ಕನ್ನಡಪ್ರಭ ವಾರ್ತೆ ಮೈಸೂರು
ಮಾನಸ ಗಂಗೋತ್ರಿಯ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ರಂಗಸ್ವಾಮಿ ಅವರಿಗೆ ಸಲ್ಲಿಸಿದ ಅಭಿವರ್ಧನ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ರಂಗಸ್ವಾಮಿಯವರು ವಿಶ್ವವಿದ್ಯಾನಿಲಯದ ಕುಲಪತಿಯಾಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ಅವರು ಹೊಂದಿರುವ ಕನ್ನಡದಲ್ಲಿನ ವಿದ್ವತ್ತು, ವಿವೇಕ, ಅರ್ಹತೆ ಬೇರೆ ಯಾವುದೇ ವಿಷಯದಲ್ಲಿ ಹೊಂದಿದ್ದರೂ ಅವರಿಂದು ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯುತ್ತಿದ್ದರು. ಆದರೆ ಕನ್ನಡದ ಚೌಕಟ್ಟಿನೊಳಗೆ ಸೀಮಿತಗೊಳಿಸಿಕೊಂಡ ರಂಗಸ್ವಾಮಿ ಅವರಿಗೆ ಸಿಗಬೇಕಾದ ಗೌರವ, ಸ್ಥಾನಮಾನ ಕರ್ನಾಟಕದ ಒಳಗೆ ಅವಕಾಶ ವಂಚಿತರನ್ನಾಗಿ ಮಾಡಿತು ಎಂದು ಅವರು ಹೇಳಿದರು.ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಅಧ್ಯಾಪಕರ ಕೊರತೆ ಇತ್ತು. ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರನ್ನು ನಿಯೋಜಿಸಿಕೊಂಡು ಅಲ್ಲಿನ ಅಧ್ಯಾಪಕರಿಗೆ ಇಲ್ಲಿ ವೇತನ ನೀಡಲಾಗುತ್ತಿತ್ತು. ಇದಕ್ಕೆ ಮುಕ್ತಿ ನೀಡಿ ಕಾಯಂ ಅಧ್ಯಾಪಕ ಅಧ್ಯಾಪಕೇತರರನ್ನು ನೇಮಕ ಮಾಡಿಕೊಂಡ ಕೀರ್ತಿ ನಮ್ಮಿಬ್ಬರ ಕಾಲದ್ದು ಎಂಬ ಹೆಮ್ಮೆ ನಮಗಿದೆ. ಅವರೆಲ್ಲರು ಇಂದು ಈ ಕಾರ್ಯಕ್ರಮದಲ್ಲಿ ಡಾ. ಎ.ರಂಗಸ್ವಾಮಿ ಅವರಿಗೆ ಕೃತಜ್ಞತಾಪೂರ್ವಕ ಅಭಿನಂದನೆ ಸಲ್ಲಿಸಬೇಕಾಗಿತ್ತು. ಆದರೆ ಅವರ ಅನುಪಸ್ಥಿತಿ ಅವರಿಗೆ ಅವರೇ ಮಾಡಿಕೊಂಡ ಆತ್ಮವಂಚನೆಯಾಗಿದೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಯಾವುದೋ ವಿಶ್ವವಿದ್ಯಾನಿಲಯದ ವಿಭಾಗದಂತಿತ್ತು. ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಫಂಡ್ ಇರಲಿಲ್ಲ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಕೊಡಲೇಬೇಕೆಂದು ಹಠ ಹಿಡಿದು ಫಂಡ್ ಬಿಡುಗಡೆಗೊಳಿಸಿದೆವು. ಆ ಫಂಡ್ ನಿಂದ ಕೆಎಸ್.ಓಯು ಗೆ ಒಂದು ನಿರ್ಧಿಷ್ಟ ರೂಪಕೊಟ್ಟು ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿದೆವು. ಇದರ ಹಿಂದಿನ ಧಣಿವರಿಯದ ಸೇವೆ ಡಾ. ಎ. ರಂಗಸ್ವಾಮಿ ಅವರದು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪಿ. ಬೆಟ್ಟೇಗೌಡ ಅವರು ಅಭಿನಂದನಾ ಗ್ರಂಥ ಕುರಿತು ಮಾತನಾಡಿದರು.ಅರಕಲಗೂಡಿನ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ರಾಗೌ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮತ್ತು ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ್ ಗೌಡ ಮತ್ತು ಸಂಘಟಕರಾದ ಡಾ. ನೀ.ಗೂ. ರಮೇಶ್, ಡಾ.ಮೈಸೂರು ಉಮೇಶ್ ಮೊದಲಾದವರು ಇದ್ದರು.