ಹಾವೇರಿ:ಕನ್ನಡೇತರರಿಗೆ ಕನ್ನಡವನ್ನು ಪರಿಚಯ ಮಾಡಿಕೊಡುವುದು, ಕನ್ನಡಿಗರಲ್ಲಿ ಆತ್ಮಾಭಿಮಾನ ಬೆಳೆಸುವುದು, ಕನ್ನಡ ಸಾಹಿತ್ಯವನ್ನು ಬೆಳೆಸುವುದು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಪರ ಸಂಘಟನೆಗಳ ಮೂಲ ಕನಸು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಪ್ರಾಚಾರ್ಯರಾದ ಡಾ. ಸೋಮನಾಥ ಡಿ. ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕವಿತೆಗಳು ನೇರವಾಗಿ ಹೃದಯವನ್ನು ಮುಟ್ಟುವ ಶಕ್ತಿಯನ್ನು ಹೊಂದಿರುತ್ತದೆ. ಭಾವನೆಗಳ ಕಲಾತ್ಮಕ ಅಭಿವ್ಯಕ್ತಿಯನ್ನು ನೇರವಾಗಿ ಎಚ್ಚರಿಸುವ ಶಕ್ತಿ ಕವಿತೆಗಳಿಗಿದೆ ಎಂದರು.
ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ರಾಜ್ಯಾಧ್ಯಕ್ಷ ಎಸ್.ಡಿ. ಮುಡೆಣ್ಣನವರ ಮಾತನಾಡಿ, ಹಾವೇರಿಯಲ್ಲಿ ಜರುಗಿದ 2ನೇ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಯಿತು. ಇದಕ್ಕೆ ಕಾರಣ ಹಾವೇರಿಯ ಜನತೆ, ಸಾಹಿತಿಗಳು, ಕಲಾವಿದರು ಮಾಧ್ಯಮದವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಡಾ. ಸತೀಶ ಕುಲಕರ್ಣಿ, ಚಂಪಾ ಹುಣಸಿಕಟ್ಟಿ, ಲತಾ ಹಳಕೊಪ್ಪ, ಹೇಮಾವತಿ ಮುದ್ದಿ, ಡಾ.ಈ.ಎಚ್. ಇಮ್ರಾಪುರ, ಜಿ.ಎಂ. ಓಂಕಾರಣ್ಣನವರ, ಡಾ.ಗೀತಾ ಸುತ್ತಕೋಟಿ, ಉಡಚಪ್ಪ ಮಾಳಗಿ, ಡಾ.ರಮೇಶ ಅಂಬಿಗೇರ, ನಾಗರಾಜ ಹುಡೇದ ಇದ್ದರು.
ಜಯಶ್ರೀ ಅಂಕಲಕೋಟಿ ಪ್ರಾರ್ಥಿಸಿದರು. ಭಾರತಿ ಯಾವಗಲ್ ಸಂಗಡಿಗರು ನಾಡಗೀತೆ ಹಾಡಿದರು. ರೇಣುಕಾ ಮಡಿವಾಳರ ಸ್ವಾಗತಿಸಿದರು. ಪದ್ಮಾವತಿ ಕಲ್ಲು ನಿರೂಪಿಸಿದರು.