ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸುವುದು ಅಗತ್ಯ: ಎ.ಎಸ್‌. ಪೊನ್ನಣ್ಣ

KannadaprabhaNewsNetwork |  
Published : Aug 24, 2026, 02:45 AM IST
ವಿಜೇತರಿಗೆ ಬಹುಮಾನ ವಿತರಿಸಿದ ಶಾಸಕರು | Kannada Prabha

ಸಾರಾಂಶ

ಗ್ರಾಮೀಣ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಇಂದಿನ ಯುವಜನತೆಯ ಹಾಗೂ ಸಮಾಜದ ಅವಶ್ಯಕತೆ ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.

ನಾಪೋಕ್ಲು : ಗ್ರಾಮೀಣ ಕ್ರೀಡೆಯನ್ನು ಉಳಿಸಿ ಬೆಳೆಸುವುದು ಇಂದಿನ ಯುವಜನತೆಯ ಹಾಗೂ ಸಮಾಜದ ಅವಶ್ಯಕತೆ ಎಂದು ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.ಕೊಡಗು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಡಗು ಜಿಲ್ಲಾ ಯುವ ಒಕ್ಕೂಟ ಆಶ್ರಯದಲ್ಲಿ ಭಾಗಮಂಡಲದ ಬಳ್ಳಡ್ಕ ಅಪ್ಪಾಜಿ ಹಾಗೂ ಅನು ಅವರ ಗದ್ದೆಯಲ್ಲಿ ಆಯೋಜನೆಗೊಂಡ 34ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಾತನಾಡಿದರು. ಈ ಭಾಗದಲ್ಲಿ ಊರಿನ ಜನರನ್ನು ಒಗ್ಗೂಡಿಸಿ ರಾಜ್ಯದ ಎಲ್ಲೆಡೆಯಿಂದ ಕ್ರೀಡಾಪಟುಗಳು ಆಗಮಿಸುತ್ತಿರುವುದು ಈ ಭಾಗಕ್ಕೆ ಹೆಮ್ಮೆಯ ವಿಷಯ. ಇಂತಹ ಕ್ರೀಡಾಕೂಟಗಳಿಂದಾಗಿ ಗ್ರಾಮೀಣ ಕ್ರೀಡೆಯ ಹಾಗೂ ಅದರ ಸೊಬಗು ಜೀವಂತವಾಗಿರಲು ಹಾಗೂ ಮುಂದಿನ ಪೀಳಿಗೆಗೆ ಇದರ ಮಹತ್ವ ತಿಳಿಸಲು ಸಹಕಾರಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನಸಭಾ ಮಾಜಿ ಅಧ್ಯಕ್ಷ ಕುಂಬಾರನ ಜಿ ಬೋಪಯ್ಯ ಕ್ರೀಡಾಕೂಟದಲ್ಲಿ ಭಾಗವಹಿಸುವಿಕೆ ಮುಖ್ಯ ಹೊರತು ಸ್ಥಾನಮಾನಕ್ಕಾಗಿ ಪೈಪೋಟಿ ನಡೆಸುವಂತಹಾಗಬಾರದು ಎಂದರು. ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಚೆಪ್ಪುಡೀರ ಅರುಣ್ ಮಾಚಯ್ಯ , ಮಡಿಕೇರಿ ಡಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷ ಎ ಕೆ ಮನು ಮುತ್ತಪ್ಪ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಿಸ್ಮಯ್ ಚಕ್ರವರ್ತಿ ಮಾತನಾಡಿ ಶುಭ ಹಾರೈಸಿದರು.,

ಭಾಗಮಂಡಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾಳನ ರವಿ, ಭಾಗಮಂಡಲ ವಿಎಸ್ಎಸ್ ಏನ್ ಅಧ್ಯಕ್ಷ ಹೊಸೂರು ಸತೀಶ ಜೋಯಪ್ಪ, ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ದಿಲೀಪ್, ಶ್ರೀ ಕೃಷ್ಣ ಯುವಕ ಸಂಘದ ಅಧ್ಯಕ್ಷ ಲತೇಶ್, ನಿವೃತ್ತ ಶಿಕ್ಷಕ ಶ್ರೀಧರ್, ಜಿಲ್ಲಾ ಯುವ ಒಕ್ಕೂಟದ ಖಜಾಂಜಿ ಕುಂಜಿಲನ ಮಧು ಮೋಹನ್, ಸದಸ್ಯ ಜಯಕುಮಾರ್. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಮಾಜಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಮುದ್ದಿಯಂಡ ಸಾಕ್ಷಿ ಕಾವೇರಮ್ಮ ಪ್ರಾರ್ಥಿಸಿ ಬಾಳಾಡಿ ದೀಪಕ್ ಕುಮಾರ ಸ್ವಾಗತಿಸಿದರು ಜಿಲ್ಲಾ ಯುವ ಒಕ್ಕೂಟದ ಕಾರ್ಯಾಧ್ಯಕ್ಷ ಕೂಡಂಡ ಸಾಬು ಸುಬ್ರಮಣಿ ನಿರೂಪಿಸಿದರು. ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷ ಕೇಕಡ ಇಂದುಮತಿ ವಂದಿಸಿದರು. ನಂತರ ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು. ಬಳಿಕ ವಿಜೇತರಾದ ಕ್ರೀಡಾಪಟುಗಳಿಗೆ ಗಣ್ಯರು ಬಹುಮಾನ ವಿತರಿಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಪೀಳಿಗೆಗೆ ಭತ್ತ ಕೃಷಿ ಅರಿವು ಅಗತ್ಯ: ಮಧುಕುಮಾರ್
ಮೂಲಭೂತ ಸೌಕರ್ಯವಿಲ್ಲದೆ ನರಕಯಾತನೆ: ಪೊನ್ನತ್‌ಮೊಟ್ಟೆ ಬಡ ಕುಟುಂಬಗಳ ಗೋಳು