ಸಮಾಜದಲ್ಲಿ ಜಂಗಮರಿಗೆ ಪೂಜ್ಯನೀಯ ಭಾವನೆಯಿದೆ-ಮಾಜಿ ಶಾಸಕ ಪೂಜಾರ

KannadaprabhaNewsNetwork |  
Published : Dec 15, 2025, 03:15 AM IST
ಫೋಟೊ ಶೀರ್ಷಿಕೆ: 14ಆರ್‌ಎನ್‌ಆರ್3ರಾಣಿಬೆನ್ನೂರಿನಲ್ಲಿ ಏರ್ಪಡಿಸಿದ್ದ ತಾಲೂಕು ಜಂಗಮ ಸಮಾಜ ಹಾಗೂ ನೌಕರರ ವೇದಿಕೆಯ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ, ಧರ್ಮಸಭೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಮಾಜಿ ಶಾಸಕ ಅರುಣಕುಮಾರ ಪೂಜಾರ ಉದ್ಘಾಟಿಸಿದರು.    | Kannada Prabha

ಸಾರಾಂಶ

ಸಮಾಜದಲ್ಲಿ ಜಂಗಮರಿಗೆ ಪೂಜ್ಯನೀಯ ಹಾಗೂ ದೈವದ ಭಾವನೆಯಿದೆ. ಆದರೆ ಜಂಗಮರು ಇಂದು ಬದುಕಲು ಬಹಳಷ್ಟು ಕಷ್ಟಪಡುವಂತಹ ಸನ್ನಿವೇಶಗಳು ನಿರ್ಮಾಣ ವಾಗಿರುವುದು ವಿಷಾದನೀಯ ಸಂಗತಿ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ರಾಣಿಬೆನ್ನೂರು: ಸಮಾಜದಲ್ಲಿ ಜಂಗಮರಿಗೆ ಪೂಜ್ಯನೀಯ ಹಾಗೂ ದೈವದ ಭಾವನೆಯಿದೆ. ಆದರೆ ಜಂಗಮರು ಇಂದು ಬದುಕಲು ಬಹಳಷ್ಟು ಕಷ್ಟಪಡುವಂತಹ ಸನ್ನಿವೇಶಗಳು ನಿರ್ಮಾಣ ವಾಗಿರುವುದು ವಿಷಾದನೀಯ ಸಂಗತಿ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.ಇಲ್ಲಿನ ಮೃತ್ಯುಂಜಯ ನಗರದ ಚನ್ನೇಶ್ವರ ಮಠದ ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಭಾನುವಾರ ತಾಲೂಕು ಜಂಗಮ ಸಮಾಜ ಹಾಗೂ ನೌಕರರ ವೇದಿಕೆಯ ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ, ಧರ್ಮಸಭೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಶುಭ, ಅಶುಭ ಕಾರ್ಯಕ್ರಮಗಳಿಗೆ ಜಂಗಮರ ಅವಶ್ಯಕತೆ ಬಹಳಷ್ಟು ಇದೆ. ಜಂಗಮರಿಲ್ಲದೆ ಏನು ಮಾಡದಂತಹ ಪರಿಸ್ಥಿತಿ ಸಮಾಜದಲ್ಲಿ ಬೇರೂರಿದೆ. ಮೀಸಲಾತಿಯಲ್ಲಿ ಹಿಂದುಳಿರುವ ಜಂಗಮ ಸಮಾಜ ಬಾಂಧವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು.ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಜಂಗಮರ ಬಗ್ಗೆ ನನಗೆ ಅಪಾರವಾದ ಹಾಗೂ ಅವಿನಾಭಾವ ಸಂಬಂಧವಿದೆ. ಜಂಗಮ ಸಮಾಜದವರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜ ಸಂಘಟನೆಗೆ ಮುಂದಾಗಬೇಕಾಗಿದೆ. ಜೊತೆಗೆ ಈ ಸಮಾಜಕ್ಕೆ ಸರ್ಕಾರದ ವತಿಯಿಂದ ನಿವೇಶನ ನೀಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಸಾನ್ನಿಧ್ಯ ವಹಿಸಿದ್ದ ಲಿಂಗದಹಳ್ಳಿಯ ವೀರಭದ್ರ ಶಿವಾಚಾರ್ಯರು ಮಾತನಾಡಿ, ಜಂಗಮರು ಮೊದಲು ಜಂಗಮರಾಗಿಯೇ ಇರಬೇಕು. ಕಡ್ಡಾಯವಾಗಿ ಲಿಂಗಧಾರಣೆ ಮಾಡಿಕೊಳ್ಳಬೇಕು. ಗುರುಗಳಿಗೆ ಗೌರವ ನೀಡಬೇಕು. ತಮ್ಮಲ್ಲಿ ವಿಶ್ವಾಸ ಮೂಡಿಸಿಕೊಳ್ಳಬೇಕು. ವೇದ, ಶಾಸ್ತ್ರಗಳನ್ನು ಅಧ್ಯಯನ ಮಾಡುವುದರ ಮೂಲಕ ಮಾದರಿ ಜಂಗಮರಾಗಲು ಮುಂದಾಗಬೇಕು ಎಂದರು.