ಜಗಜ್ಯೋತಿ ಬಸವೇಶ್ವರ ನಮ್ಮ ದಾರಿದೀಪ

KannadaprabhaNewsNetwork | Published : May 1, 2025 12:45 AM

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ವೈಚಾರಿಕತೆ ತಳಹದಿಯ ಮೇಲೆ ಸಮಸಮಾಜ ನಿರ್ಮಾಣ ಮಾಡಿದ ಬಸವಣ್ಣನವರ ಆಚಾರ, ವಿಚಾರ, ತತ್ವಗಳನ್ನು ಅಳವಡಿಸಿಕೊಂಡು ಮಿರಗಿ ಗ್ರಾಮದಲ್ಲಿ ಬಸವಾಭಿಮಾನಿಗಳು ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸಿದ್ದು ಶ್ಲಾಘನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು

ಕನ್ನಡಪ್ರಭ ವಾರ್ತೆ ಇಂಡಿ

ವೈಚಾರಿಕತೆ ತಳಹದಿಯ ಮೇಲೆ ಸಮಸಮಾಜ ನಿರ್ಮಾಣ ಮಾಡಿದ ಬಸವಣ್ಣನವರ ಆಚಾರ, ವಿಚಾರ, ತತ್ವಗಳನ್ನು ಅಳವಡಿಸಿಕೊಂಡು ಮಿರಗಿ ಗ್ರಾಮದಲ್ಲಿ ಬಸವಾಭಿಮಾನಿಗಳು ಬಸವಣ್ಣನವರ ಪುತ್ಥಳಿ ಅನಾವರಣಗೊಳಿಸಿದ್ದು ಶ್ಲಾಘನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ತಾಲೂಕಿನ ಮಿರಗಿ ಗ್ರಾಮದಲ್ಲಿ ಬಸವ ಕೇಂದ್ರ ಹಾಗೂ ಬಸವ ಸೇನೆ ಹಮ್ಮಿಕೊಂಡ ಬಸವ ಜಯಂತಿ, ಬಸವ ಪುತ್ಥಳಿ ಅನಾವರಣ ಹಾಗೂ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವ ಹಾಗೂ ಬಸವಣ್ಣನವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವ ಮಹತ್ವದ ಕೆಲಸ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದಿಸುವುದಾಗಿ ಹೇಳಿದರು.

ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವೆಂದು ಸಾರಿದ ಜಗಜ್ಯೋತಿ ಬಸವಣ್ಣನವರು ನಮ್ಮೆಲ್ಲರ ಜೀವನಕ್ಕೆ ದಾರಿದೀಪವಾಗಿ. ಶ್ರದ್ಧೆ, ಶಿಷ್ಟತೆ ಮತ್ತು ಸಮತೆಯ ಮಾರ್ಗವನ್ನು ತೋರಿದ ಮಹಾನ್ ಶರಣರು. ಬಸವಣ್ಣನವರ ಶರಣ ಸಂಸ್ಕೃತಿ ಮತ್ತು ವಚನಗಳು ನಮ್ಮೊಳಗೆ ಮೌಲ್ಯ, ಧೈರ್ಯ ಮತ್ತು ನೈತಿಕತೆ ಬೆಳೆಸಲಿವೆ. ಬಸವ ಜಯಂತಿಯ ಈ ದಿನದಂದು, ದೇಶಕ್ಕೆ ಶಾಂತಿ, ಜನತೆಗೆ ನೆಮ್ಮದಿ ತರಲಿ. ಸಂಕಷ್ಟಗಳು ದೂರವಾಗಿ, ಸಂತೋಷ ಬೆಳಗಲಿ ಎಂದು ಶುಭ ಹಾರೈಸಿದರು.

