ಕನ್ನಡಪ್ರಭ ವಾರ್ತೆ ಪಾಂಡವಪುರ
ಸಂಘದ ಹಿಂದಿನ ಅಧ್ಯಕ್ಷ ದೇವರಾಜು ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಾಮೇಗೌಡ ಹೊರತು ಪಡಿಸಿ ಬೇರೆ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಆರ್.ನಿರ್ಮಲಾ ಘೋಷಿಸಿದರು.
ಸಂಘದ ನೂತನ ಅಧ್ಯಕ್ಷ ರಾಮೇಗೌಡರನ್ನು ಎಲ್ಲಾ ನಿರ್ದೇಶಕರು, ಮುಖಂಡರು ಅಭಿನಂದಿಸಿದರು. ಇದೇ ವೇಳೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಚಿನಕುರಳಿ ಸೊಸೈಟಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಪಿಎಲ್‌ಡಿ ನಿರ್ದೇಶಕ ಕುಮಾರ್ ಅವರನ್ನು ಡೈರಿ ವತಿಯಿಂದ ಅಭಿನಂದಿಸಲಾಯಿತು.ಈ ವೇಳೆ ಸಿ.ಶಿವಕುಮಾರ್ ಮಾತನಾಡಿ, ಡೈರಿಗಳು ಅಭಿವೃದ್ಧಿ ಹೊಂದಲು ರೈತರು ಗುಣಮಟ್ಟದ ಹಾಲು ಪೂರೈಸಬೇಕು. ಕಾರ್‍ಯದರ್ಶಿಗಳು-ರೈತರು ಜತೆಗೂಡಿ ಕೆಲಸ ಮಾಡಬೇಕು. ಆಡಳಿತ ಮಂಡಳಿ ಮತ್ತು ಷೇರುದಾರು ನನ್ನನ್ನು ಆಹ್ವಾನಿಸಿ ಪ್ರೀತಿಯಿಂದ ಅಭಿನಂದಿಸುವ ಮೂಲಕ ಜವಾಬ್ದಾರಿ ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಒಕ್ಕೂಟದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.