ಧರ್ಮನಿಷ್ಠ, ಸಂಸ್ಕಾರ ಸಮಾಜ ನಿರ್ಮಾಣಕ್ಕೆ ಜಂಗಮರು ಶ್ರಮಿಸಲಿ

KannadaprabhaNewsNetwork |  
Published : Nov 19, 2024, 12:46 AM IST
18ಡಿಡಬ್ಲೂಡಿ2ಗುರುಭವನದಲ್ಲಿ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ವಿವಿಧ ಕ್ಷೇತ್ರಗಳ ಸಾಧಕ ಜಂಗಮರಿಗೆ ಆಯೋಜಿಸಿದ್ದ ಸಮಾರಂಭದಲ್ಲಿ ಕೃಷಿ ವಿವಿ ಸಿಂಡಿಕೇಟ್‌ ನೂತನ ಸದಸ್ಯ ಬಸವರಾಜ ಕುಂದಗೋಳಮಠ ಅವರಿಗೆ ಗೌರವಿಸಲಾಯಿತು.   | Kannada Prabha

ಸಾರಾಂಶ

ಸಂಸ್ಕಾರವಂತ ಸಮಾಜ ಇಂದಿನ ಜಗತ್ತಿಗೆ ಅತೀ ಅವಶ್ಯವಾಗಿದೆ. ಸತ್ ಬೋಧನೆ, ಧರ್ಮ ಪ್ರಸಾರ, ಆಚಾರ-ವಿಚಾರಗಳನ್ನು ಪ್ರಚುರಪಡಿಸುವುದು ಜಂಗಮ ಸಮಾಜದ ಧರ್ಮ. ಪುರದ ಹಿತ ಬಯಸುವ ಪುರೋಹಿತರ ಆದಿಯಾಗಿ ಎಲ್ಲ ಜಂಗಮರು ಆಚಾರ, ವಿಚಾರಗಳಲ್ಲಿ ಶ್ರೇಷ್ಠರಾಗಿ ಬದುಕುವ ಮೂಲಕ ಸುಸಂಸ್ಕೃತ ಸಮಾಜ ರೂಪಿಸಬೇಕು.

ಧಾರವಾಡ:

ಸಮಾಜದಲ್ಲಿ ಧರ್ಮನಿಷ್ಠ, ಸಂಸ್ಕಾರ ಆಚಾರವಂತರನ್ನು ಬೆಳೆಸುವ ಮೂಲಕ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಜಂಗಮರು ಶ್ರಮಿಸಬೇಕೆಂದು ಸುಳ್ಳದ ಪಂಚಗ್ರಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಹೇಳಿದರು.

ನಗರದ ಗುರುಭವನದಲ್ಲಿ ಧಾರವಾಡ ವೀರಶೈವ ಜಂಗಮ ಸಂಸ್ಥೆಯು ವಿವಿಧ ಕ್ಷೇತ್ರಗಳ ಸಾಧಕ ಜಂಗಮರಿಗೆ ಮತ್ತು ಜಿಲ್ಲಾ ಹಾಗೂ ತಾಲೂಕು ಘಟಕಗಳಿಗೆ ನೂತನವಾಗಿ ಆಯ್ಕೆ ಆಗಿರುವ ನಿರ್ದೇಶಕರಿಗೆ ಹಮ್ಮಿಕೊಂಡಿದ್ದ ಗೌರವ ಅರ್ಪಣೆಯಲ್ಲಿ ಸಾನ್ನಿಧ್ಯ ವಹಿಸಿದ ಅವರು, ಸಂಸ್ಕಾರವಂತ ಸಮಾಜ ಇಂದಿನ ಜಗತ್ತಿಗೆ ಅತೀ ಅವಶ್ಯವಾಗಿದೆ. ಸತ್ ಬೋಧನೆ, ಧರ್ಮ ಪ್ರಸಾರ, ಆಚಾರ-ವಿಚಾರಗಳನ್ನು ಪ್ರಚುರಪಡಿಸುವುದು ಜಂಗಮ ಸಮಾಜದ ಧರ್ಮ. ಪುರದ ಹಿತ ಬಯಸುವ ಪುರೋಹಿತರ ಆದಿಯಾಗಿ ಎಲ್ಲ ಜಂಗಮರು ಆಚಾರ, ವಿಚಾರಗಳಲ್ಲಿ ಶ್ರೇಷ್ಠರಾಗಿ ಬದುಕುವ ಮೂಲಕ ಸುಸಂಸ್ಕೃತ ಸಮಾಜ ರೂಪಿಸಬೇಕು ಎಂದು ತಿಳಿಸಿದರು.

