ಮೀಸಲಾತಿ ಸೌಲಭ್ಯ ಬಡ ದಲಿತರ ಸಿಕ್ಕಲ್ಲಿ ಮಾತ್ರ ಸಂವಿಧಾನ ಆಶಯ ಈಡೇರಿದಂತೆ

KannadaprabhaNewsNetwork |  
Published : Apr 18, 2024, 02:27 AM ISTUpdated : Apr 18, 2024, 12:53 PM IST
೧೭ ಟಿವಿಕೆ ೧ - ತುರುವೇಕೆರೆಯ ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಾಜದ ವತಿಯಿಂದ ಬೆಸ್ಕಾಂ ನ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್ ರವರನ್ನು ಅಭಿನಂದಿಸಲಾಯಿತು. | Kannada Prabha

ಸಾರಾಂಶ

ದಲಿತರ ಏಳಿಗೆಗಾಗಿ ಇರುವ ಎಲ್ಲಾ ಸವಲತ್ತುಗಳು ಬಡ ದಲಿತರ ಸಿಕ್ಕಲ್ಲಿ ಮಾತ್ರ ಸಂವಿಧಾನದ ಆಶಯ ಈಡೇರಿದಂತಾಗು ತ್ತದೆ ಎಂದು ಕಾಂಗ್ರೆಸ್ ಮುಖಂಡ, ಬೆಸ್ಕಾಂನ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್ ರವರು ಹೇಳಿದರು.

 ತುರುವೇಕೆರೆ :  ದಲಿತರ ಏಳಿಗೆಗಾಗಿ ಇರುವ ಎಲ್ಲಾ ಸವಲತ್ತುಗಳು ಬಡ ದಲಿತರ ಸಿಕ್ಕಲ್ಲಿ ಮಾತ್ರ ಸಂವಿಧಾನದ ಆಶಯ ಈಡೇರಿದಂತಾಗು ತ್ತದೆ ಎಂದು ಕಾಂಗ್ರೆಸ್ ಮುಖಂಡ, ಬೆಸ್ಕಾಂನ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್ ರವರು ಹೇಳಿದರು.

ಪಟ್ಟಣದ ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಾಜದ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ರವರ ೧೩೩ನೇ ಜಯಂತಿ ಆಚರಣೆ ವೇಳೆ ಅವರು ಸನ್ಮಾನಿತರಾಗಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು75 ವರ್ಷಗಳು ಸಂದಿವೆ. ದೇಶದ ಮೂಲ ನಾಗರಿಕರು ಎನಿಸಿಕೊಂಡಿರುವ ದಲಿತರ ಅಭಿವೃದ್ಧಿಗಾಗಿ ಸಂವಿಧಾನದಲ್ಲೇ ಸಾಕಷ್ಟು ಅವಕಾಶಗಳನ್ನು ಕಲ್ಪಿಸ ಲಾಗಿದೆ. ಇದುವರೆಗೂ ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣ ಸದ್ಬಳಕೆ ಆಗಿದ್ದರೆ ಈ ವೇಳೆಗಾಗಲೇ ದೇಶದಲ್ಲಿರುವ ಎಲ್ಲಾ ದಲಿತರ ಸಮಗ್ರ ಅಭಿವೃದ್ಧಿ ಆಗುತ್ತಿತ್ತು. ಆದರೆ ಅದು ಆಗದೇ ಇರುವ ಕಾರಣ ಇನ್ನೂ ಸಾಕಷ್ಟು ದಲಿತರು ಬಡತನದ ಬೇಗೆಯಲ್ಲೇ ಬೇಯುತ್ತಿದ್ದಾರೆಂದು ವಿಷಾದಿಸಿದರು.

ಎಲ್ಲಾ ಪಕ್ಷಗಳಲ್ಲೂ ಹಲವಾರು ದಲಿತ ರಾಜಕಾರಣಿಗಳು ಇದ್ದಾರೆ. ಅದೇ ರೀತಿ ದಲಿತ ಸಮುದಾಯಕ್ಕೆ ಸೇರಿದ ಹಲವಾರು ಮಂದಿ ಉನ್ನತ ಮಟ್ಟದ ಹುದ್ದೆಯಲ್ಲೂ ಇದ್ದಾರೆ. ಸಾಕಷ್ಟು ಸ್ಥಿತಿವಂತರೂ ಇದ್ದಾರೆ. ದಲಿತರಿಗೆ ಸಿಗುವ ಎಲ್ಲಾ ಸವಲತ್ತುಗಳು ಮೀಸಲಾತಿ ಹೆಸರಿನಲ್ಲಿ ಶ್ರೀಮಂತ ದಲಿತರೇ ಎಲ್ಲಾ ಸವಲತ್ತುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇನ್ನು ಬಡ ದಲಿತರ ಮನೆಗೆ ಸವಲತ್ತುಗಳು ಮರೀಚಿಕೆಯಾಗುತ್ತದೆ ಎಂದು ವಸಂತಕುಮಾರ್ ಕಳವಳ ವ್ಯಕ್ತಪಡಿಸಿದರು.ತಮ್ಮ ಸಂಸ್ಥೆಯ ವತಿಯಿಂದ ಐಎಎಸ್ ಮತ್ತು ಕೆಎಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾ ಗುತ್ತಿದೆ.

