ಕನ್ನಡಪ್ರಭ ವಾರ್ತೆ ಜಮಖಂಡಿ
ಪೌರ ಕಾರ್ಮಿಕರ ಮಕ್ಕಳಿಗೆ 10 ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸ್ವಂತ ಹಣದಿಂದ ಧನ ಸಹಾಯ ಮಾಡುವುದಾಗಿ ತಿಳಿಸಿದ ಅವರು, ಪೌರ ಕಾರ್ಮಿಕರ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಅವರಿಗೆ ₹5 ಸಾವಿರ ಅಂತ್ಯಸಂಸ್ಕಾರಕ್ಕೆ ನೀಡಲಾಗುವುದು. ನಗರಸಭೆಯ ಚುನಾಯಿತ ಸದಸ್ಯರು ನಗರದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಪೌರಾಯುಕ್ತ ಜ್ಯೋತಿಗಿರೀಶ ಮಾತನಾಡಿ, ನಗರದ ದೇಸಾಯಿವೃತ್ತ ಹಾಗೂ ಟಿಪ್ಪು ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ, ಹಿಂದು ರುದ್ರಭೂಮಿ ಹತ್ತಿರ ಹೊಸ ಕಾಂಪ್ಲೆಕ್ಸ್‌ಗಳ ನಿರ್ಮಾಣ, ಉದ್ಯಾನಗಳ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ನಗರದಲ್ಲಿ ಅವಶ್ಯವಿರುವ ಕಡೆಗಳಲ್ಲಿ ವಿದ್ಯುತ್ ದೀಪ ಅಳವಡಿಸುವುದು, ಐಡಿಎಸ್‌ಎಂಟಿಯ ಉಳಿದ ನಿವೇಶನಗಳನ್ನು ಹರಾಜು ಮಾಡುವುದು, ಖಾಲಿ ಉಳಿದಿರುವ ನಗರಸಭೆಯ ಅಂಗಡಿಗಳ ಹರಾಜಿಗೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ ಅವರು ತಮ್ಮ ಅಧಿಕಾರ ಅವಧಿ ನ.3ಕ್ಕೆ ಮುಕ್ತಾಯವಾಗಲಿದೆ ಎಂದು ತಿಳಿಸಿದಾಗ ಅವಧಿ ವಿಸ್ತರಣೆಗೆ ಕೋರ್ಟ್ ಮೊರೆ ಹೋಗಲು ಸದಸ್ಯ ದಿಲಾವರ ಶಿರೋಳ ಠರಾವು ಮಾಡಿಕೊಡಿ ಎಂದು ಸಲಹೆ ನೀಡಿದರು. ಸಾಮಾನ್ಯ ಸಭೆಗೆ ಒಂದು ತಿಂಗಳ ಅವಧಿ ಬೇಕು ಎಂದು ಪೌರಾಯುಕ್ತರು ಉತ್ತರಿಸಿದರು. ಇ-ಖಾತೆ ಪಡೆಯಲು ಆನ್‌ಲೈನ್ ನಲ್ಲಿ ಸರಿಯಾದ ಪ್ರಮಾಣ ಪತ್ರಗಳ ಸಹಿತ ಅರ್ಜಿ ಸಲ್ಲಿಸಬೇಕಿದೆ. ಆಸ್ತಿ ತೆರಿಗೆ ಪಾವತಿ, ಖಾತಾ ಬದಲಾವಣೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದೆಂದು ಮಾಹಿತಿ ನೀಡಿದರು. ಸದಸ್ಯರಾದ ಗುರುಪಾದಪ್ಪ ಮೆಂಡಿಗೇರಿ, ಪರಮಾನಂದ ಗೌರೋಜಿ, ಕುಶಾಲ ವಾಘಮೊರೆ, ಶ್ರೀಧರ ಕೊಣ್ಣೂರ, ಪ್ರಶಾಂತ ಚರಕಿ. ಸುನೀಲ ಸಿಂಧೆ ಇತರರು ಚರ್ಚೆಯಲ್ಲಿ ಭಾಗವಹಿಸಿದರು.
ಸರಿಯಾದ ಪ್ರಮಾಣ ಕೊಡಿ ಸುಳ್ಳು ಆರೋಪ ಬೇಡ;ನಗರಸಭೆ ಸದಸ್ಯೆ ಮಲ್ಲಮ್ಮ ಪಾಯಗೊಂಡ ನಗರಸಭೆಯಲ್ಲಿ ಕೆಲಸ ಮಾಡಿಕೊಡಲು ಲಂಚ ಕೇಳುತ್ತಾರೆ ಎಂದಾಗ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸರಿಯಾದ ಪ್ರಮಾಣ ಕೊಡಿ ಸುಳ್ಳು ಆರೋಪ ಮಾಡಬೇಡಿ ಎಂದು ಪೌರಾಯುಕ್ತ ತಿಳಿಸಿದರು. ಸರಿಯಾದ ದಾಖಲೆ ಕೊಟ್ಟರೆ ಅಂಥ ಅಧಿಕಾರಿಗಳ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಇದರಿಂದ ಕೋಪಗೊಂಡ ಸದಸ್ಯೆ ಪಾಯಗೊಂಡ ಸಭಾತ್ಯಾಗ ನಡೆಸಿದರು.
ಜಿಲ್ಲಾಮಟ್ಟದ ಕ್ರೀಡಾಕೂಟಗಳಲ್ಲಿ ನಗರದ ಮಕ್ಕಳು ಪ್ರಶಸ್ತಿ ಪಡೆದಿದ್ದಾರೆ. ಆದರೆ ಕ್ರೀಡಾ ಇಲಾಖೆಯವರು ಒಂದು ಪ್ರಶಸ್ತಿಪತ್ರವನ್ನೂ ನೀಡಿಲ್ಲ. ಕೇಳಿದರೆ ಕೇವಲ ₹40 ಸಾವಿರ ವೆಚ್ಚದಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಪ್ರಮಾಣ ಪತ್ರ, ಮೆಡಲ್‌ಗಳನ್ನು ನೀಡಲು ಹಣವಿಲ್ಲ ಎಂದು ಹೇಳುತ್ತಿದ್ದಾರೆ. ಯಾವ ಕೆಲಸಕ್ಕೂ ಸರ್ಕಾರ ಅನುದಾನ ನೀಡುತ್ತಿಲ್ಲ ಎಂಬುವುದಕ್ಕೆ ನಿದರ್ಶನವಾಗಿದೆ.- ಜಗದೀಶ ಗುಡಗುಂಟಿ ಶಾಸಕರು ಜಮಖಂಡಿ