ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಪಟ್ಟಣ ಸಮೀಪದ ಬೆಲಸಿಂದ ಪ್ರಕೃತಿವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2026ನೇ ಸಾಲಿನ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾರಂಗ ತಂತ್ರಜ್ಞಾನದ ಮೂಲಕ ಅತಿ ವೇಗವಾಗಿ ಉನ್ನತ ಮಟ್ಟಕ್ಕೆ ಹೋಗುತ್ತಿದೆ, ಇದು ಹೆಮ್ಮೆಯ ವಿಚಾರವಾದರೂ ಸಾಮಾಜಿಕ ತಾಣಗಳ ಭರಾಟೆಯಿಂದ ಸುದ್ದಿಯ ನೈಜತೆ ಕ್ಷೀಣಿಸುತ್ತಿದೆ. ಪತ್ರಿಕಾರಂಗ ಸತ್ಯಕ್ಕೆ ಹತ್ತಿರವಾಗಿ ಸುದ್ದಿ ನೀಡುವ ಕೆಲಸ ಮಾಡುತ್ತಿದೆ. ದೃಶ್ಯ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ನೀಡುವ ಆತುರದಲ್ಲಿ ತಪ್ಪು ಸುದ್ದಿ ನೀಡದಂತೆ ಎಚ್ಚರವಹಿಸುವುದು ಅಗತ್ಯವೆಂದರು. ಚನ್ನರಾಯಪಟ್ಟಣ ತಾಲೂಕು ಪತ್ರಕರ್ತರ ಸಂಘ ಸದೃಢವಾಗಿದ್ದು, ಸಂಘಕ್ಕೆ ಈ ಹಿಂದೆ ಅಧ್ಯಕ್ಷರಾಗಿದ್ದವರು ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲರೂ ಒಟ್ಟುಗೂಡಿ ಸಂಪನ್ಮೂಲ ಕ್ರೂಢೀಕರಿಸಿ ಸಂಘವನ್ನು ಉನ್ನತಮಟ್ಟಕ್ಕೆ ತಂದಿದ್ದಾರೆ. ತಾವು 12 ಲಕ್ಷ ರು. ಕ್ಷೇಮನಿಧಿಗೆ ಸಹಕಾರ ನೀಡಿದ್ದು, ಇದರಿಂದ ಸಂಘ ಅರ್ಥಿಕವಾಗಿ ಸದೃಡವಾಗಿದೆ ಎಂದು ತಿಳಿಸಿದರು.
ವಿತರಕರ ಸಂಘದ ಶ್ರೇಯೋಭಿವೃದ್ಧಿ ನಿಧಿಗೆ ಹಣ ಕ್ರೋಢೀಕರಿಸುವ ಭರವಸೆ ನೀಡಿದ್ದು, ಆಶ್ವಾಸನೆಯಂತೆ ಶೀಘ್ರ ಹಣ ನೀಡಲಾಗುವುದು ಎಂದ ಅವರು, ಪತ್ರಕರ್ತರ ಬೇಡಿಕೆಯಂತೆ ಪಟ್ಟಣ ವ್ಯಾಪ್ತಿಯಲ್ಲಿ ನಿವೇಶನ ಹಂಚಿಕೆಗಾಗಿ ಸೂಕ್ತ ಜಾಗದ ಹುಡು ಕಾಟದಲ್ಲಿದ್ದು ಅವರ ಬೇಡಿಕೆ ಪೂರೈಸಲು ಬದ್ಧವೆಂದರು. ಪತ್ರಕರ್ತರ ಸಂಘದ ರಾಜಾಧ್ಯಕ್ಷ ಶಿವಾನಂದ ತಗಡೂರು ಅವರು ಮಾತನಾಡಿ, ಕನ್ನಡ ಪತ್ರಿಕೆ ಹುಟ್ಟಿದ ಸವಿನೆನಪಿಗೆ ರಾಜ್ಯದೆಲ್ಲೆಡೆ ಪತ್ರಿಕಾ ದಿನಾಚರಣೆ ಆಚರಿಸುತ್ತಿದ್ದು, ಜುಲೈ ಮಾಹೆ ಪೂರ್ಣ ಆಚರಿಸಲಾಗುವ ಪತ್ರಕರ್ತರ ಕುಟುಂಬದ ಕಾರ್ಯಕ್ರಮ ಇದಾಗಿದೆ. ದೇಶಕ್ಕೆ ಅಹಿಂಸೆ ಸಾರಿದ ಕ್ಷೇತ್ರದಲ್ಲಿರುವ ಇಲ್ಲಿನ ಪತ್ರಕರ್ತರ ಸಂಘ ವಿಶೇಷವಾಗಿದ್ದು, ರಾಜ್ಯಕ್ಕೆ ಮಾದರಿಯಾದ ಪತ್ರಕರ್ತರ ಭವನ ನಿರ್ಮಿಸಿ, ಕ್ಷೇಮನಿಧಿ ಸ್ಥಾಪಿಸಿ ಪತ್ರಕರ್ತರ ಸಮಸ್ಯೆ, ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಪತ್ರಕರ್ತರಾದವರಿಗೆ ಸಾಮಾಜಿಕ ಬದ್ಧತೆ, ವಿಶ್ವಾರ್ಹತೆ, ಅಭಿವೃದ್ಧಿಗೆ ಕನ್ನಡಿ ಇಡಿಯುವ, ಸಮಾಜವನ್ನು, ಹೃದಯವನ್ನು ಬೆಸೆಯುವ ಕೆಲಸ ಮಾಡಬೇಕು. ಕೆಟ್ಟ ಹೆಸರು, ಪರಂಪರೆಗೆ ಪತ್ರಕರ್ತರು ಮುಂದಾಗಬಾರದೆಂದು ಕಿವಿಮಾತು ಹೇಳಿದರು.ಬಿಜೆಪಿ ಮುಖಂಡ ಸಿ. ಆರ್. ಚಿದಾನಂದ್, ರಾಜ್ಯ ಉಪಾಧ್ಯಕ್ಷ ಎಚ್. ಬಿ. ಮದನ್ ಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ. ಆರ್. ಕೆಂಚೇಗೌಡ ಮಾತನಾಡಿದರು. ಉಪಾಧ್ಯಕ್ಷ ಪ್ರಕಾಶ್, ರಾಜ್ಯ ಕಾರಕಾರಿಣಿ ಸದಸ್ಯ ಕೆ.ಪಿ.ಎಸ್. ಪ್ರಮೋದ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಲ್. ಪಿ. ಪ್ರಕಾಶ್‍ಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ದಯಾನಂದ್, ಉಪಾಧ್ಯಕ್ಷ ನಂದನ್ ಪುಟ್ಟಣ್ಣ, ಜಿಲ್ಲಾ ನಿರ್ದೇಶಕ ಬಿ. ಸಿ. ಚನ್ನೇಗೌಡ, ಕಸಾಪ ಅಧ್ಯಕ್ಷ ಎಚ್. ಎನ್. ಲೋಕೇಶ್ ವೇದಿಕೆಯಲ್ಲಿದ್ದರು. ಮುಖಂಡರಾದ ಅಣತಿ ಆನಂದ್, ಸಿ. ಎನ್. ಶಶಿಧರ್, ಶಶಾಂಕ್ ಗೋಪಾಲಸ್ವಾಮಿ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್, ನಿರ್ದೇಶಕ ನಾಗರಾಜ್, ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಪತ್ರಿಕಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ವರ್ಷ ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಪತ್ರಕರ್ತರು ಒತ್ತಡವನ್ನು ಮರೆತು ಕುಟುಂಬ ಸಮೇತ ಭಾಗವಹಿಸಿರುವುದು ಸಂತೋಷದಾಯಕ, ನಿಮ್ಮ ಕಾರ್ಯಕ್ರಮಕ್ಕೆ ಸತತವಾಗಿ ಮೂರು ವರ್ಷಗಳಿಂದ ಬರುತ್ತಿದ್ದೇನೆ, ಇದು ನನಗೆ ಖುಷಿ ತಂದಿದೆ. ರಾಜಕಾರಣಿಗಳು ಮಾಡುವ ತಪ್ಪನ್ನು ಎತ್ತಿತೋರಿಸುವ ಕೆಲಸ ಮಾಡುತ್ತಿದ್ದಾರೆ.
ಭೂಮಿ ಕ್ಷೇಮಾಭಿವೃದ್ಧಿ ಸಂಘದ ರಾಜಕುಮಾರ್, ಡಾ. ಧರಣೇಶ್ ಇತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತಲ್ಲದೆ. ತಾಲೂಕಿನ ಪತ್ರಕರ್ತರಾದ ಶ್ರೀನಿವಾಸ್ ಉಳ್ಳಾವಳ್ಳಿ, ನಾಗೇಂದ್ರ, ವಿತರಕರಾದ ವೆಂಕಟೇಶ್ ಪ್ರಸಾದ್, ಕೃಷ್ಣಪ್ರಸಾದ್ ಅವರನ್ನು ಗೌರವಿಸಲಾಯಿತು. ಪತ್ರಕರ್ತರು ಹಾಗೂ ಅವರ ಕುಟುಂಬದವರು ವಿವಿಧ ಆಟಗಳಲ್ಲಿ ಸ್ಪರ್ಧಿಸಿ ಬಹುಮಾನಗಳನ್ನು ಗೆದ್ದು ಸಂಭ್ರಮಿಸಿದರು.