ಪಂಚ ಪೀಠಗಳು, ಶಾಖಾ ಮಠಗಳು ಪರಂಪರಾಗತವಾಗಿ ಸಮಾಜದ ಏಳಿಗೆಗೆ ಮಾರ್ಗದರ್ಶನ ಮಾಡುತ್ತಿವೆ. ನೂತನ ನಿರ್ದೇಶಕರು ಉತ್ತಮ ನಿರ್ಧಾರ, ನಡವಳಿಕೆಗಳಿಂದ ಇತರರಿಗೆ ಮಾದರಿ ಆಗಬೇಕು. ವಿಭೂತಿ, ಇಷ್ಟಲಿಂಗ ಧಾರಣೆ ಮಾಡಬೇಕು. ಧರ್ಮ, ಜಾತಿಗಳನ್ನು ಮೀರಿ ಬೆಳೆಯಬೇಕು. ವೀರಶೈವ ಧರ್ಮ ವಿಶ್ವ ಧರ್ಮವಾಗಿದ್ದು, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದನ್ನು ಪ್ರಸಾರ ಮಾಡಬೇಕು ಎಂದು ಪೂಜ್ಯರು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ ಅಧ್ಯಕ್ಷತೆ ವಹಿಸಿದ್ದರು. ನೂತನ ಪದಾಧಿಕಾರಿಗಳಾದ ಎನ್.ವಿ. ಕುರವತ್ತಿಮಠ, ಪರಮಾನಂದ ಶಿವಳ್ಳಿಮಠ, ಜಗದೀಶ ವಿರಕ್ತಮಠ, ಚಂದ್ರಶೇಖರ ಸಿಂದಗಿಮಠ ಮತ್ತು ಸಾಧಕರಾದ ಬಸವರಾಜ ಚಿಕ್ಕಮಠ, ಬಸವರಾಜ ಮಠದ, ಬಸವರಾಜ ಕುಂದಗೋಳಮಠ, ಹಿರಿಯ ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ ಸನ್ಮಾನ ಸ್ವೀಕರಿಸಿ, ಮಾತನಾಡಿದರು.

ಹಿರಿಯ ಶಿಕ್ಷಕರಾದ ಸಿ.ಸಿ. ಹಿರೇಮಠ ಪ್ರಾರ್ಥಿಸಿದರು. ಪ್ರೊ. ಜಗದೀಶ ಕಾಡದೇವರಮಠ ಸ್ವಾಗತಿಸಿದರು. ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರಭು ಕೆಂಡದಮಠ ವಂದಿಸಿದರು. ಸಿದ್ದು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಧೀಮಂತ, ಸಾಧಕ ಮತ್ತು ಬಾಲ ಪ್ರೋತ್ಸಾಹ ಪ್ರಶಸ್ತಿ ಪುರಸ್ಕೃತರಾದ ಏಳ ಜನ ಜಂಗಮ ಸಾಧಕರನ್ನು ಗೌರವಿಸಲಾಯಿತು.

PREV

Recommended Stories

ಹೂ ಮುಡಿದು ದೇವರ ದರ್ಶನ ಪಡೆದ ಭಾನು : ಬಳೆಯನ್ನು ತೊಟ್ಟು ಹಣೆಗೆ ಕುಂಕುಮ ಇಟ್ಟರು
ಶಿಕ್ಷಕಿ ಕೆರೆಯಲ್ಲಿ ಶವವಾಗಿ ಪತ್ತೆ : ಗಣತಿ ಒತ್ತಡದಿಂದ ಆತ್ಮ*ತ್ಯೆ ?