ಪ್ರತಿಸ್ಪಂದನ, ಆತ್ಮಾವಲೋಕನ ಬದುಕಿಗೆ ಅಗತ್ಯ: ಡಾ.ವೀಣಾ ಬನ್ನಂಜೆ

KannadaprabhaNewsNetwork |  
Published : Oct 30, 2026, 03:15 AM IST
ಶಿಮಂತೂರುನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಅಧಿವೇಶನ  | Kannada Prabha

ಸಾರಾಂಶ

ಆತ್ಮಬೋಧನೆ ಸರಿಯಾಗಿ ನಿರ್ವಹಿಸದ ಕಾರಣ ವಿಶ್ವಬೋಧನೆ ದಿಕ್ಕುತಪ್ಪುತ್ತಿದೆ. ಯುವ ಜನತೆಗೆ ಜೀವ ಸ್ಪಂದನದ ಕಾರ್ಯಕ್ಕೆ ಗಮನ ಕೊಡದ ಕಾರಣದಿಂದಾಗಿ ಸಿಜೆಪಿಯಂಥವುಗಳು ಹುಟ್ಟಿಕೊಳ್ಳುತ್ತವೆ. ಪ್ರತಿಸ್ಪಂದನದ ಬಗ್ಗೆ ಆತ್ಮಾವಲೋಕನದ ಅವಶ್ಯಕತೆ ಇದ್ದು, ನಾವು ನಡೆಯಬೇಕಾದ ಆತ್ಮಾವಲೋಕನವೇ ನಿಜವಾದ ಆತ್ಮಬೋಧನೆ ಎಂದು ಲೇಖಕಿ ಹಾಗೂ ವಿದ್ವಾಂಸೆ ಡಾ.ವೀಣಾ ಬನ್ನಂಜೆ ಹೇಳಿದರು.

ಮೂಲ್ಕಿ: ಆತ್ಮಬೋಧನೆ ಸರಿಯಾಗಿ ನಿರ್ವಹಿಸದ ಕಾರಣ ವಿಶ್ವಬೋಧನೆ ದಿಕ್ಕುತಪ್ಪುತ್ತಿದೆ. ಯುವ ಜನತೆಗೆ ಜೀವ ಸ್ಪಂದನದ ಕಾರ್ಯಕ್ಕೆ ಗಮನ ಕೊಡದ ಕಾರಣದಿಂದಾಗಿ ಸಿಜೆಪಿಯಂಥವುಗಳು ಹುಟ್ಟಿಕೊಳ್ಳುತ್ತವೆ. ಪ್ರತಿಸ್ಪಂದನದ ಬಗ್ಗೆ ಆತ್ಮಾವಲೋಕನದ ಅವಶ್ಯಕತೆ ಇದ್ದು, ನಾವು ನಡೆಯಬೇಕಾದ ಆತ್ಮಾವಲೋಕನವೇ ನಿಜವಾದ ಆತ್ಮಬೋಧನೆ ಎಂದು ಲೇಖಕಿ ಹಾಗೂ ವಿದ್ವಾಂಸೆ ಡಾ.ವೀಣಾ ಬನ್ನಂಜೆ ಹೇಳಿದರು.ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಶಿಮಂತೂರು ಶ್ರೀ ಆದಿಜನಾರ್ದನ ದೇವಸ್ಥಾನದ ಸಭಾಂಗಣದಲ್ಲಿ ಆತ್ಮಬೋಧೆಯಿಂದ ವಿಶ್ವಬೋಧೆಯೆಡೆಗೆ ಧೈರ್ಯದೊಂದಿಗೆ ನಡೆದ ಜಿಲ್ಲಾ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

