ಕನ್ನಡಪ್ರಭ ವಾರ್ತೆ ಕುಷ್ಟಗಿ
ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜ.14ರಂದು ಸರ್ಕಾರದ ನಿರ್ದೇಶನದ ಪ್ರಕಾರವಾಗಿ ತಹಸೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಣೆ ಮಾಡಲಾಗುತ್ತದೆ. ಅಧಿಕಾರಿಗಳು ಹಾಗೂ ಸಮಾಜದವರು ಆಗಮಿಸಬೇಕು ಎಂದರು.
ಸುಮಾರು ಮೂರು ವರ್ಷಗಳಿಂದ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿ ಆಚರಣೆ ಮಾಡಿಲ್ಲ. ಆದ ಕಾರಣ ಈ ವರ್ಷ ಅದ್ಧೂರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜದ ಗುರುಗಳ ನೇತೃತ್ವದಲ್ಲಿ ಆಚರಿಸಬೇಕು. ಸರ್ಕಾರದಿಂದ ಬರುವ ಅನುದಾನವನ್ನು ಸರಿಯಾಗಿ ಕೊಡಬೇಕು ಎಂದು ಸಮಾಜದ ಮುಖಂಡರು ವಿನಂತಿಸಿಕೊಂಡರು.ಇದಕ್ಕೆ ತಹಸೀಲ್ದಾರ ಉತ್ತರಿಸಿ, ಸರ್ಕಾರದಿಂದ ಅನುದಾನ ಕೊಡಲು ನಾವು ಸಿದ್ಧ. ಆದರೆ ಕಾರ್ಯಕ್ರಮದ ಫೋಟೋ, ಕಾರ್ಯಕ್ರಮದ ವರದಿ, ಖರ್ಚು ಮಾಡಲಾಗಿರುವ ಬಿಲ್ಲು ನೀಡಬೇಕು. ತದ ನಂತರ ಬಿಲ್ ಮಾಡಿ ಕೊಡಲಾಗುತ್ತದೆ ಎಂದರು.
9ಕೆಎಸಟಿ1: ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರ ಜಯಂತಿಯ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿದರು.