- ಬರೋಬ್ಬರಿ 29 ವರ್ಷಗಳ ನಂತರ ತಾಲೂಕಿನಲ್ಲಿ ಕನ್ನಡ ಹಬ್ಬ । ಸರ್ವಾಧ್ಯಕ್ಷರಾಗಿ ಡಾ. ಎ.ಬಿ.ರಾಮಚಂದ್ರಪ್ಪ
(ಲೋಗೋ: 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ)
- - - ಕನ್ನಡಪ್ರಭ ವಾರ್ತೆ ಜಗಳೂರುರಾಜ್ಯದಲ್ಲಿಯೇ ಹಿಂದುಳಿದ ತಾಲೂಕು, ಬರದ ನಾಡು ಎಂಬ ಹಣೆಪಟ್ಟಿ ಹೊತ್ತಿರುವ ಜಗಳೂರಿನಲ್ಲಿ ಬರೋಬ್ಬರಿ 29 ವರ್ಷಗಳ ನಂತರ ಕನ್ನಡ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ.
ಹೌದು, ಶನಿವಾರ, ಭಾನುವಾರ 2 ದಿನಗಳ ಕಾಲ ಜಗಳೂರು ಪಟ್ಟಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಸರ್ವಾಧ್ಯಕ್ಷರಾಗಿ ಡಾ. ಎ.ಬಿ.ರಾಮಚಂದ್ರಪ್ಪ ಆಯ್ಕೆಯಾಗಿದ್ದಾರೆ. ಸಮ್ಮೇಳನಕ್ಕೆ ಅಂದಾಜು 3000 ಜನ ಸೇರುವ ಸಾಧ್ಯತೆಯಿದೆ. ನುಡಿ ಹಬ್ಬಕ್ಕೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ.
ಬಯಲು ರಂಗ ಮಂದಿರದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದೆ. ಮೂರು ಸಾವಿರ ಕುರ್ಚಿಗಳನ್ನು ಹಾಕಲಾಗಿದೆ. 20 ಪುಸ್ತಕ ಮಾರಾಟ ಮಳಿಗೆಗಳು, ವಿವಿಧ ಇಲಾಖೆಗಳಿಂದ ಮಾಹಿತಿ ನೀಡುವ ಮಳಿಗೆಗಳು, ಚನ್ನಪಟ್ಟಣದ ಗೊಂಬೆಗಳ ಮಳಿಗೆ, ಮಹಿಳಾ ಸ್ವಸಹಾಯ ಸಂಘಗಳ ಮಳಿಗೆಗಳು ಸೇರಿ 30 ಮಳಿಗೆಗಳ ನಿರ್ಮಾಣ ಮಾಡಲಾಗಿದೆ. ನೋಂದಣಿ ಸಮಿತಿ, ಆರೋಗ್ಯ ಸಮಿತಿ, ಸಾಂಸ್ಕೃತಿಕ ಸಮಿತಿ, ವಸತಿ ಸಾರಿಗೆ ಸಮಿತಿ, ವಸ್ತು ಪ್ರದರ್ಶನ ಸಮಿತಿ ಹೀಗೆ ಅನೇಕ ಸಮಿತಿಗಳನ್ನು ರಚಿಸಿದ್ದು, ಬಂದಿರುವ ಅಷ್ಟೂ ಕನ್ನಡಾಭಿಮಾನಿಗಳಿಗೆ ಊಟದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆ ರಸ್ತೆ, ಬಿದರಕೆರೆ ರಸ್ತೆ, ಡಾ. ಅಂಬೇಡ್ಕರ್ ವೃತ್ತ, ರಾಜಕುಮಾರ್ ರಸ್ತೆ, ಚಳ್ಳಕೆರೆ ರಸ್ತೆ ಇಕ್ಕೆಲಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಗಳಿಂದ ಶೃಂಗಾರಗೊಳಿಸಲಾಗಿದೆ.
