ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಸತತ ಮೂರನೇ ಬಾರಿ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸುತ್ತಿರುವ ಈ ಶುಭ ಸಂದರ್ಭದ ಸವಿ ನೆನಪಿಗಾಗಿ ಆಲದ ಮರ ನೆಡುವ ಕಾರ್ಯವನ್ನು ಮೋದಿ ಅವರು ಅಭಿಮಾನಿಗಳು ಮಾಡುತ್ತಿದ್ದೇವೆ ಎಂದು ಲಕ್ಷ್ಮೇಶ್ವರ ನಗರ ಘಟಕದ ಬಿಜೆಪಿ ಅಧ್ಯಕ್ಷ ನವೀನ ಬೆಳ್ಳಟ್ಟಿ ಹೇಳಿದರು.ಭಾನುವಾರ ಪಟ್ಟಣದ ಉಮಾ ವಿದ್ಯಾಲಯ ಬಯಲಿನಲ್ಲಿನ ಶಿಬಾರಗಟ್ಟಿಯ ಹತ್ತಿರ ಆಲದ ಮರ ನೆಟ್ಟು ಮಾತನಾಡಿದರು.
ಸತತ ಮೂರನೆ ಬಾರಿ ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿರುವ ನರೇಂದ್ರ ಮೋದಿ ಅವರ ಪದಗ್ರಹಣದ ಸವಿ ನೆನಪಿಗಾಗಿ ಪಟ್ಟಣದ ಮೂರು ಕಡೆಗಳಲ್ಲಿ ಆಲದ ಮರ ನೆಡುವ ಕಾರ್ಯ ಮಾಡುತ್ತಿದ್ದೇವೆ. ನರೇಂದ್ರ ಮೋದಿ ಅವರ ಅಧಿಕಾರದ ಅವಧಿಯಲ್ಲಿ ದೇಶ ಹಿಂದೆಂದೂ ಕಾಣದ ಅಭಿವೃದ್ದಿ ಕಂಡಿರುವುದನ್ನು ಜಗತ್ತಿನ ಹಲವು ದೇಶಗಳು ಕೊಂಡಾಡಿವೆ, ಕೊರೋನಾ ಕಾಲದಲ್ಲಿ ಜಗತ್ತು ತಲ್ಲಣಿಸಿ ಹೊಗಿರುವ ವೇಳೆ ಎಲ್ಲ ಭಾರತೀಯರಿಗೆ ಉಚಿತ ಲಸಿಕೆ ನೀಡುವ ಮೂಲಕ ಭಾರತೀಯಯರ ಜೀವ ಉಳಿಸಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.ಈ ವೇಳೆ ಶಿರಹಟ್ಟಿ ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ದುಂಡೇಶ ಕೊಟಗಿ, ಮಂಜುನಾಥ ಗೊರವರ, ಗಿರೀಶ ಚೌರಡ್ಡಿ, ಸೋಮಣ್ಣ ಉಪನಾಳ, ವಿನಯ ಪಾಟೀಲ, ಗಂಗಾಧರ ಮೆಣಸಿನಕಾಯಿ, ಶಕ್ತಿ ಕತ್ತಿ, ಅನಿಲ ಮುಳಗುಂದ, ವಿಜಯ ಕುಂಬಾರ, ಉಳವೇಶಗೌಡ ಪಾಟೀಲ, ಹಾಲಪ್ಪ ಸೂರಣಗಿ, ರಾಮು ಪೂಜಾರ, ಸತೀಶ ಕಾಡಣ್ಣವರ, ಮಂಜಯ್ಯ ಕಲಕೇರಿಮಠ, ಬಸವರಾಜ ಚಕ್ರಸಾಲಿ, ಸಂತೋಷ ಜಾವೂರ, ರಾಮು ನಾಯಕ್, ಆಕಾಶ ಸವದತ್ತಿ, ಪ್ರಕಾಶ ಮದ್ನೂರ ಸೇರಿದಂತೆ ಅನೇಕರು ಇದ್ದರು.