ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಪ್ರದಾಯಿಕ ದಿನಾಚರಣೆ
ಕನ್ನಡಪ್ರಭ ವಾರ್ತೆ, ಶೃಂಗೇರಿತಲತಲಾಂತರದಿಂದ ನಮ್ಮ ಪೂರ್ವಿಕರು ಉಳಿಸಿ ಬೆಳೆಸಿಕೊಂಡು ಬಂದಿರುವ ಸಂಸ್ಕೃತಿ, ಪರಂಪರೆ, ಸಂಪ್ರದಾಯವನ್ನು ಉಳಿಸಿ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಹೋಗುವ ಮಹತ್ತರ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಹೇಳಿದರು.
ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ದಿನಾಚರಣೆ ಕಾರ್ಯಕ್ರಮ ಉದ್ಧಾಟಿಸಿ ಮಾತನಾಡಿದರು. ಇತ್ತಿಚಿನ ದಿನಗಳಲ್ಲಿ ನಮ್ಮ ಪ್ರಾಚೀನ ಸಂಪ್ರದಾಯಗಳು, ಸಂಸ್ಕೃತಿಗಳು, ಆಚರಣೆ, ಪರಂಪರೆಗಳು ಮಾಯವಾಗುತ್ತಿದೆ. ಜಾನಪದ ಸಂಸ್ಕೃತಿಗಳು, ಕಲೆಗಳು, ಹಬ್ಬ ಹರಿದಿನಗಳು ನಶಿಸುತ್ತಿವೆ. ಗ್ರಾಮೀಣ ಸೊಗಡು, ಶೈಲಿಗಳು ಅವನತಿ ಹೊಂದುತ್ತಿದೆ.ನಶಿಸುತ್ತಿರುವ ಗ್ರಾಮೀಣ ಸಂಸ್ಕೃತಿ, ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದ ನಡುವೆಯೂ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ. ನಾವು ಎಲ್ಲೇ ಇದ್ದರೂ ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ನಮ್ಮ ಊರು, ಮನೆಗಳಿಗೆ ಬಂದು ಆಚರಣೆ ಮಾಡುವ ಮೂಲಕ ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಕಾಲೇಜುಗಳಲ್ಲಿ ಇಂತಹ ಸಾಂಪ್ರದಾಯಿಕ ದಿನಾಚಾರಣೆ ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ, ಪರಂಪರೆ ಉಲಿಸಿ ಬೆಳೆಸುವ ಕೆಲಸ ಮಾಡಬಹುದಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ಮಾದರಿ, ಸಾಂಪ್ರದಾಯಿಕ ಹಬ್ಬಗಳ ಆಚರಣೆ, ವಿಭಿನ್ನ ಉಡುಗೆ ತೊಡುಗೆಗಳು, ವಿವಿಧ ರೀತಿಯ ಆಹಾರ ಪದಾರ್ಥಗಳು, ಮಲೆನಾಡು ಶೈಲಿಯ ಆಚರಣೆ, ಸಂಗೀತ, ಕಲೆ ಇತ್ಯಾದಿಗಳ ಮೂಲಕ ವಿಭಿನ್ನವಾಗಿ ಆಚರಣೆ ಮಾಡಿದರು.ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಆಶಾ ಬಾರ್ಕೂರು, ವಾಣಿಜ್ಯ ಶಾಸ್ತ್ರ ವಿಭಾಗದ ಡಾ.ಆಶಾ, ಡಿ.ಮಂಜುನಾಥ್, ಅರ್ಥಶಾಸ್ತ್ರ ವಿಭಾಗದ ತೇಜಸ್ವಿನಿ, ಇಂಗ್ಲೀಷ್ ವಿಭಾಗದ ರಾಘವೇಂದ್ರ ರೆಡ್ಡಿ, ಮರಿಸ್ವಾಮಿ, ಮೇಘಾನಂದ, ಅಬೂಬಕರ್, ಮಂಜುನಾಥ್, ರಾಮಕೃಷ್ಣ ,ಬಿಂಬ ಮತ್ತಿತರರು ಇದ್ದರು.
4 ಶ್ರೀ ಚಿತ್ರ 3-ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನಾಚಾರಣೆ ಕಾರ್ಯಕ್ರಮ ನಡೆಯಿತು.