- ಬಿಜೆಪಿ ನಾರಿ ಶಕ್ತಿ ಬಳಗದಿಂದ ಭದ್ರಾ ನದಿಗೆ ಬಾಗಿನ ಅರ್ಪಣೆ
ರೈತರ ಹಿತರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತರೀಕೆರೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿಜೆಪಿ ನಾರಿ ಶಕ್ತಿ ಬಳಗದ ಮುಖಂಡರಾದ ಪದ್ಮಾವತಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಭದ್ರಾ ಡ್ಯಾಂ ತುಂಬಿದ ಹಿನ್ನಲೆಯಲ್ಲಿ ಬಿಜೆಪಿ ನಾರಿ ಶಕ್ತಿ ಬಳಗದಿಂದ ಲಕ್ಕವಳ್ಳಿ ಬಳಿ ಬಾಗಿನ ಅರ್ಪಿಸಿ ಮಾತನಾಡಿದರು.ಈ ಬಾರಿ ರಾಜ್ಯದಲ್ಲಿ ಮಳೆ ಚೆನ್ನಾಗಿ ಆಗಿರುವುದರಿಂದ ಎಲ್ಲಾ ಡ್ಯಾಮ್‌ಗಳು ತುಂಬಿ ರೈತರ ಮುಖದಲ್ಲಿ ಸಂತಸ ತುಂಬಿದೆ. ಹೀಗೆ ಪ್ರತಿ ವರ್ಷ ಡ್ಯಾಮ್ ತುಂಬಿ ರೈತರ ಮುಖದಲ್ಲಿ ನಗು ಕಾಣುವುದು ಸಂತೋಷದ ವಿಚಾರ. ನಮ್ಮ ರಾಜ್ಯದಲ್ಲಿ ಮಹಿಳಾ ರೈತರನ್ನು ಹೆಚ್ಚಾಗಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ಆದ್ಯತೆಯನ್ನು ಸರ್ಕಾರ ಮತ್ತು ನಾವೆಲ್ಲರೂ ನೀಡಬೇಕು. ಸಾವಯವ ಕೃಷಿ ಪದ್ಧತಿ ಕಡೆ ಸಾಗಲು ಪ್ರೇರೇಪಿಸ ಬೇಕು ಎಂದು ಹೇಳಿದರು.
ಬಾವಿಕೆರೆ ಗ್ರಾಪಂ ಅಧ್ಯಕ್ಷೆ ರೂಪ ಮಾತನಾಡಿ, ನಾವು ಈ ದಿನ ಶ್ವೇತಾ ಮತ್ತು ಜ್ಯೋತಿ ಇವರ ಹುಟ್ಟು ಹಬ್ಬವನ್ನ ಆಚರಿಸುವ ಜೊತೆಗೆ, ಭದ್ರ ಡ್ಯಾಮ್ ಗೆ ಬಾಗಿನ ಅರ್ಪರ್ಪಿಸಿರುವುದು ಸಂತೋಷದ ವಿಚಾರ. ಈಗ ಮಳೆ ಬಂದು ಭದ್ರ ಡ್ಯಾಮ್ ತುಂಬಿದ ಹಿನ್ನೆಲೆಯಲ್ಲಿ ಈ ಭಾಗದ ಎಲ್ಲ ರೈತರು ಎರಡು ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಈ ಭಾಗದ ರೈತರ ಸಂಕಷ್ಟ ದೂರಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯ. ಇದೇ ರೀತಿ ಪ್ರತಿ ವರ್ಷ ಮಳೆ ಬಂದು ಡ್ಯಾಮ್ ತುಂಬಿ ಪ್ರಾಣಿ ಪಕ್ಷಿ, ಕುಡಿವ ನೀರಿನ ಜೊತೆಗೆ ರೈತರಿಗೆ ಅನುಕೂಲವಾಗಲಿ ಎಂದು ತಿಳಿಸಿದರು.
ಬಿಜೆಪಿ ನಾರಿ ಶಕ್ತಿಯ ಅರುಂಧತಿ ಮಾತನಾಡಿ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಪ್ರತೀಕವೇ ನಮ್ಮ ನದಿಗಳು, ಭದ್ರಾ ನದಿ ತುಂಬಿ ಹರಿಯುತ್ತಿರುವುದು ನಮ್ಮೆಲ್ಲರಿಗೂ ಸಂತಸ. ಇಂಥ ದೇವತೆ ಸ್ವರೂಪದ ಭದ್ರಗೆ ನಾರಿ ಶಕ್ತಿಯಿಂದ ಈ ದಿನ ಬಾಗಿನ ಅರ್ಪಿಸಿರುವುದು ಖುಷಿ ತಂದಿದೆ ಎಂದರು.
8ಕೆಟಿಆರ್.ಕೆ.2ಃ