 ದಲಿತ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂದಾದಲ್ಲಿ ತಮ್ಮ ಸಂಸ್ಥೆಯ ವತಿಯಿಂದ ಉಚಿತವಾಗಿ ಶಿಕ್ಷಣ ನೀಡಲಾಗುವುದು ಎಂದರು. ತಾಲೂಕು ಆದಿಜಾಂಬವ ಕ್ಷೇಮಾಭಿವೃದ್ಧಿ ಸೇವಾ ಸಮಾಜದ ಸಂಸ್ಥಾಪಕ ಅಧ್ಯಕ್ಷ ನೆಮ್ಮದಿ ಗ್ರಾಮದ ಮೂರ್ತಿ ಮಾತನಾಡಿ, ಡಾ.ಅಂಬೇಡ್ಕರ್ ಆಶಯ ಪ್ರತಿಯೊಬ್ಬ ದಲಿತರೂ ವಿದ್ಯಾವಂತರಾಗಬೇಕು. 

ಸರ್ಕಾರದ ಎಲ್ಲಾ ಸವಲತ್ತುಗಳು ಬಡ ದಲಿತರ ಪಾಲಾಗಬೇಕು ಎಂಬ ಆಶಯ ಇದೆ. ಆದರೆ ಅಂಬೇಡ್ಕರ್ ಆಶಯ ಇನ್ನೂ ಈಡೇರದೆ ಇರುವುದು ದುರಂತವೇ ಸರಿ. ನಮ್ಮ ಸಂಸ್ಥೆಯ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಆಧ್ಯತೆ ನೀಡುವುದು ಸೇರಿದಂತೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ದಲಿತರ ಮನೆಗೆ ತಲುಪಿಸುವ ಗುರಿ ಇದೆ. ಇದನ್ನು ಸಾಕಾರ ಮಾಡಲು ಎಲ್ಲಾ ದಲಿತರು ಸಂಸ್ಥೆಯೊಂದಿಗೆ ಕೈ ಜೋಡಿಸಬೇಕೆಂದು ಮೂರ್ತಿ ಮನವಿ ಮಾಡಿಕೊಂಡರು.

 ಈ ಸಂಧರ್ಭದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಬಾಣಸಂದ್ರ ಕೃಷ್ಣ ಮಾದಿಗ, ಉಪನ್ಯಾಸಕ ಕುಮಾರ್, ಪ್ರೊ.ಚಂದ್ರಯ್ಯ, ಹರಿದಾಸನಹಳ್ಳಿ ಸಾವಿತ್ರಮ್ಮ, ಅನ್ನಪೂರ್ಣಮ್ಮ, ಸೋಮಲಾಪುರ ನಂದಿನಿ, ಚನ್ನಕೇಶವ, ತಾಲೂಕು ಪಂಚಾಯ್ತಿ ಮಾಜಿ ಸದಸ್ಯ ಡಿ.ಸಿ.ಕುಮಾರ್, ಬಿಗನೇನಹಳ್ಳಿ ಪುಟ್ಟರಾಜು, ವಿಠಲದೇವರಹಳ್ಳಿ ಮೂರ್ತಿ, ಡೊಂಕಿಹಳ್ಳಿ ರಾಮಣ್ಣ, ಕುಣಿಕೇನಹಳ್ಳಿ ಜಗದೀಶ್, ಬೀಚನಹಳ್ಳಿ ಮಹದೇವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳ ಮದುವೆ ಸಂಬಂಧ ಹತ್ಯೆ ಯತ್ನಕ್ಕೊಳಗಾಗಿದ್ದ ಮಹಿಳೆ ಸಾವು
ಕೋಗಿಲು ಒತ್ತುವರಿಗೆ ಇಬ್ಬರು ಖಾಕಿಬಲೆಗೆ