ಕೊಪ್ಪಳ: ಕಾರ್ಖಾನೆ ದುಷ್ಪರಿಣಾಮದಿಂದ ಬಳಲುತ್ತಿರುವ ಜನರನ್ನು ಕಂಡೂ ಸರ್ಕಾರ ಕಣ್ಣು, ಕಿವಿ ಮುಚ್ಚಿಕೊಳ್ಳುವುದು ಸರಿಯಲ್ಲ ಎಂದು ಸಾಣೇಹಳ್ಳಿಯ ಶ್ರೀ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ ಹೇಳಿದರು.
ಗದಗ ತೋಂಟದ ಸಿದ್ದರಾಮ ಶ್ರೀಗಳು ಮಾತನಾಡಿ, ಹೋರಾಟದ ಮೂಲಕವೇ ಎಲ್ಲವನ್ನು ಪಡೆಯಬೇಕು. ಇದೊಂದು ವಿಚಿತ್ರದ ಕಾಲವಾಗಿದೆ. ಗಣಿಗಾರಿಕೆ ನಡೆಯಬಾರದು ಎಂದು ನಿರಂತರ ಹೋರಾಟ ಮಾಡಿದೆ. ಗಣಿಗಾರಿಕೆ ನಿಂತು ಹೋಗಿದೆ. ಹೋರಾಟದಿಂದ ಇದು ಸಾಧ್ಯವಾಗಿದೆ. ಗದಗ ಭಾಗದಲ್ಲಿ ಪೋಕ್ಸೋ ಕಂಪನಿ ಒದ್ದು ಓಡಿಸುವ ಕೆಲಸ ಮಾಡಿದ್ದು ನಮ್ಮ ಜನರು. ಸರ್ಕಾರದ ಮುಖ್ಯ ಗುರಿ ಜನ ಕಲ್ಯಾಣ ಮಾಡುವುದು. ಬಂಡವಾಳ ಶಾಹಿಪರ ನಿಲ್ಲುವುದು ಅಲ್ಲ. ಮುಂದೆ ಇದೇ ರೀತಿಯಾದರೆ ಇನ್ನಷ್ಟು ಸಮಸ್ಯೆ ಉಲ್ಭಣಗೊಳ್ಳಲಿದೆ. ಕಾರ್ಖಾನೆ ಬಾಧಿತ ಪ್ರದೇಶ ನಾವು ನೋಡಿದ್ದೇವೆ. ಇಲ್ಲಿನ ಪರಿಸರದ ಸ್ಥಿತಿ ನಾವು ನೋಡಿದ್ದೇವೆ. ಈ ಹೋರಾಟ ಜನಾಂದೋಲನವಾಗಿ ರೂಪವಾಗಲಿ ಎಂದರು.
ಜೀವರ್ಗಿಯ ಕರಿಬಸವ ಸ್ವಾಮೀಜಿ ಮಾತನಾಡಿ, ಕೊಪ್ಪಳದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಹೋರಾಟ ಜನರಿಗೆ ತಿಳಿದಿಲ್ಲವೇ? ಕೊಪ್ಪಳದ ರಾಜಕಾರಣಿಗಳಿಗೆ ಇಲ್ಲಿ ಮನಸ್ಸು ಕಲಕಲಿಲ್ಲವಾ ? ಈ ಸಮಾಜದಲ್ಲಿ ಕಣ್ಣೀರು ಒರೆಸುವವರ ಜತೆ ನಿಂತವರೇ ದೊಡ್ಡವರು. ಭಿಕ್ಷೆ ಕೊಟ್ಟರೆ ಸ್ವಾಮಿಗಳು ಬದುಕುತ್ತಾರೆ. ಜನರ ಮತದ ಭಿಕ್ಷೆ ಪಡೆದು ಶಾಸಕರು ಆಯ್ಕೆಯಾಗುತ್ತಾರೆ. ಜನ ರೊಚ್ಚಿಗೇಳುವ ಮೊದಲು ನ್ಯಾಯ ಒದಗಿಸಬೇಕು. ಜನ ಶಕ್ತಿ ಮುಂದೆ ಇದ್ಯಾವುದೂ ನಿಲ್ಲಲ್ಲ. ಕಾರ್ಖಾನೆಗಳ ಒದ್ದು ಹೋಡಿಸುವ ಕೆಲಸ ಮಾಡಬೇಕು. ಓಟು ಬೇಕಾದಾಗ ಬರುವ ಶಾಸಕರು ಜನರಿಗೆ ಘಾಸಿ ಮಾಡುವುದು ಸರಿಯಲ್ಲ ಎಂದರು.ಶಿಕ್ಷಣ ಉಳಿಸಿ ಹೋರಾಟ ಸಮಿತಿ ಮುಖಂಡ ರಾಜಶೇಖರ ಮಾತನಾಡಿದರು.