ಕನ್ನಡಪ್ರಭವಾರ್ತೆ ಜಗಳೂರು
ತಾಲೂಕಿನ ಚಿಕ್ಕಮಲ್ಲನಹೊಳೆ ಗ್ರಾಮದಲ್ಲಿ ಗುರುವಾರ ಜಲ ಅರ್ಪಣ್ ದಿವಸ್, ಚಿನ್ನಹಗರಿ ಜಿನಿಗಿ ಹಳ್ಳಕ್ಕೆ 4.95 ಕೋಟಿ ರು. ವೆಚ್ಚದ ಬ್ಯಾರೇಜ್ ನಿರ್ಮಾಣ, ಹಾಲೇಹಳ್ಳಿ ಜಿನಿಗಿ ಹಳ್ಳಕ್ಕೆ 5 ಕೋಟಿ ರು ವೆಚ್ಚದ ಬ್ಯಾರೇಜ್, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಿಸಿರಸ್ತೆ, ಡಾಂಬರ್ ರಸ್ತೆ, ಚರಂಡಿ ನಿರ್ಮಾಣ ಭೂಮಿ ಪೂಜೆ ಸೇರಿ ಒಟ್ಟು 16.30 ಕೋಟಿ ರು ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರ ಪ್ರೇಮ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನಗಳನ್ನು ನಾವೆಲ್ಲಾ ದೇವರಿಗಿಂತ ಹೆಚ್ಚು ಪ್ರೀತಿಸಬೇಕು. ಆದರೆ ಇಡೀ ರಾಜ್ಯದ ಜನ ಅಧಿವೇಶನವನ್ನು ನೋಡಿ ತಲೆ ತಗ್ಗಿಸುವ ರೀತಿಯಲ್ಲಿ ನನ್ನನ್ನು ಸೇರಿ ನೋಡುವಂತ ರೀತಿ ನಿಜಕ್ಕೂ ನೋವಾಗುತ್ತಿದೆ. ರಾಜ್ಯ ಸರಕಾರದ ಮೇಲೆ ವಿಪಕ್ಷಗಳು ಆಧಾರವಿಲ್ಲದ ಟೀಕೆ ಮಾಡುತ್ತಿವೆ. 5 ಗ್ಯಾರಂಟಿಗಳ ಮಧ್ಯೆ 60 ಸಾವಿರ ಕೋಟಿ ರೂ ವಾರ್ಷಿಕ ವ್ಯಯ ಮಾಡಲಾಗುತ್ತಿದೆ. ಖಜಾನೆಯಲ್ಲಿ ಹಣವಿಲ್ಲ, ಅಭಿವೃದ್ಧಿ ಇನ್ನೇನು ಮಾಡಲು ಸಾಧ್ಯ ಎಂದರು.ಜಿಪಂ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ್, ಜೆಜೆಎಂ ಕಾಮಗಾರಿ ಇಡೀ ರಾಜ್ಯದಲ್ಲೇ ನಮ್ಮ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಜಗಳೂರು ತಾಲೂಕಿನಲ್ಲಿ 10 ಗ್ರಾಮಗಳಲ್ಲಿ ನಿರಂತ ನೀರು ಸರಬರಾಜು ಆಗುತ್ತಿದೆ. ತೆರಿಗೆ ತುಂಬಿದರೆ ಮಾತ್ರ ಗ್ರಾಪಂಗಳಲ್ಲಿ ಕೆಲಸಗಳಾಗುತ್ತವೆ. ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯ ಸಹಭಾಗಿತ್ವದಿಂದ ಹಕ್ಕು ಮತ್ತು ಕರ್ತವ್ಯಗಳ ಪಾಲನೆಯಾಗುತ್ತದೆ ಎಂದರು.
ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಅಫ್ರಿನ್ ಬಾನು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.ಕುಡಿಯುವ ನೀರು ಸರಬಾರಜು ಎಕ್ಸಿಕಿಟ್ಯೂವ್ ಎಂಜಿನಿಯರ್ ಸೋಮ್ಲಾನಾಯ್ಕ್, ಎಇಇ ಸಾದಿಕ್ವುಲ್ಲಾ, ಜಿಪಂ ಎಇಇ ಶಿವಮೂರ್ತಿ, ಎಇ ವಿಜಯ್ಕುಮಾರ್, ತಾಪಂ ಇಒ ಕೆಂಚಪ್ಪ, ಎಇಇ ಚಂದ್ರಶೇಖರ್ ಗ್ರಾಪಂ ಅಧ್ಯಕ್ಷರಾದ ಚಂದ್ರಮ್ಮ ಪಿಡಿಒ ಅರುಣ್, ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ ಇದ್ದರು.