ಕನ್ನಡಪ್ರಭ ವಾರ್ತೆ ನಿಪ್ಪಾಣಿ
ನಿರ್ದೇಶಕ ಸಮಿತ ಸಾಸಣೆ ಮಾತನಾಡಿ, ಜೊಲ್ಲೆ ದಂಪತಿ ಮಾರ್ಗದರ್ಶನದಲ್ಲಿ ಕಾರ್ಖಾನೆ ಸದಸ್ಯರು ಮತ್ತು ರೈತರ ಹಿತ ಕಾಪಾಡುತ್ತ ಅಭಿವೃದ್ಧಿ ಸಾಧಿಸುತ್ತಿದೆ. ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷೆ ಕಾರ್ಖಾನೆಯ ಪ್ರಗತಿಗೆ ಉತ್ತಮ ಕೊಡುಗೆ ನೀಡಲಿದ್ದು, ಎಲ್ಲ ನಿರ್ದೇಶಕರ ಸಹಕಾರ ಅವರಿಗೆ ದೊರೆಯಲಿದೆ ಎಂದರು.ನಿರ್ದೇಶಕರಾದ ಶ್ರೀಕಾಂತ್ ಬನ್ನೆ ಹಾಗೂ ಆನಂದ ಯಾದವ್ ಮಾತನಾಡಿ, ಸ್ಥಗಿತದ ಅಂಚಿನಲ್ಲಿದ್ದ ಕಾರ್ಖಾನೆಗೆ ಜೊಲ್ಲೆ ದಂಪತಿ ಹೊಸ ಚೈತನ್ಯ ತುಂಬಿ ಅಭಿವೃದ್ಧಿಯ ದಾರಿಗೆ ತಂದಿದ್ದಾರೆ ಎಂದು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಮಾಜಿ ಉಪಾಧ್ಯಕ್ಷ ಪವನ್ ಪಾಟೀಲ, ರಾಮಗೊಂಡ ಪಾಟೀಲ, ಪ್ರಕಾಶ ಶಿಂಧೆ, ಜಯವಂತ ಭಾಟಲೆ, ರಮೇಶ್ ಪಾಟೀಲ, ರಾವಸಾಹೇಬ್ ಫರಾಳೆ, ವಿನಾಯಕ ಪಾಟೀಲ, ಸುಹಾಸ್ ಗುಗೆ, ವೈಶಾಲಿ ನಿಕಾಡೆ, ರಾಜು ಗುಂದೇಶಾ, ರಾಮಗೊಂಡ ಚೌಗುಲೆ, ದೇವಪ್ಪ ದೇವಕತೆ, ಕಾರ್ಯನಿರ್ವಾಹಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾಂವೆ, ಮಾಜಿ ಉಪನಗರಾಧ್ಯಕ್ಷ ಸುನೀಲ ಪಾಟೀಲ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ಕಚೇರಿ ಅಧೀಕ್ಷಕ ಗಜಾನನ ರಾಮನಕಟ್ಟಿ ಸ್ವಾಗತಿಸಿ, ವಂದಿಸಿದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ಮಾರ್ಗದರ್ಶನದಲ್ಲಿ ಕಾರ್ಖಾನೆಯ ಮುಂದಿನ ಎರಡೂವರೆ ವರ್ಷದ ಅವಧಿಗೆ ಅವಿರೋಧ ಆಯ್ಕೆ ನಡೆದಿದೆ. ಕಾರ್ಖಾನೆ ಪ್ರಗತಿಯತ್ತ ಸಾಗುತ್ತಿದ್ದು, ಸದಸ್ಯರು, ರೈತರು ಮತ್ತು ಕಾರ್ಮಿಕರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ.
-ಎಂ.ಪಿ.ಪಾಟೀಲ, ನಿರ್ಗಮಿತ ಅಧ್ಯಕ್ಷರು.ಅಧ್ಯಕ್ಷ ಸ್ಥಾನದಲ್ಲಿರುವುದು ನಾನು ಮಾತ್ರವಾದರೂ ಎಲ್ಲ ನಿರ್ದೇಶಕರೂ ಅಧ್ಯಕ್ಷರಂತೆ ಕಾರ್ಯನಿರ್ವಹಿಸಲಿದ್ದಾರೆ. ಅಣ್ಣಾಸಾಹೇಬ ಹಾಗೂ ಶಾಸಕಿ ಶಶಿಕಲಾಯವರ ಮಾರ್ಗದರ್ಶನದಲ್ಲಿ ಕಾರ್ಖಾನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ, ರೈತರು ಮತ್ತು ಸದಸ್ಯರಿಗೆ ಉತ್ತಮ ಆದಾಯ ಹಾಗೂ ಲಾಭ ದೊರೆಯುವಂತೆ ಪ್ರಯತ್ನಿಸಲಾಗುವುದು.-ಜಯಕುಮಾರ ಖೋತ್,