ದಾವಣಗೆರೆ ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯರು, ಗುಡ್ಡದ ಆನ್ವೇರಿ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಮಣಕೂರು ಹಾಲಸ್ವಾಮಿ ಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಕೋಡಿಯಾಲ ಹೊಸಪೇಟೆ ಪುಣ್ಯಕೋಟಿಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ದಿಂಡದಹಳ್ಳಿ ಪಶುಪತಿ ಶಿವಾನಂದ ಶಿವಾಚಾರ್ಯರು, ನಗರದ ದೊಡ್ಡಪೇಟೆ ವಿರಕ್ತಮಠದ ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಾಧ್ಯಕ್ಷ ಕೆ.ಎನ್. ಕೋರಧಾನ್ಯಮಠ, ಡಾ. ಮಂಜುನಾಥ ಮೊಳಕುಂಪಿ ಮಠ ಮಾತನಾಡಿದರು. ಜಂಗಮ ಸಮಾಜ ಹಾಗೂ ಜಂಗಮ ನೌಕರರ ವೇದಿಕೆ ನಿಟಕಪೂರ್ವ ಅಧ್ಯಕ್ಷ ಮುಕ್ತೇಶ ಕೂರಗುಂದಮಠ ನೂತನ ಅಧ್ಯಕ್ಷ ವಿ.ಎಸ್.ಹಿರೇಮಠ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಗೌರವಾಧ್ಯಕ್ಷರಾದ ಫಕ್ಕೀರೇಶ ಭಸ್ಮಾಂಗಿಮಠ, ಎಸ್.ಸಿ. ಷಡಕ್ಷಕರಿಮಠ, ಉಪಾಧ್ಯಕ್ಷ ಜಗದೀಶ ಅಜ್ಜೋಡಿಮಠ, ಪ್ರಧಾನ ಕಾರ್ಯದರ್ಶಿ ಜಗದೀಶ ಮಳೆಮಠ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಭಸ್ಮಾಂಗಿಮಠ, ಕಾರ್ಯದರ್ಶಿ ರವಿಕುಮಾರ ಪಾಟೀಲ, ಸಂಘಟನಾ ಕಾರ್ಯದರ್ಶಿ ಪಂಚಾಕ್ಷರಯ್ಯ ಮುದಗಲ್ಲಮಠ, ವಾಗೀಶ ಮಳೇಮಠ , ವಿಶ್ವನಾಥ ರಾಚೋಟಿಮಠ, ಪಿ.ವಿ.ಮಠದ, ರಾಜೇಂದ್ರಸ್ವಾಮಿ ಹಿರೇಮಠ, ಮುರುಗೇಶ ಮಹಾನುಭಾವಿಮಠ, ವೀರನಗೌಡ ಪಾಟೀಲ, ಶಿವಯೋಗಿ ಹಿರೇಮಠ, ಡಾ.ಗುರುಮೂರ್ತಿ ರಾಚೋಟಿಮಠ, ನಾಗರಾಜ ಹನಗೋಡಿಮಠ, ಪ್ರಕಾಶ ಗಚ್ಚಿನಮಠ, ಎಸ್.ವಿ.ಸಾಲೀಮಠ, ಟಿ. ವೀರಣ್ಣ ತೊಗರ್ಸಿಮಳೇಮಠ, ವಾಗೀಶ ಮಳಿಮಠ, ವೀರೇಶ ಬಾಳಿಹಳ್ಳಿಮಠ ಇದ್ದರು.ಇದೇ ಸಂದರ್ಭದಲ್ಲಿ ವೀರಶೈವ ಐಕ್ಯತಾ ಪರಿಷತ್ ರಾಜ್ಯ ಘಟಕದ ಅಧ್ಯಕ್ಷೆ ಕೋಮಲಾ ಎಸ್.ಮಠದ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕಿ ಶಿವಲೀಲಾ ಸುರಳಿಕೇರಿಮಠ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪ್ರಧಾನ ಕಾರ್ಯದರ್ಶಿ ಹಾಗೂ ಜಂಗಮ ಸಮಾಜ- ನೌಕರರ ವೇದಿಕೆಯ ಮಾಧ್ಯಮ ಸಲಹೆಗಾರರಾಗಿ ಆಯ್ಕೆಯಾದ ಮುರುಘೇಶ ಮಹಾನುಭಾವಿಮಠ, ಗುರುಮೂರ್ತಿ ರಾಚೋಟಿಮಠ, ಕುಸ್ತಿಪಟುಗಳಾದ ಸುಧಾ ಹಿರೇಮಠ ಹಾಗೂ ಗಣೇಶ ಹಿರೇಮಠ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