ವಿಶಿಷ್ಟ ಸುದ್ದಿಗಳ ಮೂಲಕ ಪತ್ರಕರ್ತರು ಗುರುತಿಸಿಕೊಳ್ಳಬಹುದು

KannadaprabhaNewsNetwork |  
Published : Apr 04, 2026, 01:15 AM IST
೩ಕೆಎಲ್‌ಆರ್-೧ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ೨೦೨೪ನೇ ಸಾಲಿನಲ್ಲಿ ಸುಣ್ಣವಂಡ ಶ್ರೀನಿವಾಸ್ ಚಂಗಪ್ಪ ಪ್ರಶಸ್ತಿಗೆ ಭಜನರಾದ ಮುಳಬಾಗಿಲಿನ ಹಿರಿಯ ಪತ್ರಕರ್ತರಾದ ಎ.ಅಪ್ಪಾಜಿಗೌಡ ಮತ್ತು ಮಂಡ್ಯದ ಕೆ.ಪ್ರಹ್ಲಾದ ರಾವ್ ಪ್ರಶಸ್ತಿಗೆ ಭಜನರಾದ ಬಂಗಾರಪೇಟೆ ವರದಿಗಾರ ಕೆ.ರಮೇಶ್‌ರಿಗೆ ಕೋಲಾರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂಧಿಸುತ್ತಿರುವುದು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಇದ್ದರು. | Kannada Prabha

ಸಾರಾಂಶ

ವಾಸುದೇವ ಹೊಳ್ಳ ಮಾತನಾಡಿ, ಪ್ರಶಸ್ತಿಗೆ ಭಜನರಾದವರನ್ನು ಅಭಿನಂಧಿಸಿ ಗೌರವಿಸಬೇಕಾಗಿರುವುದು ಪ್ರತಿಯೊಬ್ಬ ಪತ್ರಕರ್ತರ ಜವಾಬ್ದಾರಿ, ಅಭಿನಂದಿಸಿ ಗೌರವಿಸುವುದು ಇತರೆ ಪತ್ರಕರ್ತರಿಗೆ ಪೇರಣೆಯಾಗಲಿದೆ ಎಂದರು.

