ಕನ್ನಡಪ್ರಭ ವಾರ್ತೆ ಮೈಸೂರು
ರಾಮಕೃಷ್ಣನಗರದ ಜಯಲಕ್ಷ್ಮೀದೇವಿ ಪಿಯು ಕಾಲೇಜಿನ ಋತ್ವಿಕ್ ವೇದಿಕೆಯಲ್ಲಿ ಸಖಿ ಫೌಂಡೇಶನ್ ಮತ್ತು ಸೂರ್ಯ ಚಾರಿಟಬಲ್ ಟ್ರಸ್ಟ್ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸಖಿ ಸಂಭ್ರಮ- ಸ್ಪೂರ್ತಿ ಸಖಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಚ್ಚು ಹೆಚ್ಚು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಲ್ಲಿ ಸಮಾಜಕ್ಕೆ ಮಹಿಳೆಯರಿಂದ ಮತ್ತಷ್ಟು ಉತ್ತಮ ಕೊಡುಗೆ ಸಾಧ್ಯ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ಶ್ರೀಗಂಧ ವಲಯ ಪ್ರಮುಖ್ ಡಾ.ವಿ. ರಂಗನಾಥ್ ಮಾತನಾಡಿ, ಮಹಿಳೆಯು ತಮ್ಮ ಕೆಲಸ ಕಾರ್ಯಗಳ ನಡುವೆ ಸಾಹಿತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮತ್ತಷ್ಟು ಕ್ರಿಯಾಶೀಲ ವ್ಯಕ್ತಿತ್ವ ಅವರದಾಗುತ್ತದೆ. ಮಹಿಳೆಯರು ಸಂಯಮಶೀಲರಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಹೇಳಿದರು.ಟ್ರಸ್ಟ್ ಸಂಸ್ಥಾಪನಾ ಕಾರ್ಯದರ್ಶಿ ಗಾಯತ್ರಿ ಸುಂದರೇಶ್ ಮಾತನಾಡಿ, ಅನೇಕ ಮಹಿಳೆಯರು ಸಾಧನೆಯ ಮೆಟ್ಟಿಲನ್ನೇರಿದ್ದರು ಹೊರ ಪ್ರಪಂಚಕ್ಕೆ ತಮ್ಮ ಸಾಧನೆಯ ಬಗ್ಗೆ ತೋರಿಸಿಕೊಳ್ಳುವಲ್ಲಿ ಹಿಂಜರಿಯುತ್ತಾರೆ. ಅಂತಹ ಸಾಧಕ ಸಖಿಯರನ್ನು ಗುರುತಿಸಿ ಗೌರವಿಸುವ ಜವಾಬ್ದಾರಿ ನಮ್ಮಂತಹ ಸಂಘ ಸಂಸ್ಥೆಗಳ ಮೇಲಿದೆ ಎಂದರು.
ಇದೇ ವೇಳೆ ಸಾಮಾಜಿಕ ಸೇವೆ ಹಾಗೂ ಉದ್ಯಮ ಕ್ಷೇತ್ರದ ಅನಿತಾ ರೀಟಾ, ರಂಗಭೂಮಿ ಮತ್ತು ಚೆಂಡೆ ಕಲಾವಿದರಾದ ಅರುಣ್ ಕುಮಾರ್ ಹಾಗೂ ಸಾಹಿತಿ ಬಿ.ಆರ್. ನಾಗರತ್ನ ಅವರಿಗೆ ಸ್ಪೂರ್ತಿ ಸಖಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಇದ್ದರು.