ಕನ್ನಡ ಪ್ರಭ ವಾರ್ತೆ ಮುಧೋಳದೇಶದ ಪ್ರಧಾನಿ ಸತತ 4,399 ದಿನಗಳನ್ನು ಪೂರೈಸುವ ಮೂಲಕ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನರೇಂದ್ರ ಮೋದಿಜೀ ಅವರಿಗೆ ನಾವು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಹೇಳಿದರು.
ನಗರದ ಗಣೇಶ ಮಂದಿರದಲ್ಲಿ ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಲದಿಂದ ಬುಧವಾರ ಬೆಳಗ್ಗೆ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನ ಮಂತ್ರಿಗಳಾಗಿ ನರೇಂದ್ರ ಮೋದಿ ಸತತ 12 ವರ್ಷಗಳ ಕಾಲ ಅತ್ಯುತ್ತಮ ಹಾಗೂ ಸುದೀರ್ಘ ಸಲ್ಲಿಸಿದ್ದಾರೆ. ಅವರ ಸೇವೆ ಭಾರತದ ಇತಿಹಾಸದಲ್ಲೇ ಅವಿಸ್ಮರಣೀಯ ಸಾಧನೆ. ಇಂತಹ ಪ್ರಧಾನಿಯನ್ನು ಪಡೆದ ನಾವೆಲ್ಲರು ಭಾಗ್ಯವಂತರು ಎಂದರು.ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಗಣ್ಣ ಕಾತರಕಿ, ನಗರ ಅಧ್ಯಕ್ಷ ಕೆ.ಎಸ್.ಹಿರೇಮಠ, ಬಿಜೆಪಿ ಮುಖಂಡರಾದ ಕೆ.ಆರ್.ಮಾಚಪ್ಪನವರ, ಕಲ್ಲಪ್ಪ ಸಬರದ, ಲಕ್ಷ್ಮಣ ಚಿನ್ನಣ್ಣವರ, ಸದಾಶಿವ ತೇಲಿ, ಬಸವರಾಜ ಮಳಲಿ, ಧರೆಪ್ಪ ಸಾಂಗ್ಲಿಕರ, ಭೀಮನಗೌಡ ಪಾಟೀಲ, ಡಾ.ರವಿ ನಂದಗಾಂವ, ನಾಗಪ್ಪ ಅಂಬಿ, ಸದಾಶಿವ ಇಟಕನ್ನವರ, ಶ್ರೀಶೈಲ ಚಿನ್ನಣ್ಣವರ, ಗುರುಪಾದ ಕುಳಲಿ, ಮಂಜು ಮಾನೆ, ಕಲ್ಮೇಶ ಗೋಸಾರ, ಸಂತೋಷ ಘೋರ್ಪಡೆ, ಮುಕುಂದ ನಿಂಬಾಳ್ಕರ, ರವಿ ಮಾಚಪ್ಪನವರ, ರಾಘು ಶಿಂಧೆ, ಹೊಳಬಸು ಬಟಕುರ್ಕಿ, ಎಂ.ಎಸ್.ಹಂಚಿನಾಳ, ಮಹಮ್ಮದ ಶೇಖ, ರಾಜು ಕಂಕಣವಾಡಿ, ಸುಭೇದಾ ಮಾನೆ, ಕಮಲಾ ಜೇಡರ ಇತರರು ಇದ್ದರು.