ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ವತಿಯಿಂದ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಸಭಾಭವನದಲ್ಲಿ ನಡೆದ ತಂಬಾಕು ಮುಕ್ತ ಸಮಾಜ ಜಾಗೃತಿ ಹಾಗೂ ಕೃತಕ ಕಾಲು ಜೋಡಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 18 ರಿಂದ 25 ರ್ಷದೊಳಗಿನ ಯುವಕ ಯುವತಿಯರು ಇತ್ತೀಚಿನ ದಿನಗಳಲ್ಲಿ ಹೆಚ್ಚು ವ್ಯಸನದ ದಾಸರಾಗುತ್ತಿದ್ದಾರೆ. ತಂಬಾಕು ಸೇವನೆಯಿಂದ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುವುದರೊಂದಿಗೆ ಇತರರಿಗೂ ತೊಂದರೆ ತಂದೊಡ್ಡುತ್ತಿದ್ದಾರೆ. ಆದ್ದರಿಂದ ತಂಬಾಕು ಉತ್ಪನ್ನಗಳಿಂದ ದೂರವಿದ್ದು ಉತ್ತಮ ಜೀವನ ಶೈಲಿ ಅನುಸರಿಸಬೇಕು ಎಂದರು.
ಸಂತ ಅನ್ನಮ್ಮ ಚರ್ಚ್ ನ ಬ್ರದರ್ ಜಯಂತ್ ಮಾತನಾಡಿ ತಂಬಾಕು ಸೇವನೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾನಿ ಮಾಡುತ್ತದೆ ಎಂದರು.ಸಂತ ಅನ್ನಮ್ಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್ ವಿದ್ಯಾರ್ಥಿಗಳಲ್ಲಿ ದುಶ್ಚಟ ಬೆಳೆಯದಂತೆ ನೋಡಿಕೊಳ್ಳಬೇಕು. ತಂಬಾಕು ಸೇವನೆ ಕ್ಷಣದ ಆನಂದ ನೀಡಿದರೂ ಅದು ಬೀರುವ ದುಷ್ಪರಿಣಾಮ ಕಠಿಣವಾಗಿರುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವಹಿಸಿದ್ದ ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜದ ಅಧ್ಯಕ್ಷ ಸುಮೇಶ್ ಮಾತನಾಡಿದರು.
ವಿರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿ ಪ್ರಮೋದ್ , ಸಮಾಜ ಸೇವಕ ಚೋಕಂಡ ಸಂಜು, ಕೇಂದ್ರ ಮಹಿಳಾ ಆಯೋಗದ ಸಲಹೆಗಾರ ಸಂಪನ್ಮೂಲ ವ್ಯಕ್ತಿ ಪಿ.ಎಸ್. ಶರತ್ ಮಾತನಾಡಿದರು.ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿರುವ ಧನೇಶ್ವ ಅವರಿಗೆ ದಾನಿಗಳಾದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಪೊಯ್ಯೇಟಿರ ಚಂಗಪ್ಪ, ಮಾಳೇಟಿರ ದೇವಯ್ಯ, ಮುಕ್ಕಾಟಿರ ಬೋಪಣ್ಣ, ಸಮಾಜ ಸೇವಕ ಚೋಕಂಡ ಸಂಜು, ಹಿಂದೂ ಮಲೆಯಾಳಿ ಅಸೋಸಿಯೇಷನ್ ನ ಜಿಲ್ಲಾ ಕಾರ್ಯದರ್ಶಿ, ಆರೆಂಜ್ ಕೌಂಟಿ ಸಂಸ್ಥೆ ಮತ್ತು ಶ್ರೀ ಮುತ್ತಪ್ಪನ್ ಮಲೆಯಾಳಿ ಸಮಾಜದ ಸದಸ್ಯರ ಸಹಕಾರದಿಂದ ಸುಮಾರು 2.25 ಲಕ್ಷದ ಕಾರ್ಬನ್ ಫೈಬರ್ ಪಾದ, ಸಿಲಿಕಾನ್ ಲೀನಿಯರ್ ಮತ್ತು ಸಾಕೆಟ್‌ನೊಂದಿಗೆ ಹೈಟೆಕ್ ಪ್ರಾಸ್ಟೆಸಿಸ್ ನ ಕೃತಕ ಕಾಲನ್ನು ಡಾ. ತ್ಯಾಗರಾಜ್ ಫಲಾನುಭವಿಗಳಿಗೆ ಅಳವಡಿಸಿದರು. ಕೇಂದ್ರ ಮಹಿಳಾ ಆಯೋಗದ ಸಲಹೆಗಾರ, ಸಂಪನ್ಮೂಲ ವ್ಯಕ್ತಿ ಪಿ.ಎಸ್. ಶರತ್ ಅವರು ಧನೇಶ್ ರವರಿಗೆ ಲ್ಯಾಪ್ ಟಾಪ್ ಕೊಡುಗೆ ನೀಡಿದರು.
ಇವಾಲ್ವ್ ಬ್ಯಾಂಕ್ ರೆಸಾರ್ಟ್ ವಸಂತಕುಮಾರ್ , ಸಂತ ಅನ್ನಮ್ಮ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಟೀನಾ ಫರ್ನಾಂಡಿಸ್, ಜುಮ್ಮಾ ಮಸೀದಿಯ ಅಧ್ಯಕ್ಷ ಕೆ ಪಿ ರಶೀದ್ , ಸಹರಾ ಫ್ರೆಂಡ್ಸ್ ತಂಡದ ರಾವುಫ್ , ವಿರಾಜಪೇಟೆ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಲತಾ ಉಪಸ್ಥಿತರಿದ್ದರು.