ಕನ್ನಡಪ್ರಭ ವಾರ್ತೆ ಮಂಡ್ಯ
೨೦೦೫ರಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಕುಮಾರ್ ಕೊಪ್ಪ ಅವರನ್ನು ಮನ್‌ಮುಲ್‌ಗೆ ನಾಮನಿರ್ದೇಶನ ಮಾಡಿದ್ದು, ಆಗ ಡಿ.ಸಿ.ತಮ್ಮಣ್ಣನವರು ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು. ಆನಂತರ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಸಮಯದಲ್ಲಿ ಕೆ.ರಮೇಶ್ ಅವರನ್ನು ನಿರ್ದೇಶಕರನ್ನಾಗಿ ಮಾಡಲಾಯಿತು. ಸಾತನೂರು ಜಯರಾಂ ತಪ್ಪಾಗಿ ಅರ್ಥೈಸಿಕೊಂಡು ಮಾತನಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಇನ್ನು ತಾಲೂಕು ಪಂಚಾಯ್ತಿ ಕ್ಷೇತ್ರವೊಂದಕ್ಕೆ ಬಿ-ಫಾರಂ ನೀಡದೆ ಕುಮಾರ್ ಕೊಪ್ಪ ಅವರಿಗೆ ಅಪಮಾನ ಮಾಡಲಾಗಿದೆ ಎಂಬುದು ಸರಿಯಲ್ಲ, ಪಕ್ಷದ ನಾಯಕರು ಬೇರೊಬ್ಬರಿಗೆ ಟಿಕೆಟ್ ನೀಡಿದ್ದು ನಿಜ. ಆದರೂ ಕಾಂಗ್ರೆಸ್ ಕಾರ್ಯಕರ್ತರಾದ ನಾವು ಕುಮಾರ್ ಕೊಪ್ಪ ಅವರಿಗೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಒತ್ತಾಯ ಮಾಡಿದರೂ ಅದನ್ನು ಅವರು ತಿರಸ್ಕರಿಸಿ ಪಕ್ಷಕ್ಕಾಗಿ ಕೆಲಸ ಮಾಡಿದರು. ಅವರ ಪಕ್ಷ ನಿಷ್ಠೆ ಹಾಗೂ ಸಂಘಟನಾ ಚಾತುರ್ಯವನ್ನು ಮೆಚ್ಚಿ ಹೈಕಮಾಂಡ್ ಅವರಿಗೆ ಉನ್ನತ ಸ್ಥಾನ ನೀಡಿದೆ. ಇದನ್ನು ಸಹಿಸದ ಕೆಲವರು ಇಲ್ಲದ ಪಿತೂರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಇನ್ನು ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಕುಮಾರ್‌ಕೊಪ್ಪ ಅವರಿಗೆ ಅಪಮಾನ ಮಾಡಿಲ್ಲ. ಗಣೇಶನ ಹಬ್ಬದ ವೇಳೆ ನಾವು ಹೋಗಿದ್ದಾಗ ಅವರ ತಾಯಿ ಮಾಜಿ ಶಾಸಕಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಅವರು ಆಶೀರ್ವಾದ ಮಾಡಿದರು. ರಮೇಶ್ ಹೊರಗೆ ಬಂದು ನಮ್ಮ ಅಭಿಮಾನವನ್ನು ಸ್ವೀಕರಿಸಿ ಬೆನ್ನು ತಟ್ಟಿ ಕೆಲಸ ಮಾಡುವಂತೆ ಪ್ರೋತ್ಸಾಹ ನೀಡಿ ಕಳುಹಿಸಿದರು. ಅವರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
ಮುಖಂಡರಾದ ಕೆ. ರಮೇಶ್, ಕ್ರಾಂತಿಸಿಂಹ, ಎಂ. ನಾರಾಯಣ್, ವೆಂಕಟೇಶ್, ರಾಜಶೇಖರ್, ರಾಜೇಂದ್ರಸಿಂಗ್ ಬಾಬು ಅವರು ಗೋಷ್ಠಿಯಲ್ಲಿದ್ದರು.