ಕನ್ನಡಪ್ರಭ ವಾರ್ತೆ ಮಡಿಕೇರಿ
ಸ್ವಾತಂತ್ರ್ಯಹೋರಾಟಗಾರ ದಿ. ಪೂಜಾರಿರ ರಾಮಪ್ಪ ಅವರ ಹೆಸರಿನಲ್ಲಿ ಮೇಕೇರಿ ಬಿಳಿಗೇರಿ, ಅರ್ವತ್ತೋಕ್ಲು ಲಿಂಕ್ ರಸ್ತೆಗೆ ನಾಮಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಕೊಡಗಿನ ಅನೇಕ ಮಹನೀಯರು ತಮ್ಮ ಬದುಕನ್ನು ತ್ಯಾಗ ಮಾಡಿ ಪಾಲ್ಗೊಳ್ಳುವ ಮೂಲಕ ತಮ್ಮ ದೇಶ ಪ್ರೇಮದ ಬದ್ದತೆಯನ್ನು ಮೆರೆದಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ದಿ. ಪೂಜಾರಿರ ರಾಮಪ್ಪ ಅವರು ಒಬ್ಬರಾಗಿದ್ದು, ಅವರ ಹೆಸರನ್ನು ರಸ್ತೆಗೆ ನಾಮಕರಣ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಂದಿಸುವ ಅವಕಾಶ ದೊರಕಿದ್ದು, ಸಂತಸದ ಕ್ಷಣವಾಗಿದೆ ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಠಿಣ ಶಿಕ್ಷೆ ಅನುಭವಿಸಿ, ಗಾಂಧಿಯವರ ಆದರ್ಶಗಳೊಂದಿಗೆ ಬದುಕಿ ಮುಂದಿನ ಪೀಳಿಗೆಗೆ ಆದರ್ಶದ ಮಾರ್ಗವನ್ನು ತೋರಿದ ಪೂಜಾರಿರ ರಾಮಪ್ಪನವರ ಬದುಕು ಅವೀಸ್ಮರಣೀಯವಾದುದು ಎಂದರು.ಸ್ವಾತಂತ್ರ್ಯ ಹೋರಾಟಗಾರ ಪೂಜಾರಿರ ರಾಮಪ್ಪ ಟ್ರಸ್ಟ್ ಅಧ್ಯಕ್ಷ ಪೂಜಾರಿರ ಬೆಳ್ಯಪ್ಪಮಾತನಾಡಿ, ಈ ಸುದಿನಕ್ಕಾಗಿ ಕಳೆದ 29 ವರ್ಷಗಳಿಂದ ಟ್ರಸ್ಟ್ ಸದಸ್ಯರು ಪ್ರಯತ್ನಪಟ್ಟಿದ್ದು, ಶಾಸಕ ಪೊನ್ನಣ್ಣ ಅವರ ಸಹಕಾರದಿಂದ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು.
ಬರಹಗಾರ್ತಿ ಪೂಜಾರಿರ ಕೃಪಾದೇವರಾಜ್ ಅವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾದ ದಿ. ಪೂಜಾರಿರ ರಾಮಪ್ಪನವರ ವ್ಯಕ್ತಿ ಪರಿಚಯ ಮಾಡಿದರು.ಕಾರ್ಯಕ್ರಮಕ್ಕೆ ನೆರವು ನೀಡಿದ ಶಾಸಕ ಎ.ಎಸ್. ಪೊನ್ನಣ್ಣ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೇಕಲ್ ಕುಶಾಲಪ್ಪ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಹಾಗೂ ಗ್ರಾ.ಪಂ. ಅಧ್ಯಕ್ಷ ಪೂಜಾರಿರ ರಕ್ಷಿತ್ ಅವರನ್ನು ಪೂಜಾರಿರ ಕುಟುಂಬಸ್ಥರು ಸನ್ಮಾನಿಸಿದರು.
ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಶುಭ ಕೋರಿದರು. ಡಿಸಿಸಿ ಸದಸ್ಯ ಭೀಷ್ಮ ಮಾದಪ್ಪ, ಅರೆಭಾಷೆ ಗೌಡ ಅಕಾಡಮಿ ಸ್ಥಾಪಕ ಅಧ್ಯಕ್ಷ ತುಮ್ತಜೆ ಗಣೇಶ್, ಪ್ರಮುಖರಾದ ಪೂಜಾರಿರ ಮಾದಪ್ಪ, ಪೂಜಾರಿರ ನಾಣಯ್ಯ, ಪೂಜಾರಿರ ಜಗದೀಶ್, ಬಾಳಾಡಿ ಪ್ರತಾಪ್, ಅಂಬೇಕಲ್ ನವೀನ್ ಕುಶಾಲಪ್ಪ, ಪಿಡಿಒ ಮಮತಾ, ಕೇಟೋಳಿರ ಮೋಹನ್ ರಾಜ್ , ಪಿ.ಎಲ್. ಸುರೇಶ್, ತಾಪಂ ಮಾಜಿ ಸದಸ್ಯರಾದ ಕುಮುದ ರಶ್ಮಿ, ಮಂಞರ ಸಾಬು ತಿಮ್ಮಯ್ಯ, ಅಪ್ರು ರವೀಂದ್ರ, ಪೂಜಾರಿರ ಪ್ರದೀಪ್ ಕುಮಾರ್, ಪೂಜಾರಿರ ಧ್ರುವ, ತೆನ್ನಿರ ರಮೇಶ್ ಪೊನ್ನಪ್ಪ, ಮುಂಜಾಂದಿರ ಅಶೋಕ್, ಪೂಜಾರಿರ ಮೈತ್ರಿ, ಪೂಜಾರಿರ ಸೋನಿ ಇದ್ದರು.