ಕನ್ನಡಪ್ರಭ ವಾರ್ತೆ ತಾಳಿಕೋಟೆ
ಮನಃಸಾಕ್ಷಿ ಇರುವ ವ್ಯಕ್ತಿ ತನ್ನನ್ನು ಯಾರೂ ನೋಡದಿರುವ ಸಂದರ್ಭದಲ್ಲಿಯೂ ಪ್ರಾಮಾಣಿಕನಾಗಿರುತ್ತಾನೆ. ಮನಃಸಾಕ್ಷಿ ಇಲ್ಲದ ವ್ಯಕ್ತಿ ಮಾಡುವ ತಪ್ಪು ಇತರರ ಕಣ್ಣಿಗೆ ಕಾಣಿಸಲಿಲ್ಲಾವೆಂದರೆ ಧಾರಳವಾಗಿ ತಪ್ಪು ಮಾಡುತ್ತಿರುತ್ತಾನೆಂದು ಪಡೇಕನೂರ ದಾಸೋಹ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.ಸ್ಥಳೀಯ ಶ್ರೀ ಶರಣಮುತ್ಯಾರವರ ಜಾತ್ರೋತ್ಸವ ಕುರಿತು ಸಾಗಿಬಂದ ಶ್ರೀ ಗುರು ನಿರುಪಾದೀಶ್ವರರ ಮಹಾ ಪುರಾಣ ಮಂಗಲೋತ್ಸವ ಕುರಿತು ಏರ್ಪಡಿಸಲಾದ ಧರ್ಮಸಭೆ ಹಾಗೂ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿ, ಮನಃಸಾಕ್ಷಿ ಎಂಬುವುದು ಎಷ್ಟು ಹೆಚ್ಚು ಬಲವಾಗಿರುತ್ತದೆಯೋ ಮಾನವ ಅಷ್ಟು ಹೆಚ್ಚು ಶ್ರೇಷ್ಠ ವ್ಯಕ್ತಿಯಾಗಿರುತ್ತಾನೆ. ಮನಃಸಾಕ್ಷಿ ಎಂಬುವುದು ದೇವರ ಪ್ರತಿನಿಧಿ. ಒಬ್ಬ ಮನುಜನಲ್ಲಿ ಮನಃ ಸಾಕ್ಷಿ ಇದೆ ಎಂದರೆ ಆತನಲ್ಲಿ ದೇವರಿದ್ದಾನೆಂಬ ಅರ್ಥ ಎಂದು ಹೇಳಿದ ಶ್ರೀಗಳು, ಮನಃಸಾಕ್ಷಿ ಇರುವ ವ್ಯಕ್ತಿ ಸಾಮಾನ್ಯವಾಗಿ ತಪ್ಪು ಮಾಡುವುದಿಲ್ಲ. ಮೋಸ, ವಂಚನೆ ಅನ್ಯಾಯ ಅಕ್ರಮ ಅನ್ಯಾಯ ಮುಂತಾದ ಪಾಪಗಳನ್ನು ಮಾಡುವುದಿಲ್ಲ. ಕಾರಣ ಮನಃಸಾಕ್ಷಿ ಎಂದರೇನು ಎಂಬುವುದನ್ನು ಮನುಜ ಮೊದಲು ಅರಿತುಕೊಳ್ಳಬೇಕೆಂದರು.