ನಮ್ಮ ಹಿರಿಯರ ಆರೋಗ್ಯ ನಮಗಿಲ್ಲ. ನಮ್ಮ ಆರೋಗ್ಯ ನಮ್ಮ ಮಕ್ಕಳಿಗಿಲ್ಲ. ಇದಕ್ಕೆ ಕಾರಣ ನಾವು ತಿನ್ನುವ ವಿಷಕಾರಿ ಆಹಾರಗಳು ಒಳ್ಳೆಯ ಆಹಾರ ನೀಡದ ರೈತ-ಉತ್ತಮ ಸಾಹಿತ್ಯ ನೀಡದ ಸಾಹಿತಿ, ಇವೆರಡು ಸರಿಯಾಗದೆ ಆತ್ಮಬೋಧನೆಯಾಗದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಅವರು ಶ್ಯಾಮಲಾತನಯ ಸಂಪಾದಕತ್ವದ ಕಾಲುಚಕ್ರ ಮತ್ತು ಪಾದಮಂಡಲ ಕೃತಿ ಬಿಡುಗಡೆಗೊಳಿಸಿ, ಮಾತನಾಡಿ, ಸರ್ಕಾರದ ಗೊಂದಲದಿಂದ ಸಾಹಿತ್ಯ ಕೃಷಿ ಕ್ಷೀಣಿಸಿದ್ದು, ಹಿರಿಯ ಸಾಹಿತಿಗಳು ಮಕ್ಕಳಿಗೆ ಸಾಹಿತ್ಯದ ಅಭಿರುಚಿ ಬೆಳೆಸಲು ಕಾರ್ಯಸೂಚಿ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಅ ಭಾ ಸಾ ಪ ಕ .ದ .ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣೇಶ್ ಅಡಿಗ ಪ್ರಸ್ತಾವಿಸಿದರು. ವಿಜಯಲಕ್ಷ್ಮೀ ಕಟೀಲು ನಿರೂಪಿಸಿದರು. ಬಳಿಕ ನಡೆದ ಸಾಹಿತ್ಯ ಗೋಷ್ಠಿಯಲ್ಲಿ ಸಂಸ್ಕೃತ ಸಾಹಿತ್ಯದಲ್ಲಿ ವಿಶ್ವಬೋಧೆ ಕುರಿತು ಮಂಗಳೂರು ಕೆನರಾ ಪ.ಪೂ. ಕಾಲೇಜು ಉಪನ್ಯಾಸಕ ಡಾ.ಮಧುಕೇಶ್ವರ ಶಾಸ್ತ್ರಿ, ಕನ್ನಡ ಸಾಹಿತ್ಯದಲ್ಲಿ ವಿಶ್ವಬೋಧೆ ಕುರಿತು ಲೇಖಕ ರೋಹಿತ್ ಚಕ್ರತೀರ್ಥ, ತುಳು ಸಾಹಿತ್ಯ ವಿಶ್ವಬೋಧೆ ಕುರಿತು ಯಕ್ಷಗಾನ ಗುರು ದೀವಿತ್ ಎಸ್.ಕೆ.ವೆರಾಡಿ ಸಾಹಿತ್ಯ ಗೋಷ್ಠಿ ನೆರವೇರಿಸಿಕೊಟ್ಟರು. ಅನಿತಾ ಶೆಟ್ಟಿ ಮೂಡುಬಿದಿರೆ ನಿರೂಪಿಸಿದರು.

ಬಹುಭಾಷಾ ಕವಿಗೋಷ್ಠಿ: ಹಿರಿಯ ಸಾಹಿತಿ ಶ್ರೀಧ‌ರ್ ಡಿ.ಎಸ್.ಅಧ್ಯಕ್ಷತೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ 27 ಭಾಷೆಗಳ ಸಾಹಿತಿಗಳು ಕವನ ವಾಚಿಸಿದರು.

ಸಮಾರೋಪ ಸಮಾರಂಭದಲ್ಲಿ ಅ ಭಾ ಸಾ ಪ ಕ ಪೂರ್ವಾಧ್ಯಕ್ಷ ಹಾಗೂ ಹಿರಿಯ ಸಾಹಿತಿ ಪ್ರೊ.ಪ್ರೇಮಶೇಖ‌ರ್ ಸಮಾರೋಪ ಭಾಷಣಗೈದರು. ಜಿಲ್ಲಾ ಸಮಿತಿಯ ಅಧ್ಯಕ್ಷೆ ವೀಣಾ ಟಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರ ನಷ್ಟ ತಡೆಗೆ ಹಾಲಿನ ದರ 8 ರು. ಏರಿಕೆ - ಯಾವ ಪ್ಯಾಕೆಟ್‌ ಹಾಲಿಗೆ ಎಷ್ಟು?
ರೇ* ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