ಜೇಸಿ ಸಂಸ್ಥೆ ಉತ್ತಮ ಕೆಲಸಕ್ಕೆ ರಾಷ್ಟ್ರೀಯ ಪ್ರಶಸ್ತಿ: ಕೆ.ಎ.ಸುಜನ್‌

KannadaprabhaNewsNetwork | Published : May 2, 2024 12:19 AM

ಸಾರಾಂಶ

ನರಸಿಂಹರಾಜಪುರ, ಜೇಸಿ ಸಂಸ್ಥೆಗಳು ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಿದರೆ ರಾಷ್ಟ್ರೀಯ ಅಧ್ಯಕ್ಷರಿಂದ ಅವಾರ್ಡ ಪಡೆಯಬಹುದು ಎಂದು ಜೇಸಿ ವಲಯ 14 ರ ಉಪಾಧ್ಯಕ್ಷ ಕೆ.ಎ.ಸುಜನ್ ತಿಳಿಸಿದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಸದಸ್ಯರಿಗೆ ಘಟಕ ಅಭಿವೃದ್ಧಿ, ನಿರ್ವಹಣೆ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜೇಸಿ ಸಂಸ್ಥೆಗಳು ಜನರ ನೆನಪಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡಿದರೆ ರಾಷ್ಟ್ರೀಯ ಅಧ್ಯಕ್ಷರಿಂದ ಅವಾರ್ಡ ಪಡೆಯಬಹುದು ಎಂದು ಜೇಸಿ ವಲಯ 14 ರ ಉಪಾಧ್ಯಕ್ಷ ಕೆ.ಎ.ಸುಜನ್ ತಿಳಿಸಿದರು.

ಮಂಗಳವಾರ ಪಟ್ಟಣದ ಮೈಸ್‌ ಕಂಪ್ಯೂಟರ್‌ ತರಬೇತಿ ಸಭಾಂಗಣದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಸದಸ್ಯರಿಗೆ ಏರ್ಪಡಿಸಿದ್ದ ಘಟಕ ಅಭಿವೃದ್ಧಿ ಹಾಗೂ ನಿರ್ವಹಣೆ ತರಬೇತಿ ಕಾರ್ಯಾಗಾರದಲ್ಲಿ ತರಬೇತಿ ನೀಡಿ ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ಕೇಂದ್ರ ಕಚೇರಿಯಿಂದ ವಿದ್ಯಾರ್ಥಿಗಳ ಸ್ಕಾಲರ್‌ ಶಿಪ್‌ ಹಾಗೂ ಇತರೆ ಸೌಲಭ್ಯಗಳಿದ್ದು ಇದನ್ನು ಉಪಯೋಗಿಸಿಕೊಳ್ಳಬೇಕು. ಸಮಾಜದಲ್ಲಿ ಪ್ರಚಾರ ಬಯಸದೆ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವ ನೌಕರರನ್ನು ಗುರುತಿಸಿ ಸೆಲ್ಯೂಟ್‌ ದ ಸೈಲೆಂಟ್‌ ವರ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಬಹುದು. ರಕ್ತದಾನ ಶಿಬಿರ ನಡೆಸಬಹುದು. ಪ್ರಥಮ ಚಿಕಿತ್ಸೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬಹುದು ಎಂದು ಸಲಹೆ ನೀಡಿದರು. ನರಸಿಂಹರಾಜಪುರ ಜೇಸಿ ಸಂಸ್ಥೆ ಈ ವರ್ಷದಲ್ಲಿ ಉತ್ತಮ ಕಾರ್ಯ ಮಾಡಬಹುದು ಎಂದು ನಂಬಿಕೆ ಇಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿನ ಜೇಸಿ ಸಂಸ್ಥೆಗೆ ಉತ್ತಮ ರಾಷ್ಟ್ರೀಯ ತರಬೇತಿದಾರರನ್ನು ಕಳಿಸುತ್ತೇನೆ ಎಂದು ಭರವಸೆ ನೀಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಟಕ್ಷ ಎಂ.ಪಿ.ಮನು ಮಾತನಾಡಿ, ಮುಂದಿನ ದಿನಗಳಲ್ಲಿ ಜೇಸಿ ಸದಸ್ಯರಿಗೆ ನುರಿತ ತರಬೇತಿದಾರರಿಂದ ತರಬೇತಿ ನೀಡಲಾಗುವುದು. ಆರೋಗ್ಯ ಶಿಬಿರ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಇದೇ ಮೊದಲ ಬಾರಿಗೆ ನರಸಿಂಹರಾಜಪುರಕ್ಕೆ ಆಗಮಿಸಿದ ಜೇಸಿ ವಲಯ ಉಪಾಧ್ಯಕ್ಷ ಕೆ.ಎ.ಸುಜನ್‌ ಅವರಿಗೆ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸಭೆಯಲ್ಲಿ ಜೇಸಿ ಕಾರ್ಯದರ್ಶಿ ಕೆ.ಎಂ. ವಿನುತ್‌, ಉಪಾಧ್ಯಕ್ಷ ಅಪೂರ್ವ ರಾಘವೇಂದ್ರ, ಸಹ ಕಾರ್ಯದರ್ಶಿಗಳಾದ ದರ್ಶನ್‌, ಪವನಕರ್‌, ಸದಸ್ಯರಾದ ರಜಿತ್‌, ಆದರ್ಶ, ಪ್ರಮಾಂಕ್‌ ಇದ್ದರು.

Share this article