ಬಸವ ಕೇಂದ್ರದ ಜಿಲ್ಲಾಧ್ಯಕ್ಷ ನಾನಾಗೌಡ ಪಾಟೀಲ(ನಾಗರಳ್ಳಿ), ತಮ್ಮಣ್ಣ ಪೂಜಾರಿ ಉಪನ್ಯಾಸ ನೀಡಿ , ಬಸವಣ್ಣನವರ ತತ್ವಗಳು ಮೌಢ್ಯ, ಕಂದಾಚಾರ, ಅಸಮಾನತೆಗಳ ಕತ್ತಲೆಯನ್ನು ತೊಲಗಿಸುವ ಜಗತ್ತಿಗೆ ಜ್ಯೋತಿಯಾಗಿ ಬೆಳಕು ನೀಡಿದೆ. ಸಮಾಜ ಸುಧಾರಣೆಯ ಕ್ರಾಂತಿ ಸೃಷ್ಟಿಸಿದ ಬಸವಣ್ಣನವರು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎನ್ನುತ್ತಾ ಬದುಕಿನ ಮೌಲ್ಯಗಳನ್ನು ಹೇಳುವುದರೊಂದಿಗೆ ಮೌಢ್ಯದ ಪೊರೆಯನ್ನೂ ಕಳಚಿದರು ಎಂದು ಸ್ಮರಿಸಿದರು.

ಮಿರಗಿ ಬಸವ ಕೇಂದ್ರದ ಅಧ್ಯಕ್ಷ ಡಾ.ದೇವೆಂದ್ರ ಬರಡೋಲ ಮಾತನಾಡಿದರು. ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಅಭಿನವ ಶಿವಲಿಂಗೇಶ್ವರ ಶ್ರೀಗಳು ಸಾನಿಧ್ಯ ವಹಿಸಿದ್ದರು. ಮುಖ್ಯೋಪಾಧ್ಯಾಯ ಜೆ.ಎಸ್.ದೇವರಮನಿ ನೇತೃತ್ವ ವಹಿಸಿದ್ದರು. ಗುತ್ತಿಗೆದಾರ ಪ್ರಶಾಂತ ಅಲಗೊಂಡ, ಜಾವೀದ ಮೋಮಿನ, ಬಿಜೆಪಿ ಮುಖಂಡ ಶರಣಗೌಡ ಬಂಡಿ, ಕಾಂಗ್ರೆಸ್ ಮುಖಂಡ ಮಂಜುನಾಥ ಕಾಮಗೊಂಡ, ನಾನಾಗೌಡ ಪಾಟೀಲ, ಚಂದಣ್ಣ ಆಲಮೇಲ, ಇಲಿಯಾಸ ಬೊರಾಮಣಿ, ಭೀಮಣ್ಣ ಕವಲಗಿ, ಸಿದ್ದರಾಯ ಐರೋಡಗಿ, ,ಶಿವಾನಂದ ರಾವೂರ, ಬಸಲಿಂಗಪ್ಪ ಕತ್ತಿ, ಬಸವ ಸೇನೆ ಅಧ್ಯಕ್ಷ ಶ್ರೀಕಾಂತ ರೋಡಗಿ, ಬಾಳು ಮುಳಜಿ, ಅಂಬುರಾಯ ಕವಟಗಿ, ಹೂವಣ್ಣ ಚೌಡಿಹಾಳ, ಶ್ರೀಮಂತ ಖಸ್ಕಿ, ಚಿದಾನಂದ ಆಲಮೇಲ, ಶ್ರೀಶೈಲ ಮದರಿ, ಮಲ್ಲು ಚಾಕುಂಡಿ, ಪ್ರದೀಪ ಬೊರುಟಿ, ಮಲ್ಲು ಬಿರಾದಾರ, ಪಿಎಸೈ ಗೆಜ್ಜಿ, ಮಾಳಪ್ಪ ಘಾಳಿ, ನಾಮದೇವ ಸಾಳುಂಕೆ , ರಾಮ ದುದ್ದುಣಗಿ ಇತರರು ಇದ್ದರು.

Share this article