಾರಿ ತಪ್ಪಿಸ ಬೇಕಾಗಿಲ್ಲ ಕೈಮುಗಿದು ಬೇಡಿಕೊಳ್ಳುತ್ತೇನೆ ಪ್ರತಿಯೊಬ್ಬರೂ ಕೂಡ ಸಹಕಾರ ನೀಡಿ ಎಂದು ಮನವಿ ಮಾಡಿದರು.