ಕರ್ನಾಟಕ ಏಕೀಕರಣ ರೂವಾರಿ ಸರ್ ಸಿದ್ಧಪ್ಪ ಕಂಬಳಿ: ಪೂಜಾರ

KannadaprabhaNewsNetwork |  
Published : Nov 19, 2024, 12:46 AM IST
(18ಎನ್.ಆರ್.ಡಿ5 ಕರ್ನಾಟಕ ಏಕೀಕರಣ ಹೋರಾಟಗಾರರ ಯಶೋಗಾಥೆ ಕಾರ್ಯಕ್ರಮವನ್ನು ಉಸನ್ಯಾಸಕ ಎಸ್.ಎಸ್.ಪೂಜಾರ ಉದ್ಘಾಟಿಸುತ್ತಿದ್ದಾರೆ.)  | Kannada Prabha

ಸಾರಾಂಶ

ಸರ್‌. ಸಿದ್ದಪ್ಪ ನೊಂದವರು, ಬೆಂದವರಿಗೆ, ಸಾಮಾನ್ಯರ ಧ್ವನಿಯಾಗಿ ಅವಿಶ್ರಾಂತವಾಗಿ ಹೋರಾಡಿದ ಧೀಮಂತರು ಎಂದು ಎಸ್.ಎಸ್. ಪೂಜಾರ ಹೇಳಿದರು.

ನರಗುಂದ: ಸರ್‌. ಸಿದ್ದಪ್ಪ ಕಂಬಳಿ ಅವರ ಬದುಕು ನಮ್ಮ ಸಮಾಜಕ್ಕೆ ಮಾದರಿ. ಅವರು ಸರಳತೆ, ಸಹೃದಯತೆ, ಪ್ರಾಮಾಣಿಕತೆ, ನ್ಯಾಯ ನಿಷ್ಠುರತೆ, ಪಾರದರ್ಶಕತೆ ಹಾಗೂ ದೈವಭಕ್ತಿಯ ಮೌಲಿಕ ಗುಣಗಳನ್ನು ಅಳವಡಿಸಿಕೊಂಡ ಇತಿಹಾಸ ನಿರ್ಮಾಪಕರು ಎಂದು ಉಸನ್ಯಾಸಕ ಎಸ್.ಎಸ್. ಪೂಜಾರ ಹೇಳಿದರು

ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್‌ ಘಟಕ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಏಕೀಕರಣ ಹೋರಾಟಗಾರರ ಯಶೋಗಾಥೆ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.ಸರ್‌. ಸಿದ್ದಪ್ಪ ಕಂಬಳಿಯವರು ಭವಿಷ್ಯಕ್ಕೊಂದು ಭರವಸೆಯ ವ್ಯಕ್ತಿಯಾಗಿದ್ದರು. ನೊಂದವರು, ಬೆಂದವರಿಗೆ, ಸಾಮಾನ್ಯರ ಧ್ವನಿಯಾಗಿ ಅವಿಶ್ರಾಂತವಾಗಿ ಹೋರಾಡಿದ ಧೀಮಂತರು. ಬ್ರಿಟೀಷ ಸರಕಾರದ ಒಂದು ಭಾಗವಾಗಿದ್ದುಕೊಂಡು ಶೋಷಿತ ವರ್ಗಗಳ ಉನ್ನತಿಗಾಗಿ ಹೋರಾಟ ಮಾಡಿದ್ದ ಅಪರೂಪದ ವ್ಯಕ್ತಿ ಎಂದು ಹೇಳಿದರು.ಪ್ರಾಚಾರ್ಯ ಆರ್.ಬಿ. ಪಾಟೀಲ ಮಾತನಾಡಿ, ಕವಿಗಳು ಕರ್ನಾಟಕವನ್ನು ಭಾವನಾತ್ಮಕವಾಗಿ ಕಟ್ಟಿದ್ದಾರೆ. ಕರ್ನಾಟಕ ಕೆಲ ಭಾಗಗಳು ಇನ್ನೂ ಇತರ ರಾಜ್ಯಗಳಲ್ಲಿ ಹರಿದು ಹಂಚಿಹೋಗಿವೆ. ಕರ್ನಾಟಕದ ಏಕೀಕರಣಕ್ಕಾಗಿ ಹಲವರು ಹೋರಾಟ ಹಾಗೂ ಸತ್ಯಾಗ್ರಹಗಳನ್ನು ನಡೆಸಿದ್ದಾರೆ. ಏಕೀಕರಣವಾದ ಕರ್ನಾಟಕ ಸಮೃದ್ಧ ನೆಲೆಯ ಮೇಲೆ ನಿಲ್ಲಬೇಕಿದೆ ಎಂದರು.

ತಾಲೂಕು ಘಟಕದ ಕಸಾಪ ಅಧ್ಯಕ್ಷ ಪ್ರೊ. ಬಿ.ಸಿ. ಹನಮಂತಗೌಡ್ರ ಮಾತನಾಡಿ. 1799ರ 4ನೇ ಆಂಗ್ಲೋ–ಮೈಸೂರು ಯುದ್ಧದ ನಂತರ ಇಡೀ ಕರ್ನಾಟಕವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಲಾಯಿತು. ಆಗ ಕನ್ನಡ ಭಾಷೆಯ ಕೆಲವು ಪ್ರದೇಶಗಳು ತೆಲುಗು ಪ್ರಭಾವಕ್ಕೆ ಒಳಗಾದರೆ ಕೆಲವು ಮರಾಠಿ, ಮಲೆಯಾಳಂ ಪ್ರಭಾವಕ್ಕೆ ಒಳಗಾದವು. ಇದರಿಂದ ಇಂದಿಗೂ ಕನ್ನಡ ಮತ್ತು ಅನ್ಯಭಾಷಿಕರ ಮಧ್ಯೆ ಪ್ರತಿನಿತ್ಯ ಕಲಹಗಳು ನಡೆಯುತ್ತಲೇ ಇವೆ ಎಂದರು.

ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧೀಜಿ ವಹಿಸಿದ್ದರು. ಅದು ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಸಭೆ. ಆ ಸಭೆಯಲ್ಲಿಯೇ ಕರ್ನಾಟಕಕ್ಕೆ ಪ್ರತ್ಯೇಕ ಭಾಷಾವಾರು ರಾಜ್ಯವಾಗಬೇಕು ಎಂದು ಗಾಂಧೀಜಿ ತೀರ್ಮಾನಿಸಿದ್ದರು ಎಂದು ಹೇಳಿದರು.

ಕಸಾಪ ಕೋಶಾಧ್ಯಕ್ಷ ಬಿ.ಆರ್. ಮಹಾದೇವಪ್ಪನವರ, ಕಸಾಪ ಸದಸ್ಯರಾದ ಎಸ್.ಆರ್. ಭಜಂತ್ರಿ, ತಾಲೂಕು ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಎನ್.ಎಲ್. ಮಡಿವಾಳರ, ಸೇರಿದಂತೆ ಮುಂತಾದವರು ಇದ್ದರು. ಮಂಜುನಾಥ ಪಾಟೀಲ ಸ್ವಾಗತಿಸಿದರು. ಪ್ರೊ. ಎಂ.ಪಿ. ಕ್ಯಾತನಗೌಡ್ರ ನಿರೂಪಿಸಿದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್