ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (National Testing Agency) ವತಿಯಿಂದ ನಡೆಸಲಾದ ಜೆಇಇ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ಜನವರಿ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಶ್ರೇಷ್ಠತೆ ಸಾಬೀತುಪಡಿಸಿದೆ.
ಕಾರ್ಕಳ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (National Testing Agency) ವತಿಯಿಂದ ನಡೆಸಲಾದ ಜೆಇಇ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ಜನವರಿ ಆವೃತ್ತಿಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜು ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಶ್ರೇಷ್ಠತೆ ಸಾಬೀತುಪಡಿಸಿದೆ.
ಬಿ.ಪ್ಲಾನಿಂಗ್ ವಿಭಾಗದಲ್ಲಿ ನಾಗದೇವ್ ಎಂ.ಜಿ. ಜನರಲ್ EWS ವಿಭಾಗದಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಅವರು 99.9762662 ಪರ್ಸೆಂಟೈಲ್ ಗಳಿಸಿ ರಾಷ್ಟ್ರ ಮಟ್ಟದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಸುಕ್ಷಿತ್ ಗಿರೀಶ್ ಗೌಡ 99.7769023, ಅಭಿರಾಮ್ ಭಟ್ ಜಿ.ಪಿ. 98.3718612, ದಿಶಾಂತ್ ಎಂ. 98.2152181, ನಿಶಾಂತ್ ಹೊನ್ನಾವರ 98.1107894, ಸಂವಿತ್ ಅಮಿತ್ ಗೋಕರ್ಣ 98.1107894 ಹಾಗೂ ನಿನಾದ್ ರಾಜೇಶ್ ನಾಯ್ಕ್ 98.0490815 ಪರ್ಸೆಂಟೈಲ್ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಬಿ.ಪ್ಲಾನಿಂಗ್‌ನಲ್ಲಿ 95 ಪರ್ಸೆಂಟೈಲ್ ಗಿಂತ ಮೇಲ್ಪಟ್ಟ 16 ಮಂದಿ ಹಾಗೂ 90 ಪರ್ಸೆಂಟೈಲ್ ಗಿಂತ ಮೇಲ್ಪಟ್ಟ 24 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಬಿ.ಆರ್ಕ್ ವಿಭಾಗದಲ್ಲೂ ನಾಗದೇವ್ ಎಂ.ಜಿ. 99.8371909 ಪರ್ಸೆಂಟೈಲ್ ಗಳಿಸಿ ಮೆರೆಯುವ ಸಾಧನೆ ಮಾಡಿದ್ದಾರೆ. ಚೇತನ ಟಿ.ಪಿ. 97.6986711, ಶಮಿತ್ ನಾಯಕ್ 97.4918595, ನಿಶಾಂತ್ ಹೊನ್ನಾವರ 97.4918595, ಅಮೃತ ಎಂ. ನಾಯಕ್ 97.3686526 ಹಾಗೂ ಸುಕ್ಷಿತ್ ಗಿರೀಶ್ ಗೌಡ 97.2542462 ಪರ್ಸೆಂಟೈಲ್ ಗಳಿಸಿದ್ದಾರೆ. ಬಿ.ಆರ್ಕ್ ವಿಭಾಗದಲ್ಲಿ 95 ಪರ್ಸೆಂಟೈಲ್ ಗಿಂತ 15 ಮಂದಿ ಮತ್ತು 90 ಪರ್ಸೆಂಟೈಲ್ ಗಿಂತ 34 ಮಂದಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ.
ವಿದ್ಯಾರ್ಥಿಗಳ ಈ ಅದ್ವಿತೀಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ. ಕ್ರಿಯೇಟಿವ್ ಕಾಲೇಜು ನಿರಂತರ ಪರಿಶ್ರಮ, ಗುಣಮಟ್ಟದ ತರಬೇತಿ ಹಾಗೂ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳನ್ನು ರಾಷ್ಟ್ರಮಟ್ಟದ ಸ್ಪರ್ಧೆಗೆ ಸಜ್ಜುಗೊಳಿಸುತ್ತಿರುವುದು ಫಲಿತಾಂಶದಿಂದ ಸ್ಪಷ್ಟವಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.