ಕನ್ನಡಪ್ರಭ ವಾರ್ತೆ ತಾಳಿಕೋಟೆ
ಹಿಂದಿನ ಪೀಠಾಧೀಪತಿ ಲಿಂ.ವಿರಕ್ತ ಮಹಾಸ್ವಾಮಿಗಳ ನುಡಿಯಂತೆ ಅವರ ಮೇಲೆ ಭಕ್ತರು ಇಟ್ಟಿದ್ದ ಭಕ್ತಿ, ಪ್ರೀತಿ, ವಾತ್ಸಲ್ಯ ಈಗಲೂ ಕೂಡ ಮಠದ ಮೇಲೆ ಭಕ್ತರು ತೋರಿಸುತ್ತಿದ್ದಾರೆ. ಜತೆಗೆ ಈಗಿನ ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗದೇವರು ಕೂಡ ಭಕ್ತರೇ ಶ್ರೀಮಠದ ಆಸ್ತಿ ಎಂದು ಹೇಳುತ್ತಿದ್ದಾರೆ.
ಜಾತ್ರೋತ್ಸವದ ದಾಸೋಹ ವ್ಯವಸ್ಥೆಗೆ ಎಲ್ಲ ಗ್ರಾಮ, ಪಟ್ಟಣಗಳಿಂದ ಅವಶ್ಯಕ ದವಸ ದಾನ್ಯಗಳಲ್ಲದೇ ರೊಟ್ಟಿ ಇನ್ನಿತರೆ ವಸ್ತುಗಳನ್ನು ಭಕ್ತಾದಿಗಳು ಅರ್ಪಿಸುತ್ತಿದ್ದಾರೆ. ಭಕ್ತರ ದವಸ್ಯ ಧಾನ್ಯಗಳಿಂದ ನಿತ್ಯ ವಿವಿಧ ರೀತಿಯ ಪ್ರಸಾದ ತಯಾರಿಸಿ ಭಕ್ತರಿಗೆ ನೀಡಲಾಗುತ್ತಾ ಬರಲಾಗುತ್ತಿದೆ. ಈ ಬಾರಿ ಶ್ರೀಮಠದ ಬಾಲಶಿವಯೋಗಿ ಶ್ರೀಗಳ ಮಾತಿನಂತೆ ಜಿಲೇಬಿ ಪ್ರಸಾದವನ್ನು ೫೦ ಸಾವಿರಕ್ಕೂ ಮೇಲ್ಪಟ್ಟು ಭಕ್ತರಿಗೆ ಉಣಬಡಿಸುವ ಸಲುವಾಗಿ ತಯಾರಿ ಮಾಡಿಕೊಳ್ಳಲಾಗಿದೆ.ಜಾತ್ರೆಗೆ ಪಟ್ಟಿ ಎತ್ತುವ ಕಾರ್ಯ ಸ್ಥಗಿತ:
---ಭಕ್ತರೇ ಶ್ರೀಮಠದ ಆಸ್ತಿ ಎಂದು ನಾನು ಶ್ರೀ ಖಾಸ್ಗತರ ಹಾಗೂ ಶ್ರೀ ವಿರಕ್ತಶ್ರೀಗಳ ವಾಣಿಯಂತೆ ನಡೆದಿದ್ದೇನೆ. ಎಲ್ಲ ಭಕ್ತರು ಶ್ರೀಮಠದ ಆಸ್ತಿ ಎಂದು ಭಾವಿಸಿದ್ದೇನೆ. ಈ ಹಿಂದೆ ಈ ಈರ್ವ ಶ್ರೀಗಳು ನಡೆದುಕೊಂಡು ಬಂದ ಹಾಗೆ ನಾನು ಕೂಡ ಹಾಗೇ ಸಾಗುತ್ತಿದ್ದೇನೆ. ಲಿಂ.ವಿರಕ್ತಶ್ರೀಗಳು ನನಗೆ ಕನಸಿನಲ್ಲಿ ಹೇಳಿದಂತೆ ಈ ಬಾರಿಯ ಜಾತ್ರೆಯಲ್ಲಿ ಜಿಲೇಬಿ ಪ್ರಸಾದ ಭಕ್ತಾಧಿಗಳಿಗೆ ನೀಡಲಾಗುತ್ತಿದೆ
- ಬಾಲಶಿವಯೋಗಿ ಶ್ರೀಸಿದ್ದಲಿಂಗ ದೇವರು, ಶ್ರೀ ಖಾಸ್ಗತ ಮಠ ತಾಳಿಕೋಟೆ