ಗಜೇಂದ್ರಗಡ:ಜನೌಷಧಿ ಕೇಂದ್ರಗಳನ್ನು ಮುಚ್ಚುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕ್ರಮವನ್ನು ಖಂಡಿಸಿ ಬಿಜೆಪಿ ರೋಣ ಮಂಡಲದ ವತಿಯಿಂದ ಶನಿವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎದುರಿಗೆ ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟನೆ ನಡೆಸಿದರು.
ಬಡವರಿಗೆ ಕಡಿಮೆ ದರದಲ್ಲಿ ಔಷಧಿ ನೀಡುತ್ತಿರುವ ಕೇಂದ್ರಗಳನ್ನು ಸ್ಥಗಿತಗೊಳಿಸಲು ಹುನ್ನಾರ ನಡೆಸಿರುವ ಸರ್ಕಾರದ ನಿರ್ಧಾರ ಖಂಡನೀಯ. ಜನೌಷಧಿ ಕೇಂದ್ರಗಳನ್ನು ಬಂದ್ ಮಾಡುವ ಮೂಲಕ ಜನರಿಗೆ ಆರೋಗ್ಯದ ಹೊರೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ದೂರಿದ ಅವರು ರಾಜಕೀಯ ಪ್ರೇರಿತವಾಗಿ, ನೈತಿಕತೆ ಇಲ್ಲದೇ ಜನೌಷಧಿ ಕೇಂದ್ರಗಳನ್ನು ಮುಚ್ಚುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಉಮೇಶ ಮಲ್ಲಾಪುರ, ನಗರ ಫಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಹಾಂತೇಶ ಪೂಜಾರ, ಹುಲ್ಲಪ್ಪ ಕೆಂಗಾರ, ಬಿ.ಎಂ. ಸಜ್ಜನರ, ಬಾಳು ಬೋಸ್ಲೆ, ರಮೇಶ್ ವಕ್ಕರ್, ಶಿವಾನಂದ್ ಮಠದ, ಮುದಿಯಪ್ಪ ಕರಡಿ ಅಶೋಕ್ ವನ್ನಾಲ ಮುತ್ತಣ್ಣ ಕಡಗದ. ಮುಖಪ್ಪ ನಿಡಗುಂದಿ, ರಂಗನಾಥ ಮೇಟಿ, ಸೂಗರೇಶ ಕಾಜಗಾರ, ಅಶೋಕ ನವಲಗುಂದ, ಹನುಮಂತಪ್ಪ ಹಟ್ಟಿ, ಭೀಮಣ್ಣ ಮಾದರ, ಸಲೀಂ ಕಲಾದರ, ಯಮನೂರು ತಿರುಕೋಜಿ, ಮಂಜುನಾಥ ಚಲವಾದಿ, ಶಿವಕುಮಾರ ಜಾದವ, ಶಂಕರ ಇಟಗಿ,
ದಾನು ರಾಠೋಡ, ದುರಗಪ್ಪ ಕಟ್ಟಿಮ, ಮುತ್ತಯ್ಯ ಬಾಳಿಕಾಯಿಮಠ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.