ಮುದ್ದೇಬಿಹಾಳ: ತಾಲ್ಲೂಕಿನ ಜಟ್ಟಗಿ ತಾಂಡಾದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಗಡಿಗೆ ಒಡೆಯುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ತಾಂಡಾದ ಕೃಷ್ಣ ದೇವಸ್ಥಾನದ ಆವರಣದಲ್ಲಿ ಮಕ್ಕಳು ಮೊಸರು ಕುಡಿಕೆ ಆಟವಾಡಿ ಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮಿಸಿದರು. ಚಿಕ್ಕವನಾಗಿದ್ದ ಆತನಿಗೆ ಬೆಣ್ಣೆ ಸಿಗದಂತೆ ಮೇಲಕ್ಕಿಟ್ಟರೂ ಸ್ನೇಹಿತರ ಮೇಲೆ ಹತ್ತಿ ಬೆಣ್ಣೆ ಕದ್ದು ತಿನ್ನುತ್ತಿದ್ದನಂತೆ. ಶ್ರೀಕೃಷ್ಣನ ತುಂಟ ಬಾಲ್ಯ ನೆನಪಿಸುವುದಕ್ಕೆ ಈ ಆಚರಣೆ ಮಾಡಲಾಗುತ್ತಿದೆ.ಯುವಕರ ಮೇಲೆ ನಿರಂತರ ನೀರು ಎರಚಿದರು ಸಾಹಸ ಮೆರೆಯಲು ಒಬ್ಬರು ಮೇಲೊಬ್ಬರು ಹತ್ತಿ ಎತ್ತರದಲ್ಲಿ ಹಗ್ಗದ ಮೇಲೆ ಕಟ್ಟಿದ್ದ ಮೊಸರು ಗಡಿಗೆಗಳನ್ನು ಒಡೆದು ಸಾಹಸ ಹಾಗೂ ಜಾಣ್ಮೆ ತೋರಿಸಿದರು. ತಾಂಡಾದಲ್ಲಿ ನೆಲದ ಮೇಲೆ ನಿರಂತರ ನೀರು ಹಾಕಿ ಕೆಸರುಗದ್ದೆ ಮಾಡಿ ಕೆಸರಿನಲ್ಲೇ ನಿಂತು ಮೊಸರು, ತುಪ್ಪ ತುಂಬಿದ ಗಡಿಗೆಯನ್ನು ಹಗ್ಗದಿಂದ ಕಟ್ಟಿ ಜೋತು ಬಿಡಲಾಗಿರುತ್ತದೆ. ಯುವಕರು ಪಿರಾಮಿಡ್ ಮಾದರಿಯಲ್ಲಿ ಒಬ್ಬರ ಮೇಲೊಬ್ಬರು ಹತ್ತಿ ಒಡೆಯುತ್ತಾರೆ. ಯುವಕರು ತಮ್ಮ ಸಾಹಸ ಪ್ರಜ್ಞೆ ಹಾಗೂ ಜಾಣ್ಮೆಯಿಂದ ಸತತ ಪ್ರಯತ್ನದ ಮೂಲಕ ಮೊಸರು ಗಡಿಗೆ ಒಡೆಯುವಲ್ಲಿ ಯಶಸ್ವಿಯಾದವರು. ಅದರಲ್ಲಿ ಹಾಕಿರುವ ನಾಣ್ಯ ಕೆಳಗೆ ಬಿಳ್ಳುತ್ತಿದ್ದಂತೆ ಯುವಕರು ಮುಗಿಬಿದ್ದು ನಾ ಮುಂದೆ ನೀ ಮುಂದೆ ಎಂದು ನಾಣ್ಯ ಪಡೆಯಲು ಹರಸಾಹಸ ಪಟ್ಟರು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ರಾಮಪ್ಪ ಲಮಾಣಿ, ಶಿಕ್ಷಕ ಹಣಮಂತ ರಾಠೋಡ, ಮಲ್ಲೇಶ ಚವ್ಹಾಣ, ಸುಭಾಸ ಚವ್ಹಾಣ, ಶಿಕ್ಷಕ ಲಕ್ಷ್ಮಣ ರಾಠೋಡ, ಬಸವರಾಜ ರಾಠೋಡ, ರಾಮು ನಾಯಕ, ಭೀಮು ನಾಯಕ, ಮೋತಿಲಾಲ ರಾಠೋಡ, ಚಂದ್ರಶೇಖರ ರಾಠೋಡ ಸಿದ್ರಾಮ ಕೇಶಪ್ಪ ರಾಠೋಡ, ಶಿವಾನಂದ ಲಮಾಣಿ, ಪೂಜಾರಿ ಹರಿಶ್ಚಂದ್ರ ರಾಠೋಡ, ಪೂಜಾರಿ ಕೃಷ್ಣಾ ರಾಠೋಡ, ಶಿವಾಜಿ ರಾಠೋಡ ಮಲ್ಲು ರಾಠೋಡ, ಸೇರಿದಂತೆ ಮತ್ತಿತರ ಉಪಸ್ಥಿತರಿದ್ದರು.