ಕನ್ನಡಪ್ರಭ ವಾರ್ತೆ ಕೋಲಾರಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಜನರು ಗುರುತಿಸಿ ಶ್ಲಾಘಿಸುವಂತೆ ಆದಾಗ ಮಾತ್ರ ಪತ್ರಕರ್ತರಾಗಿರುವುದು ಸಾರ್ಥಕವಾಗುತ್ತದೆ. ಸುದ್ದಿಗಳು ಕಾಪಿ ರೈಟ್ ಇಲ್ಲದೆ ವಿಭಿನ್ನ, ವಿಶಿಷ್ಟತೆ ಹೊಂದಿದ ಸುದ್ದಿಗಳನ್ನು ಬರೆಯುವ ಮೂಲಕ ಓದುಗರ ಗಮನ ಸೆಳೆಯುವಂತೆ ಆದಾಗ ಮಾತ್ರ ಪತ್ರಕರ್ತರು ಪ್ರತಿಭಾವಂತರಾಗಿ ಸಮಾಜದಲ್ಲಿ ಗುರುತಿಸಲು ಸಾಧ್ಯ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ೨೦೨೪ನೇ ಸಾಲಿನಲ್ಲಿ ಸುಣ್ಣವಂಡ ಶ್ರೀನಿವಾಸ್ ಚಂಗಪ್ಪ ಪ್ರಶಸ್ತಿಗೆ ಭಜನರಾದ ಮುಳಬಾಗಿಲಿನ ಹಿರಿಯ ಪತ್ರಕರ್ತರಾದ ಎ.ಅಪ್ಪಾಜಿಗೌಡ ಮತ್ತು ಮಂಡ್ಯದ ಕೆ.ಪ್ರಹ್ಲಾದ ರಾವ್ ಪ್ರಶಸ್ತಿಗೆ ಭಜನರಾದ ಬಂಗಾರಪೇಟೆ ವರದಿಗಾರ ಕೆ.ರಮೇಶ್‌ರಿಗೆ ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅಭಿನಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತೆ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ಸ್ವಲ್ಪ ತಡವಾಗಿಯಾದರೂ ಪ್ರಶಸ್ತಿ ಸಿಗುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸಂಘದ ರಾಜ್ಯ ಖಜಾಂಜಿ ವಾಸುದೇವ ಹೊಳ್ಳ ಮಾತನಾಡಿ, ಪ್ರಶಸ್ತಿಗೆ ಭಜನರಾದವರನ್ನು ಅಭಿನಂಧಿಸಿ ಗೌರವಿಸಬೇಕಾಗಿರುವುದು ಪ್ರತಿಯೊಬ್ಬ ಪತ್ರಕರ್ತರ ಜವಾಬ್ದಾರಿ, ಅಭಿನಂದಿಸಿ ಗೌರವಿಸುವುದು ಇತರೆ ಪತ್ರಕರ್ತರಿಗೆ ಪೇರಣೆಯಾಗಲಿದೆ ಎಂದರು. ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕ ವಿ.ಮುನಿರಾಜು ಮಾತನಾಡಿ, ಪತ್ರಕರ್ತರಾದ ಅಪ್ಪಾಜಿಗೌಡರು ಮತ್ತು ಕೆ.ರಮೇಶ್‌ರನ್ನು ರಾಜ್ಯ ಪತ್ರಕರ್ತರ ಸಂಘ ಗುರುತಿಸಿ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣ, ಪ್ರಶಸ್ತಿಗೆ ಇಬ್ಬರು ಅರ್ಹರಾಗಿರುವ ಪತ್ರಕರ್ತರಾಗಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಪಾ,ಶ್ರೀ. ಅನಂತರಾಮ್ ಮಾತನಾಡಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವ ಅಪ್ಪಾಜಿಗೌಡರು ಮತ್ತು ಕೆ.ರಮೇಶ್ ಇಬ್ಬರೊಂದಿಗೆ ತಮ್ಮ ಒಡನಾಟ ನೆನಪಿಸಿದ ಅವರು ಜಿಲ್ಲಾ ಪತ್ರಕರ್ತರ ಸಂಘವು ಇವರನ್ನು ಅಭಿನಂದಿಸಿ ಗೌರವಿಸುತ್ತಿರುವುದು ಸಮಂಜಸ ಎಂದರು. ನಿಕಟ ಪೂರ್ವ ಹಿರಿಯ ಪತ್ರಕರ್ತರಾದ ಬಿ.ವಿ. ಗೋಪಿನಾಥ್ ಮಾತನಾಡಿ, ಪತ್ರಿಕೋದ್ಯಮದಲ್ಲಿ ಈ ಹಿಂದೆ ಇದ್ದಂತ ಕಾಳಜಿಯು ತೀರಾ ಕಡಿಮೆಯಾಗಿದ್ದು, ಬಹತೇಕ ಕಟ್ ಅಂಡ್ ಪೇಸ್ಟ್ ವರದಿಗಳು ಸ್ಥಳೀಯ ಪತ್ರಿಕೆಗಳಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿ. ನಕಲಿ ಪತ್ರಕರ್ತರ ನಡುವೆಯು ನೈಜ ಪತ್ರಕರ್ತರನ್ನು ರಾಜ್ಯ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದಕ್ಕೆ ಕೋಲಾರ ಜಿಲ್ಲೆಯ ಪತ್ರಕರ್ತರ ಸಂಘದಿಂದ ಅಭಿನಂದಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.ಹಿರಿಯ ಪತ್ರಕರ್ತ ಪಿಟಿಐ ಸುರೇಶ್ ಬಿ., ಸಿ.ಜಿ.ಮುರಳಿ, ಮುಳಬಾಗಿಲಿನ ಪ್ರಕಾಶ್, ದೇವಾನಂದ್, ಬಂಗಾರಪೇಟೆ ನಾಗರಾಜ್, ಶ್ರೀನಿವಾಸಪುರ ಬಾಬು, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಜಿ.ಸುರೇಶ್ ಕುಮಾರ್ ಪ್ರಸ್ತಾವಿಕ ನುಡಿಗಳಾಡಿದರು. ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಸಿ.ವಿ.ನಾಗರಾಜ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಮರಹಾನ್ಕುಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ
ಹೋಟೆಲ್ ಕಾರ್ಮಿಕನ ಹತ್ಯೆ ಖಂಡಿಸಿ ಪ್ರತಿಭಟನೆ