ಕನ್ನಡಪ್ರಭ ವಾರ್ತೆ ಗುಬ್ಬಿ
ಕುಂಚಿಟಿಗ ಸಮುದಾಯವನ್ನು ಓಬಿಸಿಗೆ ಸೇರಿಸುತ್ತೇನೆ ಎಂದು ಶಿರಾ ಶಾಸಕ ಟಿ.ಬಿ.ಜಯಚಂದ್ರ ಅವರು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಸುಳ್ಳು ಹೇಳುವುದನ್ನು ಬಿಟ್ಟು ನಮ್ಮ ಸಮುದಾಯ ನಿಮ್ಮನ್ನು ಶಾಸಕರನ್ನಾಗಿ ಆಯ್ಕೆ ಮಾಡಿದೆ. ಅದನ್ನು ನೀವು ಮರೆಯಬಾರದು ಎಂದು ಕರ್ನಾಟಕ ರಾಜ್ಯ ಕುಂಚಿಟಿಗ ಒಕ್ಕೂಟದ ಅಧ್ಯಕ್ಷ ಕಸವನಹಳ್ಳಿ ರಮೇಶ್ ಶಾಸಕ ಟಿ.ಬಿ.ಜಯಚಂದ್ರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು. ಗುಬ್ಬಿ ತಾಲೂಕಿನ ಮಠ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕುಂಚಿಟಿಗ ಸಂಘದ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಸಮುದಾಯದವರು ಬಂದಾಗ ಹಾರ ಶಾಲು ಹಾಕಿಸಿಕೊಂಡು ಓಬಿಸಿ ಪಟ್ಟಿಗೆ ಸೇರಿಸುತ್ತೇನೆ ಅಂಥ ಹೇಳುತ್ತಿರುವುದು ಸರಿಯಲ್ಲ. ನಿಮಗೆ ಸಮಾಜದ ಬಗ್ಗೆ ಗೌರವಿದ್ದರೆ ಓಬಿಸಿ ಪಟ್ಟಿಗೆ ಸೇರಿಸಿ ಇಲ್ಲದಿದ್ದರೆ ನಿಮ್ಮ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.ಕುಂಚಿಟಿಗ ಸಂಘದ ತಾಲೂಕು ಅಧ್ಯಕ್ಷ ಜಯಣ್ಣ ಮಾತನಾಡಿ ಕುಂಚಿಟಿಗ ಸಮುದಾಯದವರು, ಒಗ್ಗಟ್ಟಾಗಿದ್ದಾಗ ಮಾತ್ರ ಓಬಿಸಿ, ಮೀಸಲಾತಿ ಪಡೆಯುವಲ್ಲಿ ಯಶಸ್ವಿಯಾಗುತ್ತೇವೆ ನಮ್ಮ ಸುಮದಾಯ ಒಂದಾಗಬೇಕಿದೆ. ರಾಜಕೀಯದಲ್ಲಿ ನಮ್ಮ ಸಮುದಾಯದ ಮತಕ್ಕೊಸ್ಕರ ನಮ್ಮ ಸಮುದಾಯವನ್ನು ಬಳಸಿಕೊಳುತ್ತಾರೆ. ಸಮಯದಾಯವನ್ನು ಮೇಲೆತ್ತುವ ಕೆಲಸ ಯಾರು ಮಾಡುತ್ತಿಲ್ಲ, ನಮ್ಮ ಸಮುದಾಯದಲ್ಲಿ ಒಗ್ಗಟಿಲ್ಲ ನಾಲ್ಕು, ಐದು, ಪಂಗಡ ಮಾಡಿಕೊಂಡು ಕುಂಚಿಟಿಗರು ಎಂದು ಹೇಳಿಕೊಳ್ಳುಲು ಹಿಂಜರಿಯುತ್ತಿದೇವೆ. ನಮ್ಮ ಸಮುದಾಯಕ್ಕೆ ಇತಿಹಾಸವಿದೆ. ನಮ್ಮ ದೇಶದ ಐದು ರಾಜ್ಯಗಳಲ್ಲಿ ಕುಂಚಿಟಿಗ ಸಮುದಾಯ ಗುರುತಿಸಿಕೊಂಡಿದೆ. ಎಲ್ಲರೂ ಒಗ್ಗಟಾಗಿ ಸಮುದಾಯದ ಅಭಿವೃದ್ದಿಗೆ ಶ್ರನಿಸಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಕುಂಚಿಟಿಗ ಸಮುದಾಯದ ಪ್ರಧಾನ ಕಾರ್ಯದರ್ಶಿ ಪುಟ್ಟಲಿಂಗಯ್ಯ, ಶಶಿಕಲಾ ನಿಂಗರಾಜು , ಮುಖಂಡರಾದ ಗುಜ್ಜರಪ್ಪ, ನಿಂಗರಾಜು, ರವಿ, ಮಂಜೇಗೌಡ, ಮಹಾದೇವಯ್ಯ, ಮುರುಳಿ ಇತರರಿದ್ದರು.