ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ನಮ್ಮ ಜೀವನದಲ್ಲಿ ನಾವು ಮಾಡಿದ ಸಾಧನೆ ಆಧರಿಸಿ ನೆನಪುಗಳು ಮಾತ್ರ ಉಳಿಯುತ್ತವೆ ಎಂದು ಮಲೆನಾಡು ವಿದ್ಯಾಸಂಸ್ಥೆ ನಿರ್ದೇಶಕಿ ಜಯಶ್ರೀ ಜೋಷಿ ಹೇಳಿದರು. ನಗರದ ಎಂಇಎಸ್ ಕಾಲೇಜು ಸಭಾಂಗಣದಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ, ಲಯನ್ಸ್ ಸಂಸ್ಥೆ ಹಾಗೂ ಮಲೆನಾಡು ವಿದ್ಯಾಸಂಸ್ಥೆ ಸಹಯೋಗದಲ್ಲಿ ಪೂರ್ವಿ ಗಾನಯಾನ-95 ಸರಣಿಯಲ್ಲಿ ಹಿರಿಯ ಖ್ಯಾತ ನಟಿ ಡಾ.ಲೀಲಾವತಿ ಅಭಿನಯದ ಚಲನಚಿತ್ರ ಗೀತೆಗಳ ವಿಶೇಷ ಮೆಲ್ಲುಸಿರೇ ಸವಿಗಾನ ಗಾನ ಶ್ರದ್ಧಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಯನ್ಸ್ ಸಂಸ್ಥೆ ರಾಯಭಾರಿ ಎಂ.ಆರ್.ಕೇಶವಮೂರ್ತಿ ಮಾತನಾಡಿ, ಆರು ದಶಕಗಳ ಕಾಲ ಸುಮಾರು 600 ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ನಮ್ಮನ್ನು ರಂಜಿಸಿದ್ದರು ಎಂದರಲ್ಲದೆ, ಕಾರ್ಯಕ್ರಮಕ್ಕೆ ಶುಭಕೋರಿದರು.
ಅಧ್ಯಕ್ಷತೆ ವಹಿಸಿದ್ದ ಯುರೇಕಾ ಅಕಾಡೆಮಿಯ ಸಂಸ್ಥಾಪಕ ದೀಪಕ್ ದೊಡ್ಡಯ್ಯ ಮಾತನಾಡಿ, ಡಾ.ಲೀಲಾವತಿ ಅಭಿನಯಿಸಿದ ಚಲನಚಿತ್ರ ಗೀತೆಗಳ ಕಾರ್ಯಕ್ರಮವನ್ನು ಪೂರ್ವಿ ತಂಡದವರು ಪ್ರಸ್ತುತಪಡಿಸಿ, ಎಂ.ಎಸ್.ಸುಧೀರ್ ನೇತೃತ್ವದ ಪೂರ್ವಿ ತಂಡ ವೈವಿಧ್ಯಮಯ ಕಾರ್ಯಕ್ರಮವನ್ನು ನೀಡುತ್ತಲೇ ಬರುತ್ತಿದ್ದಾರೆ ಎಂದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತಿಸಿದರು. ಸುಮಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಗಾಯಕ ರಾಯನಾಯಕ್ ವಂದಿಸಿದರು.------
ಪೋಟೋ ಪೈಲ್ ನೇಮ್ 18 ಕೆಸಿಕೆಎಂ 6