ವಿದ್ಯಾರ್ಥಿಗಳಿಗೆ ಕಾರಂತರ ವ್ಯಕ್ತಿತ್ವ ಪರಿಚಯಿಸುವ ಕಾರ್ಯ ಅಗತ್ಯ: ಕೋಟ

KannadaprabhaNewsNetwork |  
Published : Dec 29, 2025, 03:15 AM IST
27ಬುಕ್ | Kannada Prabha

ಸಾರಾಂಶ

ಡಾ.ಭಾರತಿ ಮರವಂತೆ ರಚಿಸಿರುವ “ಬಹುಮುಖಿ ಕಾರಂತರು” ಕೃತಿಯನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು.

ಉಡುಪಿ: ಕಾರಂತರ ಬರವಣಿಗೆ ಬಹುಮುಖಿಯಾದದು, ಅವರಿಗೆ ಎಲ್ಲಾ ರೀತಿಯ ಅಧ್ಯಯನ ಕ್ಷೇತ್ರಗಳ ಆಳವಾದ ಪರಿಶ್ರಮವಿತ್ತು. ಈ ದೃಷ್ಟಿಯಿಂದ ಕಾರಂತರ ಬಹುಮುಖಿ ವ್ಯಕ್ತಿತ್ವವನ್ನು ಇಂದಿನ ಯುವ ಜನತೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟಿನ ಪ್ರಯತ್ನ ಶ್ಲಾಘನೀಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿಯು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಾರಂತರನ್ನು ಸರಳವಾಗಿ ಪರಿಚಯಿಸಲು ಹೊರ ತಂದಿರುವ ಟ್ರಸ್ಟಿನ ಸದಸ್ಯೆ ಡಾ.ಭಾರತಿ ಮರವಂತೆ ರಚಿಸಿರುವ “ಬಹುಮುಖಿ ಕಾರಂತರು” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು, ಕೃತಿ ಪ್ರಕಟಣೆಯ ಉದ್ದೇಶವನ್ನು ವಿವರಿಸಿದರು. ಟ್ರಸ್ಟಿನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ, ಸಿಬ್ಬಂದಿ ವರ್ಷಾ ಉಪಸ್ಥಿತರಿದ್ದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚಿತ ವಿದ್ಯುತ್‌, ₹2000ಕ್ಕೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ?
ಕರ್ನಾಟಕ ವಿದ್ಯುತ್‌ ವಿತರಣೆ ಖಾಸಗಿಗೆ?