ಮಾನವರಾದ ನಮ್ಮಲ್ಲಿ ಸದ್ಗುಣಗಳನ್ನು ಹೊಂದಿದ್ದರೆ ಪುಣ್ಯಮಾಡಿದಂತೆ. ಯಾವ ರೀತಿ ಕಾಗೆ ಹಾಗೂ ಕೋಳಿಗಳು ತನ್ನ ಬಳಗ ಎಲ್ಲವನ್ನು ಕರೆದು ಉಣಬಡಿಸುತ್ತವೆಯೋ ಅಂತಹ ಗುಣ ಬಂದಿತೆಂದರೆ ನಿಜವಾದ ಮಾನವನಾಗುತ್ತಾನೆಂದರು.ಇನ್ನೋರ್ವ ಸಮ್ಮುಖವಹಿಸಿದ ಕುಡಲೂರ ಅಡವಿಸಿದ್ದೇಶ್ವರ ಮಠದ ಶ್ರೀ ಗೋಪಾಲಸ್ವಾಮಿ ಶರಣರು ಮಾತನಾಡಿದರು. ಇನ್ನೋರ್ವ ವೀ.ವಿ.ಸಂಘದ ಅಧ್ಯಕ್ಷ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ) ಅವರು ಮಾತನಾಡಿದರು. ಶ್ರೀ ಶರಣರ ಮಠದ ಶ್ರೀ ಬಸಣ್ಣಮುತ್ಯಾ ಶರಣರು ನೇತೃತ್ವ ವಹಿಸಿದ್ದರು. ಶ್ರೀ ಶರಣರ ಮಠದ ಶ್ರೀ ಶರಣಪ್ಪಮುತ್ಯಾ ಶರಣರು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಆನಂದ ಮದರಕಲ್ಲ, ಶ್ರೀ ಖಾಸ್ಗತೇಶ್ವರ ಸಂಗೀತ ಪಾಠ ಶಾಲೆಯ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ಹಾಗೂ ಸಂಗೀತ ಪಾಠ ಶಾಲೆಯ ವಿಧ್ಯಾರ್ಥಿನಿಯರು. ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕರಿಭಾವಿಯ ಶರಣಗೌಡ ಪೊಲೀಸ್‌ಪಾಟೀಲ ಅವರು ಪ್ರಾಸ್ತಾವಿಕ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯದ ಬಿ.ಕೆ.ಸುವರ್ಣಅಕ್ಕನವರು, ಭಂಟನೂರಿನ ಶರಣೆ ಕಾಶಿಬಾಯಿ ಅಮ್ಮನವರು, ಬಿ.ಕೆ.ಕಾಶಿಬಾಯಿ ಅಜ್ಜಿ, ಶರಣೆ ಕಾಶಿಬಾಯಿ, ಕಾಶಿಬಾಯಿ ಶರಣರ, ಪ್ರೇಮಾಬಾಯಿ ದೇಗಿನಾಳ, ಬಿ.ಕೆ.ಬಸವರಾಜ, ಬಿ.ಕೆ.ಪಾರ್ವತಿ, ಬಿ.ಕೆ.ರತ್ನಾ, ಸಿದ್ದನಗೌಡ ಪೊಲೀಸ್‌ಪಾಟೀಲ(ಕರಿಭಾವಿ), ಬಂಡೆಪ್ಪಗೌಡ ಬಿರಾದಾರ, ಸಿದ್ದಣ್ಣ ಶರಣರ, ಮಲ್ಲಣ್ಣ, ಲಿಂಗರಾಜ, ಸಂಗಮೇಶ, ಹಾಗೂ ಕಾಶಿರಾಯ ದೇಸಾಯಿ(ಶಳ್ಳಗಿ), ಸಂಗಣ್ಣ ಹೂಗಾರ, ಶಾಂತಗೌಡ ಬಿರಾದಾರ, ಮಲ್ಲಣ್ಣ ಇಂಗಳಗಿ, ಶರಣಗೌಡ ಬಿರಾದಾರ, ತಿಪ್ಪಣ್ಣ ಸಜ್ಜನ, ಶ್ರೀಕಾಂತ ಕುಂಭಾರ, ಹಾಗೂ ಸಂಗೀತಗಾರರಾದ ಕುಮಾರ ಕುದರಗುಂಡ, ಬಸನಗೌಡ ಬಿರಾದಾರ, ವಾಯಿಲಿನ್ ವಾದಕ ಯಲ್ಲಪ್ಪ ಗುಂಡಳ್ಳಿ, ಮೊದಲಾದವರು ಉಪಸ್ಥಿತರಿದ್ದರು. ಮಹಿಳಾ ವಿಶ್ವ ವಿದ್ಯಾಲಯದ ವಿಜಯಕುಮಾರ ಹಿರೇಮಠ ನಿರೂಪಿಸಿ ವಂದಿಸಿದರು.