ಶಿಲ್ಪಕಲೆಯಲ್ಲಿ ಜಕಣಾಚಾರಿ ಸಾಧನೆ ಅಪ್ರತಿ: ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ

KannadaprabhaNewsNetwork |  
Published : Jan 02, 2025, 12:32 AM IST
1ಕೆಕೆಡಿಯು1. | Kannada Prabha

ಸಾರಾಂಶ

ಪ್ರಪಂಚಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದ್ದು, ಅಮರಶಿಲ್ಪಿ ಜಕಣಾಚಾರಿ ಅವರ ಕೆತ್ತನೆಯಿಂದ ಬೇಲೂರು-ಹಳೆಬೀಡು ದೇವಾಲಯಗಳು ಜಗತ್ ಪ್ರಸಿದ್ಧವಾಗಿದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು. ಕಡೂರಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನ ಉದ್ಘಾಟಿಸಿ ಮಾತನಾಡಿದರು.

ಅಮರಶಿಲ್ಪಿಯ ಸಂಸ್ಮರಣಾ ದಿನಾಚರಣೆ । ವಿಶ್ವಕರ್ಮರ ಬಗ್ಗೆ ಮಾಹಿತಿ

ಕನ್ನಡಪ್ರಭ ವಾರ್ತೆ ಕಡೂರು

ಪ್ರಪಂಚಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದ್ದು, ಅಮರಶಿಲ್ಪಿ ಜಕಣಾಚಾರಿ ಅವರ ಕೆತ್ತನೆಯಿಂದ ಬೇಲೂರು-ಹಳೆಬೀಡು ದೇವಾಲಯಗಳು ಜಗತ್ ಪ್ರಸಿದ್ಧವಾಗಿದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಸರಳವಾಗಿ ನಡೆದ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನ ಉದ್ಘಾಟಿಸಿ ಮಾತನಾಡಿದರು.

ಜಕಣಾಚಾರಿ ನಿರ್ಮಿಸಿರುವ ದೇವಾಲಯಗಳಲ್ಲಿನ ಅವರ ಕೆತ್ತನೆಯು ಶಾಶ್ವತವಾಗಿದೆ. ಲೋಪವಿಲ್ಲದೆ ಶ್ರದ್ದೆ, ಭಕ್ತಿಯಿಂದ ಕಾರ್ಯನಿರ್ವಹಿಸಿದ್ದರ ಫಲವೇ ಇಂದು ವಿಶ್ವದಲ್ಲಿಯೇ ಶ್ರೇಷ್ಠ ಶಿಲ್ಪಿಯಾಗಲು ಸಾಧ್ಯವಾಗಿದ್ದು, ನಾನು ಕೂಡ ತಾವು ಅದೇ ಜಿಲ್ಲೆಯವರೆಂಬ ಹೆಮ್ಮೆ ನನಗಿದೆ ಎಂದರು.

ಹೊಯ್ಸಳರಿಗೆ ಹೆಸರು ಮತ್ತು ಕೀರ್ತಿ ತಂದವರು ಜಕಣಾಚಾರಿಯವರು. ದೇವಾಲಯ ಹೀಗೆಯೇ ಇರಬೇಕೆಂದು ಚಿತ್ರಿಸುವಲ್ಲಿ ವಿಜ್ಞಾನ ಮತ್ತು ಜ್ಞಾನದ ಮೂಲಕ ಕಲೆಯನ್ನು ಇಂದಿನ ವಿಶ್ವಕರ್ಮ ಸಮಾಜದವರು ಮಾತಿನಲ್ಲಿ ಹೇಳದೆ ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಹೋಗಬೇಕಾಗಿದೆ ಎಂಬ ಕಿವಿ ಮಾತು ಹೇಳಿ, ಸಮಾಜದ ಸಮಸ್ಯೆಗಳಿಗೆ ನಿಮ್ಮ ಜೊತೆ ಇರುವುದಾಗಿ ತಿಳಿಸಿದರು.