ಜ.11ರಂದು ಶನಿವಾರ ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, 9 ಗಂಟೆಗೆ ತಾಯಿ ಭುವನೇಶ್ವರಿ ಮತ್ತು ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ, ಬೆಳಗ್ಗೆ 11 ಗಂಟೆಗೆ ಸಮ್ಮೇಳನ ಉದ್ಘಾಟನಾ ಸಮಾರಂಭ ಸೇರಿ ವಿವಿಧ ಗೋಷ್ಠಿಗಳನ್ನು ಆಯೋಜನೆ ಮಾಡಲಾಗಿದೆ.
ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆ:
ಊಟದ ಮೆನು:
ಸಮ್ಮೇಳನ ವೇಳೆ ಅಸಮಾಧಾನ ಹೊಗೆ:
೨೯ ವರ್ಷಗಳ ನಂತರ ತಾಲೂಕಿನಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿದೆ. ಸ್ಥಳೀಯವಾಗಿ ಸೇವೆ ಸಲ್ಲಿಸಿದವರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಬೇಕಾಗಿತ್ತು ಮತ್ತು ಸ್ಥಳೀಯ ಸಾಹಿತಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕನ್ನಡ ಸಾಹಿತ್ಯಕ್ಕೆ ಶ್ರಮಿಸಿದವರನ್ನು ಸಂಪೂರ್ಣ ಕಡೆಗಣಿಸಲಾಗಿದೆ, ಶಾಸಕರ ಆಣತೆಯಂತೆ ಜಿಲ್ಲಾಮಟ್ಟದ ಸಮ್ಮೇಳನ ನಡೆಯುತ್ತಿದೆ, ಕಸಾಪ ಜಿಲಾಧ್ಯಕ್ಷರು ಶಾಸಕರ ಕೈಗೊಂಬೆಯಾಗಿ ಕೆಲಸ ಮಾಡುವ ಮೂಲಕ ಹಿರಿಯ ಸಾಹಿತಿಗಳನ್ನೇ ಕಡೆಕಣಿಸಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿವೆ.- - -
ಬಾಕ್ಸ್-1* ₹20 ಲಕ್ಷ ವೆಚ್ಚದಲ್ಲಿ ಅದ್ಧೂರಿ ಆಯೋಜನೆ: ವಾಮದೇವಪ್ಪ ಸಮ್ಮೇಳನದ ಎಲ್ಲ ಸಿದ್ಧತೆಗಳೂ ಮುಗಿದಿವೆ. ಹೊರಜಿಲ್ಲೆಗಳ 10ಕ್ಕೂ ಹೆಚ್ಚು ಕಲಾ ತಂಡಗಳು, ಸ್ಥಳೀಯ ಕಲಾ ತಂಡಗಳ ಮೆರವಣಿಗೆಗೆ ಆಗಮಿಸುತ್ತಿವೆ. ಸ್ಥಳೀಯ ಜನಪದ ಕಲಾವಿದರ ಕಲಾ ಪ್ರಕಾರಗಳ ಜೊತೆಗೆ ಎತ್ತಿನ ಗಾಡಿಗಳ ಮೆರವಣಿಗೆ, ನೂರು ಜನ ಕಹಳೆ ವಾದಕರು ಆಗಮಿಸುತ್ತಿದ್ದಾರೆ. ಎಲ್ಲವೂ ಅಚ್ಚುಕಟ್ಟಾಗಿ ನೆರವೇರಿಸಿ, ಸಮ್ಮೇಳನದ ಯಶಸ್ವಿಗೆ ಕೈ ಜೋಡಿಸಲು ಎಲ್ಲ ಸಾಹಿತ್ಯಾಸಕ್ತರನ್ನೂ, ಸಾರ್ವಜನಿಕರನ್ನು ಮನವಿ ಮಾಡುತ್ತೇನೆ. ಜಗಳೂರಿನಲ್ಲಿ ನಡೆಯುವ ಸಮ್ಮೇಳನವು ವಿಭಿನ್ನವಾಗಿದ್ದು, ಸ್ಥಳೀಯ ಶಾಸಕರ ಸಹಕಾರದಿಂದ ಅದ್ಧೂರಿಯಾಗಿ ಮಾಡಲಾಗುತ್ತಿದೆ. ಸಮ್ಮೇಳನದ ವೆಚ್ಚ ಅಂದಾಜು ₹೨೦ ಲಕ್ಷ ದಾಟಬಹುದು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಪ್ರತಿಕ್ರಿಯೆ ನೀಡಿದರು.- - - ಕೋಟ್ಸ್ 29 ವರ್ಷಗಳ ನಂತರ ಜಗಳೂರು ತಾಲೂಕಿನಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿದ್ದು ಸಂತಸ ತಂದಿದೆ. ಪ್ರತಿಯೊಬ್ಬರು ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಬಹುತೇಕ ಕೆರೆಗಳು ತುಂಬಿ ಕೊಡಿ ಬಿದ್ದ ಹಿನ್ನೆಲೆ ಸೋಮವಾರ ಜಲೋತ್ಸವ ಕಾರ್ಯಕ್ರಮ ಸಹ ನಡೆಯಲಿದೆ
- ಬಿ.ದೇವೇಂದ್ರಪ್ಪ, ಶಾಸಕ ಮತ್ತು ಅಧ್ಯಕ್ಷ, ಸಮ್ಮೇಳನ ಸ್ವಾಗತ ಸಮಿತಿಜಗಳೂರು ತಾಲೂಕಿನಲ್ಲಿ ಹಲವಾರು ಸಾಹಿತಿಗಳು, ಕವಿ, ಚಿಂತಕರು ಹಾಗೂ ಲೇಖಕರಿದ್ದರೂ ಅವರನ್ನು ಗೋಷ್ಠಿಯಿಂದ ದೂರ ಇಡುವಂತಹ ಕೆಲಸ ಮಾಡಿದ್ದು ಜಿಲ್ಲಾಧ್ಯಕ್ಷರ ಕಾರ್ಯವೈಖರಿಗೆ ಕೈಗನ್ನಡಿ ಹಿಡಿದಿದೆ
- ಸಂಗೇನಹಳ್ಳಿ ಅಶೋಕ್ ಕುಮಾರ್, ಸಾಹಿತಿಜಿಲ್ಲಾಮಟ್ಟದ ಸಮ್ಮೇಳನ ಎಲ್ಲ ಹಿರಿಯ ಸಾಹಿತ್ಯಾಸಕ್ತರನ್ನು ಒಳಗೊಂಡಂತೆ ವಿಶಾಲ ತಳಹದಿಯ ಮೇಲೆ ನಡೆಯಬೇಕಿತ್ತು. ಆದರೆ ಈ ಸಮ್ಮೇಳನ ಸಂಕುಚಿತವಾಗಿ ನಡೆಯುತ್ತಿರುವುದು ವಿಷಾದ ತಂದಿದೆ
- ದೊಣಿಹಳ್ಳಿ ಗುರುಮೂರ್ತಿ, ಪತ್ರಕರ್ತ- - - -10ಜೆ.ಎಲ್.ಆರ್.ಚಿತ್ರ1: ಜಿಲ್ಲಾ ಸಾಹಿತ್ಯ ಸಮ್ಮೇಳನ ಹಿನ್ನೆಲೆ ಮುಖ್ಯ ಪ್ರವೇಶ ದ್ವಾರಗಳಲ್ಲಿ ಬೃಹತ್ ಸ್ವಾಗತ ಕಮಾನುಗಳ ನಿರ್ಮಿಸಿರುವುದು.
-10ಜೆಜಿಎಲ್2: ಸಮ್ಮೇಳನ ಹಿನ್ನೆಲೆ ಜನಜಾಗೃತಿಗಾಗಿ ಜಗಳೂರು ತಾಲೂಕಿನ 22 ತಾಪಂ ಕೇಂದ್ರಗಳಿಗೆ ಸಂಚರಿಸಿದ ಕನ್ನಡ ರಥ ಯಾತ್ರೆ.