ಸಖರಾಯಪಟ್ಟಣ ಎಸ್.ಪಿ.ಓಂಕಾರಮೂರ್ತಿ ಮಾತನಾಡಿ, 900 ವರ್ಷಗಳ ಹಿಂದೆ ತುಮಕೂರು ಜಿಲ್ಲೆಯ ಕೈದಾಳ ಗ್ರಾಮದ ಜಕಣಾಚಾರಿ ಮನೆ ಬಿಟ್ಟು ಹೊರಟು ಹೋದ ಬಳಿಕ ಸೋಮನಾಥಪುರದ ದೇವಾಲಯವನ್ನು ಸುಂದರವಾಗಿ ಕೆತ್ತಿರುವ ಉಲ್ಲೇಖವಿದೆ. ಹಳೆಬೀಡಿನ ದೇವಾಲಯದ ಜೊತೆಗೆ ಬೇಲೂರು ದೇವಾಲಯ ನಿರ್ಮಿಸುತ್ತಾನೆ. ಬೇಲೂರು ಇಂದಿಗೂ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿದ್ದು ಶ್ರೀ ಚನ್ನಕೇಶವ ದೇವಾಲಯವು ತನ್ನ ಶಿಲ್ಪಕಲೆಗಳ ಮೂಲಕ ಪ್ರವಾಸಿಗರನ್ನು ಸೆಳೆಯುತ್ತಿದೆ. ಜಕಣಾಚಾರಿ ಅವರ ಕೆತ್ತನೆಯ ವಿಗ್ರಹದ ಲೋಪವನ್ನು ಆತನ ಮಗ ಡಂಕಣಾಚಾರ್ಯ ಹುಡುಕಿ ಬಂದು ತಾನೇ ಒಬ್ಬ ಪ್ರಖ್ಯಾತ ಶಿಲ್ಪಿಯಾಗಿದ್ದು ಇತಿಹಾಸ. ಜಕಣಾಚಾರಿ ಅವರು ವಿಶ್ವಕರ್ಮ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ನಮ್ಮ ಸಮಾಜದಲ್ಲಿ ಬೆಳೆಯುತ್ತಿರುವ ಶಿಲ್ಪಿಗಳನ್ನು ಪ್ರೋತ್ಸಾಹಿಸುವ ಕೆಲಸ ಸರ್ಕಾರ ಮತ್ತು ಸಮಾಜದಿಂದ ಆಗಬೇಕಾಗಿದೆ ಎಂದು ಹೇಳಿದರು.

ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅವರು ಈಗಾಗಲೇ ಪಟ್ಟಣದ ಒಂದು ಬೀದಿಗೆ ಜಕಣಾಚಾರಿ ಅವರ ಹೆಸರು ಹಿಡಲು ಒಪ್ಪಿದ್ದು ಜನವರಿ 15 ರ ನಂತರ ಅದ್ಧೂರಿಯ ಸಭೆ ನಡೆಸಿ ನಾಮಕರಣ ಮಾಡಲಾಗುವುದು ಎಂದರು.

ಕಡೂರು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ತೀರ್ಥಾಚಾರ್ ಮಾತನಾಡಿ, ಜಕಣಾಚಾರಿ ಅವರು ಜೀವನಪೂರ್ಣ ಶಿಲೆಗಳ ಕೆತ್ತನೆಯನ್ನು ಮಾಡಿದ್ದು ಯಾವುದೇ ಯಂತ್ರಗಳ ಸಹಾಯವಿಲ್ಲದೆ ಸರ್ವಶ್ರೇಷ್ಠ ಕೆತ್ತನೆಗೆ ಸಾಕ್ಷಿಯಾಗಿದ್ದರು. ಇತ್ತೀಚಿಗೆ ಯಂತ್ರಗಳ ಮೊರೆಹೋಗುತ್ತಿರುವುದು ವಿಷಾದಕರ ಎಂದರು.

ಆಸಂದಿಯ ಹನುಮಂತ ಆಚಾರ್ ಅವರು ಬರೆದಿರುವ ಪುಸ್ತಕ ಹಾಗೂ ವಿಶ್ವಕರ್ಮ ಅವರ ಜೀವನಶೈಲಿಯ ಬಗ್ಗೆ ಮಾತನಾಡಿದರು.

ಸಮಾಜದ ಮುಖಂಡರಾದ ಪುರೋಹಿತ ಮಹೇಶ್ವರಾಚಾರ್, ಶಿಲ್ಪಿ ತ್ಯಾಗರಾಜಾಚಾರ್, ಸಿದ್ದೇಶ್ವರಾಚಾರ್, ಪ್ರಕಾಶಾಚಾರ್, ಕಲ್ಲೇಶಾಚಾರ್, ವಾಸುದೇವಮೂರ್ತಿ, ಆರ್.ಟಿ. ಮಂಜುನಾಥ್, ಭಾಸ್ಕರಾಚಾರ್, ಗಂಗಾಧರಾಚಾರ್, ಅರ್ಚಕ ಚಿದಾನಂದಮೂರ್ತಿ ಹಾಗೂ ತಾಲೂಕಿನ ಇತರ ಭಾಗಗಳ ಸಮಾಜದ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